2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ಟೀಸರ್ ಬಿಡುಗಡೆ
ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ 2021ರ ಎಸ್-ಕ್ಲಾಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಪಡೆದುಕೊಂಡಿದೆ.

ಈ 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದೀಗ ಮರ್ಸಿಡಿಸ್ ಬೆಂಝ್ ತನ್ನ ಈ ಎಸ್-ಕ್ಲಾಸ್ ಕಾರನ್ನು ಬಿಡುಗಡೆಗೊಳಿಸುವ ಮುನ್ನ ಇದರ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಎಸ್-ಕ್ಲಾಸ್ ಕಾರನ್ನು ಸ್ಥಳೀಯವಾಗಿ ಜೋಡಿಸಲಾಗುವುದು ಆದರೆ ಆರಂಭಿಕ ಹಂತದಲ್ಲಿ ಇದರ ಯುನಿಟ್ ಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಬಹುದು. 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು 34 ಎಂಎಂ ಉದ್ದ, 51 ಎಂಎಂ ಅಗಲ ಮತ್ತು 12 ಎಂಎಂ ಎತ್ತರವನ್ನು ಹೊಂದಿದೆ.

ಈ ಐಷಾರಾಮಿ ಕಾರಿನ ವ್ಹೀಲ್ ಬೇಸ್ ಅನ್ನು ಕೂಡ ಹೆಚ್ಚಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಕ್ಯಾಬಿನ್ ಸ್ಪೇಸ್ ದೊರಕುತ್ತದೆ. ಈ ಸೆಡಾನ್ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಈಗ ಹೊಸ ಡಿಜಿಟಲ್ ಲೈಟ್ ತಂತ್ರಜ್ಞಾನದೊಂದಿಗೆ ಪಡೆಯುತ್ತವೆ,

ಮತ್ತೊಂದು ದೊಡ್ಡ ಬದಲಾವಣೆಯೆಂದರೆ ಎಸ್-ಕ್ಲಾಸ್‌ನಲ್ಲಿ ಏರ್ ಫ್ಲೋ ಅತ್ಯುತ್ತಮವಾಗಿಸಲು ಹೊಸ ಫ್ಲಶ್-ಫಿಟ್ಟಿಂಗ್ ಅನ್ನು ನೀಡಿದೆ. ಇದರ ಇಂಟಿರಿಯರ್ ನಲ್ಲಿ ಹಲವಾರು ಐಷಾರಾಮಿ ಮತ್ತು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಈ ಕಾರಿನಲ್ಲಿ ಡಿಜಿಟಲ್ ಕನ್ಸೋಲ್ ಜೊತೆಗೆ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಹೊಸ ಎಸ್-ಕ್ಲಾಸ್ ಕಾರಿನಲ್ಲಿ ಮೌಂಟಡ್ ಕಂಟ್ರೋಲ್ ನೊಂದಿಗೆ ಹೊಸ ಸ್ಟೀಯರಿಂಗ್ ವ್ಜೀಲ್ ಅನ್ನು ಅಳವಡಿಸಲಾಗಿದೆ.

ಇನ್ನು ಬರ್ಮೆಸ್ಟರ್ ಹೈ-ಎಂಡ್ 4ಡಿ ಸೌಂಡ್ ಸಿಸ್ಟಂ, ಕ್ಯಾಬಿನ್ ಮೂಲಕ 263 ಕ್ಕೂ ಹೆಚ್ಚು ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿರುವ ಆಂಬಿಯೆಂಟ್ ಲೈಟಿಂಗ್, ವಾಯ್ಸ್ ಕಮಾಂಡ್, ಮತ್ತು ಇನ್ನೂ ಹೆಚ್ಚಿನ ಪೀಚರ್ಸ್ ಗಳನ್ನು ಒಳಗೊಂಡಿವೆ.

ಇನ್ನು ಇದರಲ್ಲಿ ಸುರಕ್ಷತೆಗಾಗಿ ರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ ಮತ್ತು ನೈಟ್ ವಿಷನ್ ಕ್ಯಾಮೆರಾವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮಾದರಿಯು ಭಾರತದಲ್ಲಿ ಬ್ರ್ಯಾಂಡ್ ನ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಡೀಸೆಲ್ 400ಡಿ 4 ಮ್ಯಾಟಿಕ್ ಮತ್ತು ಪೆಟ್ರೋಲ್ 450 4 ಮ್ಯಾಟಿಕ್ ಎಂಬ ಎರಡು ರೂಪಾಂತರಗಳನ್ನು ಹೊಂದಿರುತ್ತದೆ. ಇದರಲ್ಲಿ ಎಸ್ 400 ಡಿ ಭಾರತದ ಇತರ ಹೊಸ ಹೊಸ ಮರ್ಸಿಡಿಸ್‌ನಲ್ಲಿ ಬಳಸಲಾಗುವ ಪರಿಚಿತ ಒಎಂ 656 ಇನ್-ಲೈನ್-ಆರು ಡೀಸೆಲ್ ಎಂಜಿನ್ ಬಳಸುತ್ತದೆ.

ಈ ಎಂಜಿನ್ 326 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಸ್ 450 ಪೆಟ್ರೋಲ್ ಸಹ ಇನ್-ಲೈನ್-ಆರು ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 362 ಬಿಹೆಚ್‌ಪಿ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎರಡೂ ರೂಪಾಂತರಗಳಲ್ಲಿ ಆಲ್-ವ್ಹೀಲ್ ಡ್ರೈವ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಈ ಬಹುನಿರೀಕ್ಷಿತ ಐಷಾರಾಮಿ 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಹೊಸ ಫೀಚರ್ಸ್ ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








