Just In
- 27 min ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್‌ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 43 min ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 56 min ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
- 1 hr ago
ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್
Don't Miss!
- News
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 7,865ಕ್ಕೆ ಇಳಿಕೆ
- Movies
ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್
- Sports
ಸಯ್ಯದ್ ಮುಷ್ತಾಕ್ ಅಲಿ ಟಿ20: ಕ್ವಾರ್ಟರ್ ಫೈನಲ್ಗೇರಿದ ಕರ್ನಾಟಕ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಳಕೆ ಮಾಡಿದ ಕಾರುಗಳ ಮೇಲೂ ಲೀಸ್ ಆಯ್ಕೆ ನೀಡಲಿದೆ ಮಾರುತಿ ಸುಜುಕಿ
ಹೊಸ ಕಾರುಗಳ ಮೇಲೆ ಲೀಸ್ ಆಯ್ಕೆ ನೀಡುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಭಾರೀ ಬೆಳವಣಿಗೆ ಸಾಧಿಸುತ್ತಿರುವ ಮಾರುತಿ ಸುಜುಕಿಯು ಶೀಘ್ರದಲ್ಲೇ ಬಳಕೆ ಮಾಡಿದ ಕಾರುಗಳ ಮೇಲೂ ಲೀಸ್ ಆಯ್ಕೆ ಪರಿಚಯಿಸುತ್ತಿದ್ದು, ಹೊಸ ಯೋಜನೆಯಿಂದ ಕಾರುಗಳ ಮಾಲೀಕತ್ವ ಮತ್ತಷ್ಟು ಸರಳಗೊಳ್ಳಲಿದೆ.

ಕರೋನಾ ವೈರಸ್ ನಂತರ ಸ್ವಂತ ವಾಹನ ಬಳಕೆಯು ಸಾಕಷ್ಟು ಹೆಚ್ಚಳವಾಗಿದ್ದು, ಇದೇ ಕಾರಣಕ್ಕೆ ಬಹುತೇಕ ಆಟೋ ಕಂಪನಿಗಳು ಭಾರೀ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿವೆ. ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುತ್ತಿರುವುದೇ ಸ್ವಂತ ವಾಹನಗಳ ಬಳಕೆ ಹೆಚ್ಚಳ ಪ್ರಮುಖ ಕಾರಣವಾಗಿದ್ದು, ಗ್ರಾಹಕರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಖರೀದಿಯ ಜೊತೆಗೆ ನಿರ್ದಿಷ್ಟ ಅವಧಿಗಾಗಿ ವಾಹನಗಳನ್ನು ಲೀಸ್ ಪಡೆಯುವ ಪ್ರಕ್ರಿಯೆ ಕೂಡಾ ಹೆಚ್ಚಳವಾಗಿದೆ.

ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಸಬ್‌ಸ್ಕೈಬ್ ಯೋಜನೆ ಅಡಿ ಆಕರ್ಷಕ ಬೆಲೆಯಲ್ಲಿ ಲೀಸ್ ಕಾರುಗಳ ಮಾಲೀಕತ್ವ ನೀಡುತ್ತಿದ್ದು, ಸಬ್‌ಸ್ಕೈಬ್‌ನಲ್ಲಿ ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಕಾರು ಮಾರಾಟ ಮಳಿಗೆಗಳಲ್ಲಿ ಲೀಸ್ ಪಡೆಯಬಹುದಾಗಿದೆ.

ಅರೆನಾ ಕಾರು ಮಳಿಗೆಯಲ್ಲಿ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳ ಮೇಲೆ ಲೀಸ್ ಆಯ್ಕೆ ಲಭ್ಯವಿದ್ದಲ್ಲಿ ನೆಕ್ಸಾ ಕಾರು ಮಾರಾಟ ಮಳಿಗೆಯಲ್ಲಿ ಸಿಯಾಜ್, ಬಲೆನೊ ಮತ್ತು ಎಕ್ಸ್ಎಲ್6 ಕಾರುಗಳನ್ನು ಲೀಸ್ ಪಡೆಯಬಹುದಾಗಿದೆ.

