ಜೂನ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಮಾರುತಿ ಇಗ್ನಿಸ್
ಇಗ್ನಿಸ್ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ ವಿಶಿಷ್ಟ ವಿನ್ಯಾಸ. ಟಾಲ್‌ಬಾಯ್ ನಿಲುವು ಮತ್ತು ಆಕರ್ಷಕ ಲುಕ್ ಅನ್ನು ಹೊಂದಿರುವ ಕಾರು ಆಗಿದೆ. ಮಾರುತಿ ಇಗ್ನಿಸ್ ಕಾರನ್ನು ಭಾರತದಲ್ಲಿ ನೆಕ್ಸಾ ಪ್ರೀಮಿಯಂ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಈ ವರ್ಷದ ಜೂನ್ ತಿಂಗಳಿನಲ್ಲಿ ಇಗ್ನಿಸ್ ಮಾದರಿಯ 3,583 ಯುನಿಟ್ ಗಳನ್ನು ಮಾರಾಟ ಮಾಡುವಲ್ಲಿ ಮಾರುತಿ ಸುಜುಕಿ ಕಂಪನಿಯು ಯಶಸ್ವಿಯಾಗಿದೆ. ಇನ್ನು ಕಳೆದ ವರ್ಷದ ಜುನ್ ತಿಂಗಳಲ್ಲಿ ಇಗ್ನಿಸ್ ಮಾದರಿಯ 1,432 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.150 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಇನ್ನು ಈ ವರ್ಷದ ಮೇ ತಿಂಗಳಿನಲ್ಲಿ ಮಾರುತಿ ಇಗ್ನಿಸ್ ಮಾದರಿಯ 471 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.661 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಮಾರುತಿ ಇಗ್ನಿಸ್ ಕಾರನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಆರಂಭದಲ್ಲಿ ಇಗ್ನಿಸ್ ಕಾರು ಬಲೆನೊ ಹ್ಯಾಚ್‌ಬ್ಯಾಕ್‌ನಷ್ಟು ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಇಗ್ನಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತು.

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಇಗ್ನಿಸ್ ಕಾರು ಸಿಲ್ಕಿ ಸಿಲ್ವರ್, ಗ್ಲಿಸ್ಟನಿಂಗ್ ಗ್ರೇ, ಪರ್ಲ್ ವೈಟ್, ಲ್ಯೂಸೆಂಟ್ ಆರೆಂಜ್, ಲ್ಯೂಸೆಂಟ್ ಆರೆಂಜ್ ವಿಥ್ ಬ್ಲ್ಯಾಕ್ ರೂಫ್, ಟರ್ಕಿಷ್ ಬ್ಲೂ, ನೆಕ್ಸಾ ಬ್ಲೂ, ಬ್ಲ್ಯಾಕ್ ರೂಫ್ ನೊಂದಿಗೆ ನೆಕ್ಸಾ ಬ್ಲೂ, ಮತ್ತು ಸಿಲ್ವರ್ ರೂಫ್ ನೊಂದಿಗೆ ನೆಕ್ಸಾ ಬ್ಲೂ ಬಣ್ಣಗಳ ಆಯ್ಜೆಯಲ್ಲಿ ಲಭ್ಯವಿದೆ.

ತಿಂಗಳಿಗೊಮ್ಮೆ ಇಗ್ನಿಸ್ ಕಾರು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಹ್ಯಾಚ್‌ಬ್ಯಾಕ್ ಕಾರಿನ ಜೆಟ್ಟಾ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಸ್ಮಾರ್ಟ್‌ಪ್ಲೇ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಿತು.

ಇಗ್ನಿಸ್ ಕಾರನ್ನು ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಆಲ್ಫಾ ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾತ್ತದೆ. ಇಗ್ನಿಸ್ ನೆಕ್ಸಾ ಶೋರೂಂನಿಂದ ಮಾರಾಟವಾದ ಮೊದಲ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದೆ.

ಮಾರುತಿ ಸುಜುಕಿ ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ 1.2-ಲೀಟರಿನ ಕೆ 12ಬಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮಾರುತಿ ಸುಜುಕಿ ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, ಎಬಿಎಸ್-ಇಬಿಡಿ, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಡ್ರೈವರ್ ಸೇಫ್ಟಿ ಅಲರ್ಟ್ ಗಳನ್ನು ನೀಡಲಾಗಿದೆ. ಫೇಸ್‌ಲಿಫ್ಟ್ ಕಾರಿನಲ್ಲಿ ಲೈವ್ ಟ್ರಾಫಿಕ್, ವಾಯ್ಸ್ ರೆಕಗ್ನಿಷನ್, ವೆಹಿಕಲ್ ಇನ್ಫಾರ್ಮೆಷನ್ ಅಲರ್ಟ್ ನಂತಹ ನೂತನ ಫೀಚರ್ ಗಳನ್ನು ಹೊಂದಿವೆ.

ಬಜೆಟ್ ಆಧಾರಿತ ಹ್ಯಾಚ್‍ಬ್ಯಾಕ್‍ಗಳಿಂದಾಗಿ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ. ಇನ್ನು ಈ ಮಾರುತಿ ಸುಜುಕಿ ಇಗ್ನಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಹ್ಯಾಚ್‍ಬ್ಯಾಕ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications