ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಕಳೆದ ವರ್ಷ ಮಹೀಂದ್ರಾ ಕಂಪನಿಯು ತನ್ನ ಎರಡನೇ ತಲೆಮಾರಿನ ಥಾರ್ ಎಸ್‍ಯುವಿಯನ್ನು ಬಿಡುಗಡೆ ಮಾಡಿತು. ಈ ಐಕಾನಿಕ್ ಮಹೀಂದ್ರಾ ಥಾರ್ ಆಪ್-ರೋಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಬಳಿಕ ಮಾರಾಟದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತು.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಮಹೀಂದ್ರಾ ಕಂಪನಿಯು ಥಾರ್ ಎಸ್‍ಯುವಿಗಾಗಿ 75,000 ಬುಕ್ಕಿಂಗ್‌ಗಳನ್ನು ಸ್ವೀಕರಿಸಿದ್ದಾರೆ. ಅಲ್ಲದೇ ಹೊಸ ಥಾರ್‌ಗೆ ಆಫ್ಟರ್‌ಮಾರ್ಕೆಟ್ ಮಾಡಿಫೈಗೊಳಿಸಲು ಹಲವರ ಮೆಚ್ಚಿನ ಆಯ್ಕೆಯ ವಾಹನವಾಗಿದೆ. ಮಾಡಿಫೈಗೊಂಡ ಥಾರ್ ಎಸ್‍ಯುವಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದೇ ರೀತಿ VIN 4×4 ಅವರು ಮಾಡಿಫೈಗೊಂಡ ಐಕಾನಿಕ್ ಥಾರ್ ಎಸ್‍ಯುವಿಯ ಒಂದು ಉದಾಹರಣೆ ಇಲ್ಲಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಮಾಡಿಫೈಗೊಂಡ ಮಹೀಂದ್ರಾ ಥಾರ್ ಭಾರತದಲ್ಲಿ ರ್‍ಯಾಲಿ-ಶೈಲಿಯ ಕ್ಯಾಬಿನ್ ಅನ್ನು ಪಡೆದ ಮೊದಲನೆಯದು. ಇಲ್ಲಿರುವ ಚಿತ್ರಗಳಲ್ಲಿ, ಹಿಂಭಾಗದಲ್ಲಿ ಜಾಗವನ್ನು ಮುಕ್ತಗೊಳಿಸಲು ಎಸ್‍ಯುವಿಯ ಹಿಂದಿನ ಸೀಟುಗಳನ್ನು ತೆಗೆದುಹಾಕಲಾಗಿದೆ ಎಂದು ನೋಡಬಹುದು. ಸ್ಟಾಕ್ ರೋಲ್ ಬಾರ್‌ಗಳನ್ನು ಆಫ್ಟರ್ ಮಾರ್ಕೆಟ್ ಯುನಿಟ್ ನಿಂದ ಬದಲಾಯಿಸಲಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಮುಂಭಾಗದ ಸೀಟುಗಳನ್ನು ಕಸ್ಟಮ್-ನಿರ್ಮಿತ ಕ್ಯಾಬಿನ್‌ನಲ್ಲಿ ಸುತ್ತುವರೆದಿದೆ, ಹಿಂಭಾಗದಲ್ಲಿ ವಿಂಡ್‌ಸ್ಕ್ರೀನ್‌ನೊಂದಿಗೆ ಪೂರ್ಣಗೊಳ್ಳುತ್ತದೆ. ಹಿಂಭಾಗದ ರೋಲ್ ಕೇಜ್‌ನ ಮೇಲ್ಭಾಗದಲ್ಲಿ, ಉತ್ತಮ ಪ್ರಕಾಶಕ್ಕಾಗಿ ಸಹಾಯಕ ಎಲ್ಇಡಿ ಲ್ಯಾಂಪ್ ಗಳನ್ನು ಸೇರಿಸಲಾಗಿದೆ. ಅದರ ಹೊರತಾಗಿ, ಎಸ್‍ಯುವಿ ಹೊಸ ಜೀಪ್-ಶೈಲಿಯ ಮುಂಭಾಗದ ಗ್ರಿಲ್, ಆಫ್ಟರ್‌ಮಾರ್ಕೆಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಇಂಟಿಗ್ರೇಟೆಡ್ ಬ್ಯಾಷ್ ಪ್ಲೇಟ್‌ನೊಂದಿಗೆ ಆಫ್ರೋಡ್-ಸ್ಪೆಕ್ ಬಂಪರ್ ಅನ್ನು ಸಹ ಪಡೆಯುತ್ತದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಮುಂಭಾಗದ ಬಂಪರ್ ಎರಡು ಟೌ ಹುಕ್‌ಗಳು ಮತ್ತು ಒಂದು ಜೋಡಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲೈಟ್‌ಗಳನ್ನು ಸಹ ಪಡೆಯುತ್ತದೆ. ಅದರ ಹೊರತಾಗಿ, ಎಸ್‍ಯುವಿಯಲ್ಲಿ ರಾಕ್‌ಸ್ಲೈಡರ್‌ಗಳನ್ನು ಸಹ ಅಳವಡಿಅಲಾಗಿದೆ. ಜೊತೆಗೆ ಹಿಂಭಾಗದ ಬಂಪರ್‌ನಲ್ಲಿ ಹೆಚ್ಚುವರಿ ಬ್ರೇಕ್ ಲ್ಯಾಂಫ್ ಗಳು, ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮವಾದ ಒಳಭಾಗದ ರಕ್ಷಣೆಯನ್ನು ಸಹ ಸೇರಿಸಲಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಈ ಕಸ್ಟಮೈಸ್ ಮಾಡಿದ ಮಹೀಂದ್ರಾ ಥಾರ್ ಅದ್ಭುತವಾಗಿ ಕಾಣುವುದಲ್ಲದೆ, ಸಾಕಷ್ಟು ಕ್ರಿಯಾತ್ಮಕ ಮೋಡ್‌ಗಳನ್ನು ಹೊಂದಿದೆ.