ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ವ್ಯಾಗನಾರ್ ಕೇವಲ 30 ತಿಂಗಳಲ್ಲಿ 4 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದೆ. ಈ ಮಾರಾಟದ ಅಂಕಿಅಂಶಗಳು ಕೇವಲ ಮೂರನೇ ತಲೆಮಾರಿನ ಮಾದರಿಯನ್ನು ಮಾತ್ರ ಒಳಗೊಂಡಿವೆ. ಇದರ ಪರಿಣಾಮವಾಗಿ, ವ್ಯಾಗನಾರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರಾಂಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಇದು ದೇಶದಲ್ಲಿ ಮಾರುತಿ ಸುಜುಕಿಯ ಅತಿ ಹೆಚ್ಚು ಮಾರಾಟವಾದ ಸಿಎನ್‌ಜಿ ವಾಹನವಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಈ ಮಾರುತಿ ವ್ಯಾಗನ್‍ಆರ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,4.19 ಲಕ್ಷಗಳಾಗಿದೆ. ಇನ್ನು ದೇಶದಲ್ಲಿ ಇಂದನ ಬೆಲೆಯು ಹೆಚ್ಚಳವಾಗಿದೆ. ಇದರಿಂದ ಹೆಚ್ಚಿನ ಗ್ರಾಹಕರು ವ್ಯಾಗನ್ಆರ್ ಸಿಎನ್‌ಜಿ ಮಾದರಿಯನ್ನು ಖರೀದಿಸುತ್ತಿದ್ದಾರೆ. ಇನ್ನು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದ್ದ ವ್ಯಾಗನ್ಆರ್ ಸಿಎನ್‌ಜಿ ಮಾದರಿಯನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ್ದರು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಆರಂಭದಲ್ಲಿ ಈ ಕಾರನ್ನು ವೈಟ್, ಗ್ರೇ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿತ್ತು. ನಂತರ ಪೂಲ್ಸೈಡ್ ಬ್ಲೂ, ನಟ್ಮ್ಯಾಗ್ ಬ್ರೌನ್ ಮತ್ತು ಅಟ್ಮನ್ ಆರೆಂಜ್ ಬಣ್ಣಗಳನ್ನು ಸೇರಿಸಿದ್ದರು. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಕಾರು ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ಇದನ್ನು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ, ಇದರಲ್ಲಿ ಸುರಕ್ಷತೆಗಾಗಿ ಡ್ರೈವರ್-ಸೈಡ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರ ಪೀಚರ್ ಗಳನ್ನು ಒಳಗೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಇನ್ನು ಎಲ್‌ಎಕ್ಸ್‌ಐ(ಒ) ರೂಪಾಂತರದಲ್ಲಿ ಪ್ರಯಾಣಿಕರ ಬದಿಯ ಏರ್‌ಬ್ಯಾಗ್ ಮತ್ತು ಹೊಸ ಫೀಚರ್ ಗಳನ್ನು ಹೊಂದಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು 33.54 ಕಿಮೀ ಮೈಲೇಜ್ ಅನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಇನ್ನು ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಡ್ಯುಯಲ್ ಇಸಿಯುಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಿಎನ್‌ಜಿ ಮಾದರಿಗಳಲ್ಲಿ ವ್ಯಾಗನ್ಆರ್ ಸಿಎನ್‌ಜಿ ಅಗ್ರಸ್ಥಾನದಲ್ಲಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಮಾರುತಿ ಸುಜುಕಿ ತನ್ನ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.5.13 ಲಕ್ಷಗಳಾಗಿದೆ. ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯು ವ್ಯಾಗನಾರ್ ಕಾರಿನ ಸ್ಪೆಷಲ್ ಎಡಿಷನ್ ಆಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಹೊಸ ಮಾರುತಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮುಂಭಾಗ ಮತ್ತು ಹಿಂಭಾಗದ ಬಂಪರ್ ಪ್ರೊಟೆಕ್ಟರ್‌ಗಳು, ವ್ಹೀಲ್ ಆರ್ಚ್ ಕ್ಲಾಡಿಂಗ್, ಸೈಡ್ ಸ್ಕರ್ಟ್‌ಗಳು, ಬಾಡಿ ಸೈಡ್ ಮೋಲ್ಡಿಂಗ್‌ಗಳು ಮತ್ತು ಕ್ರೋಮ್ ಅಲಂಕರವನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಪಡೆಯುತ್ತದೆ. ಈ ಹೊಸ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಒಳಭಾಗದಲ್ಲಿ ಕಾರ್ ಚಾರ್ಜರ್ ಎಕ್ಸ್‌ಟೆಂಡರ್, ಟ್ರಂಕ್ ಆರ್ಗನೈಸರ್ ಮತ್ತು ಡಿಜಿಟಲ್ ಏರ್ ಇನ್ಫ್ಲೇಟರ್ ಅನ್ನು ಹೊಂದಿರುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಮಾರುತಿ ವ್ಯಾಗನ್‍ಆರ್

ಇದರಲ್ಲಿ ಕಪ್ಪು ಬಣ್ಣದ ಬಿ-ಪಿಲ್ಲರ್, ಬಾಡಿ ಕಲರ್ ವಿಂಗ್ ಮಿರರ್ ಮತ್ತು ಡೋರ್ ಹ್ಯಾಂಡಲ್, ವೀಲ್ ಕವರ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಪವರ್ ಅಡ್ಜಸ್ಟಬಲ್ ವಿಂಗ್ ಮಿರರ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ, 60:40 ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟುಗಳು, ಬ್ಲೂಟೂತ್ ಮತ್ತು ಯುಎಸ್‌ಬಿ ಕನೆಕ್ಟಿವಿಟಿಯೊಂದಿಗೆ ರಿಯರ್ ವ್ಯೂ ಮಿರರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಆಡಿಯೋ ಸಿಸ್ಟಂ ಪೀಚರ್ಸ್ ಗಳನ್ನು ಹೊಂದಿವೆ.

Article Published On: Tuesday, August 10, 2021, 18:41 [IST]
English summary
Maruti suzuki sells over 4 lakh units of the third gen wagonr within 30 months details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+