7 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ Maruti Vitara Brezza
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ.

2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಸೋಲಿಸುವ ಮೂಲಕ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇತ್ತೀಚೆಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾದ ಮತ್ತು ಹೆಚ್ಚು ಪೈಪೋಟಿಯಿಂದ ಕೂಡಿದ ವಿಭಾಗವಾಗಿದೆ, ಬಹುತೇಕ ಎಲ್ಲಾ ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಈ ವಿಭಾಗದಲ್ಲಿ ಬಿಡುಗಡೆಗೊಳಿಸಿವೆ.

ಇದರಿಂದಾಗಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಈ ನಡುವೆಯು ತಿಂಗಳಿಗೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ ಸರಾಸರಿ 15,000 ಯುನಿಟ್‌ಗಳು ಮಾರಾಟವಾಗುತ್ತಿದೆ. ಈ ಮಾರುತಿ ವಿಟಾರಾ ಬ್ರೆಝಾ 2020ರ ಆರಂಭದಲ್ಲಿ ಐದು ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ನೋಂದಾಯಿಸಲಾಗಿದೆ.

ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ವಿಟಾರಾ ಬ್ರೆಝಾ ಏಳು ಲಕ್ಷ ಯುನಿಟ್‌ಗಳು ಮಾರಾಟವಾಗುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಸುರಕ್ಷಾತಾ ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದುಕೊಂಡ ಮಾದರಿಯಾಗಿದೆ.

ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ವಿಟಾರಾ ಬ್ರೆಝಾ ಎಸ್‍ಯುವಿ ಮಾದರಿಯು ಕೇವಲ 1.3-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಫೇಸ್‌ಲಿಫ್ಟ್ ಆವೃತ್ತಿಯು ಫೆಬ್ರವರಿ 2020ರಲ್ಲಿ ಪಚಯಿಸಿದ್ದರು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವಾಗ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು.

ಡೀಸೆಲ್ ವಾಹನವು ಸ್ಥಗಿತಗೊಂಡ ನಂತರವೂ ಖರೀದಿದಾರರಲ್ಲಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ದೇಶದ ಅತಿದೊಡ್ಡ ಕಾರು ತಯಾರಕರು ಹೊಸ ವಿಟಾರಾ ಬ್ರೆಝಾವನ್ನು ನವೀಕರಿಸಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಚಿತ್ರಗಳು ಆನ್‌ಲೈನ್‌ನಲ್ಲಿ ಇತ್ತೀಚೆಗೆ ಸೋರಿಕೆಯಾಗಿವೆ. ಹೊಸ ಬ್ರೆಝಾದಲ್ಲಿ ಕಂಡುಬರುವ ಪ್ರಮುಖ ಬದಲಾವಣೆಗಳೆಂದರೆ ರಿಫ್ರೆಶ್ ಮಾಡಿದ ಬಾಹ್ಯ ಪ್ರೊಫೈಲ್, ನವೀಕರಿಸಿದ ಕ್ಯಾಬಿನ್ ಪಡೆಯುತ್ತದೆ.

ಈ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಸ್ಟಾರ್ಟ್/ಸ್ಟಾಪ್ SHVS ತಂತ್ರಜ್ಞಾನದ ಜೊತೆಗೆ ಒಳ ಮತ್ತು ಹೊರಭಾಗದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಬರುತ್ತದೆ. ಈ ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ ಏಕೆಂದರೆ ಉತ್ಪಾದನಾ ಮಾದರಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಕೆಲವು ದಿನಗಳ ಹಿಂದೆ, ಎರಡನೇ ತಲೆಮಾರಿನ ಸೆಲೆರಿಯೊವನ್ನು ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಫೇಸ್‌ಲಿಫ್ಟೆಡ್ ಬಲೆನೊ ಅನುಸರಿಸುತ್ತದೆ, ಸೋರಿಕೆಯಾದ ಚಿತ್ರಗಳು 2022ರ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಅನ್ನು ಪಡೆದುಕೊಂಡಿದೆ ಎಂದು ಸೂಚಿಸುತ್ತದೆ, ಇದು ಕ್ರೋಮ್ ಸ್ಟ್ರಿಪ್‌ಗೆ ಬ್ಲ್ಯಾಕ್ ಅಂಶಗಳು ಹೆಚ್ಚು ಪ್ರಮುಖವಾಗಿದೆ ಮತ್ತು ಸುಜುಕಿ ಬ್ಯಾಡ್ಜ್ ಅದರ ಮಧ್ಯದಲ್ಲಿದೆ.

ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಸ್ಟೈಲಿಶ್ ಲುಕಿಂಗ್ ಇಂಟಿಗ್ರೇಟೆಡ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಬಾನೆಟ್ ರಚನೆಯು ಸಹ ಹೊಚ್ಚ ಹೊಸದು. ಮುಂಬರುವ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ತರ ಪ್ರಮುಖ ಅಂಶಗಳೆಂದರೆ ಹೊಸ ಏರ್ ಇನ್ಲೆಟ್‌ಗಳು, ಮುಂಭಾಗ ಮತ್ತು ಹಿಂಭಾಗದ ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು ಮತ್ತು ಸನ್‌ರೂಫ್ ಅನ್ನು ಒಳಗೊಂಡಿದೆ.

ಇದರೊಂದಿಗೆ ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್‌ಗಳು (ಲ್ಯಾಂಡ್ ರೋವರ್ ಪ್ರೇರಿತ), ಮರುಸ್ಥಾನಗೊಳಿಸಲಾದ ನಂಬರ್ ಪ್ಲೇಟ್ ರಿಸೆಸ್, ಶಾರ್ಕ್ ಫಿನ್ ಆಂಟೆನಾ, ಜೊತೆಗೆ ಬಂಪರ್ ವಿಭಾಗ ವೈಪರ್, ವಾಷರ್, ಬೂಟ್‌ಲಿಡ್‌ನಲ್ಲಿ ಬರೆಯಲಾದ BREZZA ಎಂಬ ಹೆಸರು, ರೂಫ್ ರೈಲ್, ಬೂಟ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಹೆಚ್ಚಿನ ಮೌಂಟೆಡ್ ಸ್ಟಾಪ್ ಲ್ಯಾಂಪ್ ಅನ್ನು ಒಳಗೊಂಡಿದೆ,

2022ರ ಮಾರುತಿ ಸುಜುಕಿ ವಿಟಾರಾ ಬ್ರೆಝಾದ ಒಳಭಾಗದ ಸ್ವಲ್ಪ ಸುಳಿವು ನೀಡುತ್ತವೆ ಮತ್ತು ಇದು ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪ್ಲೇಸ್‌ಮೆಂಟ್‌ನಂತಹ ಇಕೋಸ್ಪೋರ್ಟ್‌ನೊಂದಿಗೆ ನವೀಕರಿಸಿದ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ ಮತ್ತು ಇದು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯನ್ನು ಹೊಂದಿರುತದೆ. ನವೀಕರಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಮಲ್ಟಿ ಇನ್ಫೋ ಡಿಸ್ ಪ್ಲೇಯನ್ನು ಹೊಂದಿದೆ, ಇದರೊಂದಿಗೆ ಒಳಭಾಗದಲ್ಲಿಯು ಇತರ ಫೀಚರ್ಸ್ ಗಳನ್ನು ಕೂಡ ಹೊಂದಿರುತ್ತದೆ.

ಇನ್ನು ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡುವುದು ಮುಂದುವರೆಸುತ್ತದೆ.


Click it and Unblock the Notifications