ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ 2021ರ ಮಾರುತಿ ಸುಜುಕಿ ಬಲೆನೊ ಕಾರು
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ . ಬಲೆನೊ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ.

2021ರ ಮಾರುತಿ ಸುಜುಕಿ ಬಲೆನೊ ಕಾರು ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಫೀಚರ್ ಗಳ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಮಾರುತಿ ಸುಜುಕಿ ಕಂಪನಿಯು ಹೊಸ ಬಲೆನೊ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗಪಡಿಸಿಲ್ಲ. ಇನ್ನು ಹೊಸ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಅಳಡಿಸಬಹುದು. ಕೆಲವು ವರದಿಗಳ ಪ್ರಕಾರ 1.2ಎಲ್ ಡ್ಯುಯಲ್ ಜೆಟ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಅಳವಡಿಸಬಹುದು.

ಇದರೊಂದಿಗೆ 1.0ಎಲ್ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಮರಳಿ ತರಬಹುದು ಎಂಬ ವದಂತಿ ಇದೆ. ವರದಿಗಳ ಪ್ರಕಾರ ಹೊಸ ಮಾರುತಿ ಬಲೆನೊ ಕಾರನ್ನು 48ವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪರಿಚಯಿಸಬಹುದು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಕಳೆದ ವರ್ಷ ಬಿಡುಗಡೆಗೊಳಿಸಿದ ಬಲೆನೊ ಟೀಸರ್ ವೀಡಿಯೋದಲ್ಲಿ 'ಎ ಬಿಗ್ ಸರ್ಪ್ರೈಸ್ ಕಮಿಂಗ್ ಸೂನ್ ಎಂಬ'ಟ್ಯಾಗ್‌ಲೈನ್ ಅನ್ನು ಹೊಂದಿತ್ತು. ಇದು ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ಬಲೆನೊ ಹ್ಯಾಚ್‌ಬ್ಯಾಕ್‌ನಲ್ಲಿ ಅತ್ಯಾಕರ್ಷಕ ನವೀಕರಣವನ್ನು ಪರಿಚಯಿಸಲಿದ್ದಾರೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

ಈ ಮಾರುತಿ ಸುಜುಕಿ ಬಲೆನೊ ಕಾರು ಈಗಾಗಲೇ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಮಾರುತಿ ಸುಜುಕಿಯು ಬಾಷ್ ಸಹಯೋಗದೊಂದಿಗೆ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಇದರ ಬಗ್ಗೆ ಮಾರುತಿ ಸುಜುಕಿ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಮಾರುತಿ ಸುಜುಕಿ ಬಲೆನೊ ಕಾರು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆ ಪವೇಶಿಸಲಿದೆ ಎಂದು ನಿರೀಕ್ಷಿಸುತ್ತೇವೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ 2015ರ ಅಕ್ಟೋಬರ್ ತಿಂಗಳಲ್ಲಿ ಬಲೆನೊ ಬಿ2 ವಿಭಾಗದ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಮಾರುತಿ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಮಾರುತಿ ಸುಜುಕಿ ಕಂಪನಿಯ ಪ್ರೀಮಿಯಂ ನೆಕ್ಸಾ ಡೀಲರ್ ಮೂಲಕ ಮಾರಾಟ ಮಾಡಲಾಗುತ್ತಿದೆ. ವರ್ಷಗಳಲ್ಲಿ ಬಲೆನೊ ಕಾರುಗಳ ಮಾರಾಟವು ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಬಲೆನೊ ಹ್ಯಾಚ್‌ಬ್ಯಾಕ್ ಐದನೇ ತಲೆಮಾರಿನ ಹರ್ಟೆಕ್ಟ್ ಅರ್ಟಿಟೆಕ್ಜರ್ ಅನ್ನು ಆಧರಿಸಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಬಲೆನೊ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿ ಕೇವಲ ಅರ್ಧ ದಶಕವಾಗಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಬಲೆನೊ ಕಾರು ಭಾರತದಲ್ಲಿ ಎಂಟು ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಆತಿ ಹೆಚ್ಚು ವೇಗವಾಗಿ ಮಾರಾಟವಾಗುವ ಹ್ಯಾಚ್‌ಬ್ಯಾಕ್ ಇದಾಗಿದೆ.

ಇಂಡೋ-ಜಪಾನೀಸ್ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 1.5 ಎಲ್ ಡೀಸೆಲ್ ಎಂಜಿನ್ ಅನ್ನು ಮತ್ತೆ ಪರಿಚಯಿಸಲಿದೆ ಎಂದು ವರದಿಯಾಗಿದೆ. ಇದು ಮಾರುತಿ ಸುಜುಕಿ ಎರ್ಟಿಗಾ ಮತ್ತು ಹೊಸ ತಲೆಮಾರಿನ ವಿಟಾರಾ ಬ್ರೆಝಾ ಮಾದರಿಗಳಲ್ಲಿ ಅಳವಡಿಸಬಹುದು.


Click it and Unblock the Notifications