ಇಷ್ಟು ದಿನಗಳ ಕಾಲ ಲೀಸ್ ಕಾರುಗಳ ಆಯ್ಕೆಯಲ್ಲಿ ಕೇವಲ ಹೊಸ ಕಾರುಗಳನ್ನು ಮಾತ್ರವೇ ನೀಡುತ್ತಿದ್ದ ಮಾರುತಿ ಸುಜುಕಿಯು ಇನ್ಮುಂದೆ ತನ್ನ ಅಧಿಕೃತ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳಾದ ಟ್ರೂ ವ್ಯಾಲ್ಯೂ ಮೂಲಕವೂ ಲೀಸ್ ಕಾರುಗಳ ಆಯ್ಕೆ ನೀಡಲಿದ್ದು, ಸೆಕೆಂಡ್ ಹ್ಯಾಂಡ್(ಬಳಕೆ ಮಾಡಿದ) ಕಾರುಗಳ ಲೀಸ್ ಶುಲ್ಕವು ಹೊಸ ಕಾರುಗಳಿಂತಲೂ ಕಡಿಮೆ ಇರುವುದರಿಂದ ಮಾಲೀಕತ್ವ ಹೊರೆಯನ್ನು ತಗ್ಗಿಸಲಿದೆ.

ಮಾರುತಿ ಸುಜುಕಿಯು ಸದ್ಯ ಹೊಸ ಕಾರುಗಳ ಲೀಸ್ ಶುಲ್ಕವನ್ನು ಪ್ರತಿ ದಿನಕ್ಕೆ ಕನಿಷ್ಠ ರೂ.700ರಿಂದ ಗರಿಷ್ಠ ರೂ.1200 ದರ ಅನ್ವಯವಾಗುವಂತೆ ಲೀಸ್ ಆಯ್ಕೆ ನೀಡುತ್ತಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳ ಲೀಸ್ ಶುಲ್ಕವು ಇನ್ನಷ್ಟು ಕಡಿತವಾಗುತ್ತದೆ.

ಲೀಸ್ ಕಾರುಗಳು ಗ್ರಾಹಕರು ನೋಂದಣಿ ಮಾಡಿದ 15 ದಿನದೊಳಗಾಗಿ ಮಾಲೀಕತ್ವವನ್ನು ಹಸ್ತಾಂತರ ಮಾಡಲಿದ್ದು, ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಾಗತ್ತದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಗ್ರಾಹಕರು ಲೀಸ್ ಕಾರುಗಳನ್ನು ಕನಿಷ್ಠ 24 ತಿಂಗಳಿನಿಂದ ಗರಿಷ್ಠ 48 ತಿಂಗಳು ಲೀಸ್ ಪಡೆಯಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರುಗಳ ನೋಂದಣಿ, ರಸ್ತೆ ತೆರಿಗೆ, ವಿಮೆ ಮೊತ್ತ, ನಿರ್ವಹಣಾ ವೆಚ್ಚ, ಬಿಡಿಭಾಗಗಳ ಶುಲ್ಕಗಳು ಒಳಗೊಂಡಿರುತ್ತವೆ.

ಇದರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಮಾರುತಿ ಸುಜುಕಿ ಹೊಸ ಲೀಸ್ ಕಾರುಗಳಿಗೆ ವಾರ್ಷಿಕವಾಗಿ 18 ಸಾವಿರ ಕಿ.ಮೀ ನಿಗದಿಪಡಿಸಲಾಗಿದ್ದು, ಒಂದು ವರ್ಷದಲ್ಲಿ 18 ಸಾವಿರ ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಹೆಚ್ಚುವರಿಗಾಗಿ ರೂ.7 ಶುಲ್ಕ ಪಾವತಿ ಮಾಡಬೇಕಾಗುತ್ತದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆದರೆ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೆ ಯಾವೆಲ್ಲಾ ನಿರ್ಬಂಧ ವಿಧಿಸಲಾಗುತ್ತದೆ ಮತ್ತು ಯಾವೆಲ್ಲಾ ಷರತ್ತಗಳಿಗೆ ಬದ್ದವಾಗಿರಬೇಕಿರುವ ಎನ್ನುವ ಮಾಹಿತಿಯು ಶೀಘ್ರದಲ್ಲೇ ಪ್ರಕಟವಾಗಲಿದ್ದು, ಹೊಸ ಯೋಜನೆಯು ಕಾರು ಮಾಲೀಕತ್ವವನ್ನು ಹೆಚ್ಚಿಸಲು ಮತ್ತಷ್ಟು ಜನಪ್ರಿಯವಾಗಲಿದೆ.