ಈ ಎಸ್‍ಯುವಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಹೀಂದ್ರಾ ಥಾರ್ ಭಾರತದಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಇದರಲ್ಲಿ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಆಫ್ ರೋಡ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಿದೆ. ಥಾರ್ ಎಸ್‍ಯುವಿ ಮಾದರಿಯು ಬಿಡುಗಡೆಯಾಗಿ ಯಶಸ್ವಿ ಒಂದು ವರ್ಷ ಪೂರೈಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆಫ್ ರೋಡ್ ಎಸ್‌ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿತ್ತು.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಥಾರ್ ಎಸ್‌ಯುವಿ ಮಾದರಿಯನ್ನು ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆ ಮಾಡಿದ್ದ ಮಹೀಂದ್ರಾ ಕಂಪನಿಯು ಇದುವರೆಗೆ ಬರೋಬ್ಬರಿ 75 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ದಿನಂಪ್ರತಿ 200ರಿಂದ 250 ಗ್ರಾಹಕರು ಸರಾಸರಿಯಾಗಿ ಹೊಸ ಕಾರು ಖರೀದಿಗೆ ಬುಕ್ಕಿಂಗ್ ದಾಖಲಿಸುತ್ತಿದ್ದಾರೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದ್ದು, ಸಾಫ್ಟ್ ಟಾಪ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಡೀಸೆಲ್ ಆಟೋಮ್ಯಾಟಿಕ್ ಹಾರ್ಡ್ ಟಾಪ್ ಮಾದರಿಗಳ ಖರೀದಿಗೆ ಹೆಚ್ಚು ಕಾಯಬೇಕಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‍ಯುವಿಯ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ,ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ,

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ಜನಪ್ರಿಯ Mahindra Thar ಆಫ್-ರೋಡರ್

ಇನ್ನು ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಜನಪ್ರಿಯ ಆಫ್-ರೋಡ್ ಎಸ್‍ಯುವಿ ಮಾದರಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಭಾರತೀಯರಿಗೆ ಮೊದಲಿಗೆ ಥಾರ್ ಎಸ್‍ಯುವಿಯು ಮನಸ್ಸಿಗೆ ಬರುತ್ತದೆ. ಅಷ್ಟು ಜನಪ್ರಿಯತೆಯನ್ನು ಹೊಂದಿರುವ ಆಫ್-ರೋಡರ್ ಆಗಿದೆ.

Most Read Articles

Kannada
English summary
Meet the mahindra thar suv customized with rally style cabin details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X