Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಆಫ್-ರೋಡರ್ ಸುಜುಕಿ ಜಿಮ್ನಿ ಮಿನಿ-ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ-ಎಸ್‍ಯುವಿಯು 2018ದಿಂದ ಮಾರಾಟವಾಗುತ್ತಿದೆ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆಫ್-ರೋಡರ್ ಎಸ್‍ಯುವಿಯನ್ನು ಪರಿಚಯಿಸಲಿದೆ. ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಯಾಗಿದೆ. ಅದರಂತೆ ನೆಕ್ಸಾ ಸೋಷಿಯಲ್ ಮೀಡೀಯಾ ಪೇಜ್ ನಲ್ಲಿ ಮಾರುತಿ ಸುಜುಕಿ ಹೊಸ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಟೀಸರ್ ಹೊಸ ಜಿಮ್ನಿ ಮಿನಿ ಆಫ್-ರೋಡರ್ ಅನ್ನು ಸೂಚಿಸುತ್ತವೆ. ಇದನ್ನು 2022 ರಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿತ್ತು.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಈ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ 3-ಡೋರಿನ ಅಥವಾ 5-ಡೋರ್ ಜಿಮ್ನಿ ಬಿಡುಗಡೆಯಾಗಲಿದೆಯೇ ಎಂಬ ಮಾಹಿತಿಯು ಖಚಿತವಾಗಿಲ್ಲ,

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಕೆಲವು ವರದಿಗಳ ಪ್ರಕಾರ ಭಾರತದಲ್ಲಿ 5-ಡೋರ್ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆಯಾಗಲಿದೆ, ಇದು ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿದೆ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಈ ಎಸ್‍ಯುವಿಯು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗದಲ್ಲಿ ಇರಿಸಬಹುದು.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಜಿಮ್ನಿ 5-ಡೋರ್ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಿರುತ್ತದೆ, ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ನೊಂದಿಗೆ ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ.ಸುಜುಕಿ ಕಂಪನಿಯ ಜಪಾನ್ ನಲ್ಲಿರುವ ಕೊಸೈನ ಘಟಕದಲ್ಲಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿದೆ.ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಐಕಾನಿಕ್ ಆಪ್-ರೋಡರ್ ಜಿಮ್ನಿ ಬೇಡಿಕೆಯು ಅಷ್ಟರ ಪ್ರಮಾಣಕ್ಕೆ ಇದೆ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಇದರಿಂದ ಭಾರತದಲ್ಲಿ ಮಾರುತಿ ಸುಜುಕಿಯ ಗುರುಗಾಂವ್‌ನಲ್ಲಿರುವ ಘಟಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಮೂರು ಡೋರಿನ ಸುಜುಕಿ ಜಿಮ್ನಿ ಮಾದರಿಯನ್ನು ಭಾರತದಿಂದ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಇನ್ನು ಜಿಮ್ನಿಯನ್ನು ಇತ್ತೀಚೆಗೆ ಮೆಕ್ಸಿಕೊದಲ್ಲಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಿತ್ತು. ಇದು ಕೇವಲ 72 ಗಂಟೆಗಳ ಅವಧಿಯಲ್ಲಿ ಸೋಲ್ಡ್ ಔಟ್ ಆಯ್ತು. ಇದೇ ರೀತಿ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಮಾದರಿಯಾಗಿದೆ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

ಈ ಜಿಮ್ನಿ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದು ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಬಿಡುಗಡೆಗೊಂಡ ಬಳಿಕ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗುತ್ತದೆ.

Mahindra Thar ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ Maruti Suzuki Jimny

2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದಾಗ ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು. ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಬಹುನಿರೀಕ್ಷಿತ ಸುಜುಕಿ 5-ಡೋರ್ ಜಿಮ್ನಿ ಎಸ್‍‍ಯುವಿಯು 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಮಾದರಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

Article Published On: Monday, October 18, 2021, 10:16 [IST]
English summary
Maruti suzuki shared new teaser video of new jimny off roader details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+