ಭಾರತದಲ್ಲಿ ಮೇಬ್ಯಾಚ್ ಜಿಎಲ್ಎಸ್600 ಕಾರು ಬಿಡುಗಡೆ ಮಾಹಿತಿ ಖಚಿತಪಡಿಸಿದ ಮರ್ಸಿಡಿಸ್ ಬೆಂಝ್
ಜರ್ಮನಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಕಾರುಗಳ ಬಿಡುಗಡೆ ಮಾಹಿತಿ ಹಂಚಿಕೊಂಡಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಬಿಡುಗಡೆಯ ಮಾಹಿತಿಯನ್ನು ಖಚಿತಪಡಿಸಿದೆ.

2019ರಲ್ಲಿ ಮೊದಲ ಬಾರಿಗೆ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಿರುವ ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಮಾದರಿಯು ಇದೀಗ ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಸಿದ್ದವಾಗುತ್ತಿದ್ದು, ಹೊಸ ಕಾರು ತಿಂಗಳಾಂತ್ಯಕ್ಕೆ ಖರೀದಿ ಲಭ್ಯವಿರಲಿದೆ ಎನ್ನಲಾಗಿದೆ.

ಹೊಸ ಐಷಾರಾಮಿ ಎಸ್‌ಯುವಿಯನ್ನು ಭಾರತಕ್ಕೆ ತರುವ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದ್ದು, ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎಸ್ 600 ಹಲವಾರು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಳ್ಳಲಿದೆ.

ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಕಾರು ಮಾದರಿಯ ಭಾರತೀಯ ಮಾರುಕಟ್ಟೆಗಾಗಿ ಹೊಸ ರೂಪಾಂತರ ಪಡೆದುಕೊಳ್ಳಲಿದ್ದು, ಅಲ್ಟ್ರಾ-ಐಷಾರಾಮಿ ಎಸ್‌ಯುವಿ ಎಸ್ಯುವಿಯ ಸ್ಟ್ಯಾಂಡರ್ಡ್ ಮಾದರಿಯ ಮೇಲೆ ಹಲವಾರು ಬದಲಾವಣೆಗಳನ್ನು ಹೊಂದಿರುತ್ತದೆ.

ಜಿಎಲ್ಎಸ್ 600 ಮೇಬ್ಯಾಕ್ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಇದರ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಅನುಭವ ನೀಡುತ್ತವೆ. ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ.

ಪ್ರೀಮಿಯಂ ಐಷಾರಾಮಿ ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ತಕ್ಕಂತೆ 22 ಇಂಚಿನ ಮತ್ತು 23 ಇಂಚಿನ ಬ್ರಷ್ಡ್ ಮಲ್ಟಿ-ಸ್ಪೋಕ್ ವೀಲ್ಹ್ ಆಯ್ಕೆ ಜೊತೆಗೆ ವಿಂಡೋ ಪಿಲ್ಲರ್, ರೂಫ್ ಮೇಲೆ ಕಪ್ಪು ಬಣ್ಣದ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಮತ್ತು 'ಮೇಬ್ಯಾಕ್' ಬ್ರಾಂಡ್ ಬ್ಯಾಡ್ಜ್ ಹೊಂದಿದೆ.

ಮೊದಲೇ ಹೇಳಿದಂತೆ ಜಿಎಲ್‌ಎಸ್ 600 ಮೇಬ್ಯಾಕ್‌ನ ಒಳಾಂಗಣದಲ್ಲಿ ಪ್ರವೇಶಿಸುವಾ ಇದರ ಬೆಸ್ಪೋಕ್ ವೈಶಿಷ್ಟ್ಯತೆಗಳು ಸಂಪೂರ್ಣ ಐಷಾರಾಮಿ ಸ್ವಾಗತ ನೀಡಲಿದ್ದು, ಹಿಂಭಾಗದ ಆಸನಗಳನ್ನು ಗರಿಷ್ಠ ಐಷಾರಾಮಿ ಸೌಲಭ್ಯಕ್ಕಾಗಿ ಸಂಪೂರ್ಣ ಪವರ್ ಆಪರೇಟೆಡ್ ರೆಕ್ಲೈನಿಂಗ್ ಲೆದರ್ ಸೀಟುಗಳೊಂದಿಗೆ ಬದಲಾಯಿಸಲಾಗಿದೆ.

ಹೊಸ ಕಾರಿನ ಆಸನಗಳು ವೆಂಟಿಲೆಟರ್ ಮತ್ತು ಮಸಾಜ್ ಫಂಕ್ಷನ್ ವೈಶಿಷ್ಟ್ಯತೆ ಒಳಗೊಂಡಿದ್ದು, ಪ್ರತಿ ಆಸನದಲ್ಲೂ ಆಡಿಯೋ, ಹವಾಮಾನ ನಿಯಂತ್ರಣ, ಆಂಬಿಯೆಂಟ್ ಲೈಟಿಂಗ್, ಸನ್ಶೇಡ್ಸ್ ಮತ್ತು ನ್ಯಾವಿಗೇಷನ್ ಅನ್ನು ಒಳಗೊಂಡಿದೆ.
MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಹಾಗೆಯೇ ಆಸನದ ಹಿಂಭಾಗದ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದ್ದು, ದೊಡ್ಡದಾದ ಪನೋರಮಿಕ್ ಮೂನ್‌ರೂಫ್, 12.3-ಇಂಚಿನ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, 64 ಬಣ್ಣ ಮತ್ತು ಹೆಚ್ಚಿನ ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಸೇರಿವೆ.

ಇನ್ನು ಜಿಎಲ್ಎಸ್ 600 ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಷೆಷನ್ ವ್ಯವಸ್ಥೆಯನ್ನು ಹೊಂದಿದ್ದು, ಕ್ಯಾಮೆರಾ ಮುಂದಿನ ರಸ್ತೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಅಮಾನತಿಗೆ ಹೊಂದಾಣಿಕೆಗಳನ್ನು ಮಾಡುತ್ತದೆ. ಇದು ಪ್ರೀಮಿಯಂ ಐಷಾರಾಮಿ ಎಸ್ಯುವಿಗೆ ಅಲ್ಟ್ರಾ-ಸ್ಮೂಥ್ ಸವಾರಿಗೆ ಅನುವು ಮಾಡಿಕೊಡುತ್ತದೆ.
MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಎಂಜಿನ್ ಮತ್ತು ಪರ್ಫಮೆನ್ಸ್
ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಕಾರಿನಲ್ಲಿ ಕಂಪನಿಯು 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಜೋಡಿಸಿದ್ದು, ಇದು 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ.


Click it and Unblock the Notifications








