ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಮಾರುತಿ ಎಸ್-ಪ್ರೆಸ್ಸೊ
ಎಂಟ್ರಿ ಲೆವೆಲ್ ಮೈಕ್ರೊ ಎಸ್‌ಯುವಿಯಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಎಸ್-ಪ್ರೆಸ್ಸೊ ಕಾರು ಕಡಿಮೆ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

2021ರ ಜೂನ್ ತಿಂಗಳಿನಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊದ 4,926 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಎಸ್-ಪ್ರೆಸ್ಸೊದ 3,160 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಹೋಲಿಸಿದರೆ ಕಳೆದ ತಿಂಗಳು ಮಾರಾಟದಲ್ಲಿ ಶೇ.56 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕೊರೋನಾ ಆತಂಕ ನಡುವೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಉತ್ತಮವಾಗಿ ಮಾರಾಟವಾಗಿದೆ.

ಎಂಟ್ರಿ ಲೆವೆಲ್ ಈ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.78 ಲಕ್ಷಗಳಾಗಿದೆ. ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಜನರಿಗಾಗಿ ಕೈಗೆಟಕುವ ದರದಲ್ಲಿ ಈ ಮಿನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದರಿದ ಮಧ್ಯಮ ವರ್ಗದ ಜನರಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿ 998 ಸಿಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ 67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ನೀಡಲಾಗಿದೆ.

ಮಾರುತಿ ಎಸ್-ಪ್ರೆಸ್ಸೊ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗನ್ನು ನೀಡುತ್ತವೆ.

ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್ ನಲ್ಲಿ ಹಲವು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಕೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ ಮತ್ತು ಆರೇಂಜ್ ಕಲರ್ ಆಕ್ಸೆಂಟ್ ಅನ್ನು ಒಳಗೊಂಡಿದೆ,

ಇದರಲ್ಲಿ ಕೀ ಲೆಸ್ ಎಂಟ್ರಿ, ಬ್ಲೂಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲ ನೂತನ ಫೀಚರ್ಸ್‌ಗಳನ್ನು ಹೊಂದಿವೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಸದ್ಯ ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಗರನ್ನು ಸೆಳೆಯುಯಲ್ಲಿ ಉತ್ತಮವಾಗಿ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಕೊರೋನಾ ಆತಂಕ ನಡುವೆಯು ಕಳೆದ ತಿಂಗಳಿನಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಉತ್ತಮವಾಗಿ ಮಾರಾಟವಾಗಿದೆ.


Click it and Unblock the Notifications