7-ಸೀಟರ್ ಕಾರುಗಳ ಬೇಡಿಕೆ ಹೆಚ್ಚಳ: ಹೊಸ ಫೀಚರ್ಸ್‌ಗಳೊಂದಿಗೆ ಬರಲಿದೆ ಮಾರುತಿ ಎಕ್ಸ್‌ಎಲ್6, ಎರ್ಟಿಗಾ
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಎಕ್ಸ್‌ಎಲ್6 ಮತ್ತು ಎರ್ಟಿಗಾ ಎಂಪಿವಿಗಳನ್ನು ನವೀಕರಿಸಿ ಹೆಚ್ಚು ಪ್ರೀಮಿಯಂ ಮಾದರಿಗಳಾಗಿ ದೇಶಿಯ ಮಾರುಕಟ್ಟೆಯಲ್ಲಿ 2019ರಲ್ಲಿ ಪರಿಚಯಿಸಿತು. ಇದರಲ್ಲಿ ಎಕ್ಸ್‌ಎಲ್6 ಎಂಪಿವಿಯನ್ನು ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಇನ್ನು ಎರ್ಟಿಗಾ ಎಂಪಿವಿಯು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇದರಿಂದ ಮಾರುತಿ ಸುಜುಕಿ ಎರ್ಟಿಗಾದಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಗಮನಾರ್ಹವಾದ ನವೀಕರಣವನ್ನು ನಡೆಸಲು ಸಜ್ಜಾಗಿದೆ.

ವರದಿಗಳ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಎರ್ಟಿಗಾ ಮತ್ತು ಎಕ್ಸ್‌ಎಲ್6 ಎಂಪಿವಿಗಳು ಹೊಸ ನವೀಕರಣಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಈ ಎರಡು ಎಂಪಿವಿಗಳು ಹೆಚ್ಚಿನ ಏರ್‌ಬ್ಯಾಗ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸೌಲಭ್ಯ, ದೊಡ್ಡ ಟೈರ್ ಮತ್ತು ಇನ್ನಷ್ಟು ಹೆಚ್ಚುವರಿ ಫೀಚರ್ಸ್ ಗಳನ್ನು ಪಡೆಯಬಹುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಮಾರುತಿ ಸುಜುಕಿಯ ಮುಖ್ಯ ಪ್ರತಿಸ್ಪರ್ಧಿ ಹ್ಯುಂಡೈ ಕಂಪನಿಯು ಕ್ರೆಟಾವನ್ನು ಆಧರಿಸಿ ಅಲ್ಕಾಜರ್ 7-ಸೀಟರ್ ಮಾದರಿಯನ್ನು ಬಿಡುಗಡೆಗೊಳಿಸುವುದರಿಂದ ಪೈಪೋಟಿ ಹೆಚ್ಚಾಗುತ್ತದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಹಲವು 7-ಸೀಟರ್ ಮಾದರಿಗಳ ಆಯ್ಕೆಗಳಿವೆ.

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ, ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಮಾದರಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಏಕೈಕ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮಾರುತಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇನ್ನು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯಲ್ಲಿ ಸುರಕ್ಷತೆಗಾಗಿ, ಎಂಪಿವಿ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟಲ್ ಏರ್‌ಬ್ಯಾಗ್ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಎಬಿಎಸ್ ಅನ್ನು ನೀಡಲಾಗಿದೆ

ಇನ್ನು ಪ್ರಸ್ತುತ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಕಂಪನಿಯ ಎಕ್ಸ್‌ಎಲ್6 ಎಂಪಿವಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ 1.5-ಲೀಟರ್ ಇನ್-ಲೈಮ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಿದೆ. ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಕಾರ್ಯಗಳು ಎಂಪಿವಿಯಲ್ಲಿ ಸ್ಯಾಂಡರ್ಡ್ ಆಗಿ ನೀಡಲಾಗಿದೆ.


Click it and Unblock the Notifications








