ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಐಷಾರಾಮಿ ಎಸ್‌ಯುವಿ ಕಾರು ಮಾದರಿಯಾದ ಗ್ಲೊಸ್ಟರ್‌ನಲ್ಲಿ ಹೊಸದಾಗಿ ಸ್ಯಾವಿ ವೆರಿಯೆಂಟ್‌ನಲ್ಲಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 37.28 ಲಕ್ಷ ಬೆಲೆ ಹೊಂದಿದೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಫುಲ್ ಸೈಜ್ ಎಸ್‌ಯುವಿ ಮಾದರಿಯಾಗಿರುವ ಗ್ಲೊಸ್ಟರ್‌ ಕಾರಿನಲ್ಲಿ ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ಪ್ರಮುಖ ವೆರಿಯೆಂಟ್‌ಗಳು ಮಾರಾಟಗೊಳ್ಳುತ್ತಿದ್ದು, ವಿವಿಧ ವೆರಿಯೆಂಟ್‌ಗಳಲ್ಲಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಆದರೆ ಟಾಪ್ ಎಂಡ್ ಮಾದರಿಯಾದ ಸ್ಯಾವಿ ವೆರಿಯೆಂಟ್‌ನಲ್ಲಿ ಕೇವಲ 6 ಸೀಟರ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿತ್ತು.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಸ್ಯಾವಿ ವೆರಿಯೆಂಟ್‌ನಲ್ಲಿ 7 ಸೀಟರ್ ಮಾದರಿಗೆ ಹೆಚ್ಚು ಬೇಡಿಕೆ ಸಲ್ಲಿಕೆಯಾಗುತ್ತಿರುವುದರಿಂದ ಕಂಪನಿಯು ಇದೀಗ ಹೊಸ ಮಾದರಿಯನ್ನು ಬಿಡುಗಡೆ ಮಾಡಿದ್ದು, ಸ್ಯಾವಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳು ಒಂದೇ ರೀತಿಯ ಬೆಲೆ ಪಡೆದುಕೊಂಡಿವೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಗ್ಲೊಸ್ಟರ್ ಸ್ಯಾವಿ ಹೊಸ ವೆರಿಯೆಂಟ್ ಬಿಡುಗಡೆ ನಂತರ 6 ಸೀಟರ್ ಆವೃತ್ತಿಯು 2+2+2 ವಿನ್ಯಾಸ ಆಸನ ಸೌಲಭ್ಯ ಹೊಂದಿದ್ದು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ನೀಡಲಾಗುತ್ತಿದೆ. ಹಾಗೆಯೇ 7 ಸೀಟರ್ ವೆರಿಯೆಂಟ್‌ನಲ್ಲಿ 2+3+2 ವಿನ್ಯಾಸದ ಆಸನ ಸೌಲಭ್ಯ ನೀಡಲಾಗಿದ್ದು, ಮಧ್ಯದ ಸಾಲಿನಲ್ಲಿ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡರ್ ಕೂಡಾ ಲಭ್ಯವಿದೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಎಂಜಿ ಕಂಪನಿಯು ಈ ಮೊದಲು ಗ್ಲೊಸ್ಟರ್ ಆರಂಭಿಕ ಮಾದರಿಯಾದ ಸೂಪರ್ ವೆರಿಯೆಂಟ್‌ನಲ್ಲಿ 7 ಸೀಟರ್ ಮಾದರಿಯನ್ನು, ಸ್ಮಾರ್ಟ್ ವೆರಿಯೆಂಟ್‌ನಲ್ಲಿ 6 ಸೀಟರ್ ಮಾದರಿಯನ್ನು ಮತ್ತು ಶಾರ್ಪ್ ವೆರಿಯೆಂಟ್‌ನಲ್ಲಿ ಮಾತ್ರವೇ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ನೀಡಿತ್ತು.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಇದೀಗ ಹೈ ಎಂಡ್ ಮಾದರಿಯಾದ ಸ್ಯಾವಿಯಲ್ಲೂ ಕೂಡಾ 6 ಸೀಟರ್ ಮತ್ತು 7 ಸೀಟರ್ ಖರೀದಿಗೆ ಲಭ್ಯವಿದ್ದು, ಹೊಸ ಆವೃತ್ತಿಯು ಹೊಸ ಆಸನ ಸೌಲಭ್ಯವನ್ನು ಹೊರತುಪಡಿಸಿ 6 ಸೀಟರ್ ಮಾದರಿಯಲ್ಲಿ ತಾಂತ್ರಿಕ ಅಂಶಗಳನ್ನೇ ಪಡೆದುಕೊಂಡಿದೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಇನ್ನು ಗ್ಲೊಸ್ಟರ್ ಕಾರು ಮಾದರಿಯು ಫುಲ್ ಸೈಜ್ ಎಸ್‌ಯುವಿ ಆವೃತ್ತಿಯಾಗಿದ್ದು, 4,985-ಎಂ ಉದ್ದ, 1,926-ಎಂಎಂ ಅಗಲ, 1,867-ಎಂಎಂ ಎತ್ತರ ಹಾಗೂ 2,950-ಎಂಎಂ ವ್ಹೀಲ್ ಬೇಸ್‌ನೊಂದಿಗೆ ವಿಶಾಲವಾದ ಕ್ಯಾಬಿನ್‌ನೊಂದಿಗೆ ಉತ್ತಮ ಆಸನ ಸೌಲಭ್ಯವಿದೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಗ್ಲೊಸ್ಟರ್ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 29.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.35.58 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಲೆವಲ್-1 ಆಟೊನಮಸ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಲೆವಲ್-1 ಆಟೊನಮಸ್ ಟೆಕ್ನಾಲಜಿಯಲ್ಲಿ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸೌಲಭ್ಯಗಳಿವೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಹಾಗೆಯೇ ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್‌, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್‌, ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಗಳಿವೆ.

ಗ್ಲೊಸ್ಟರ್ ಸ್ಯಾವಿ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ಒಳಭಾಗದಲ್ಲಿ ಲೆದರ್ ಸೀಟ್, ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್, ಆ್ಯಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, 8 ಇಂಚಿನ ಎಂಐಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾಡಲ್ ಶಿಫ್ಟರ್‌, ತ್ರೀ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರನ್ನಿಂಗ್ ಟೇಲ್‌ಗೇಟ್, ಹಿಟ್/ಕೂಲ್ ಮಾಡಬಹುದಾದ ಮುಂಭಾಗದ ಆಸನಗಳು, ವೈರ್‌ಲೆಸ್ ಚಾರ್ಜಿಂಗ್, ಮಲ್ಟಿ-ವೇ ಎಲೆಕ್ಟ್ರಾನಿಕ್ ಅಡ್ಜೆಸ್ಟ್ ಫ್ರಂಟ್ ಸೀಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

Most Read Articles

Kannada
English summary
Mg gloster savvy 7 seater suv launched in india. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X