ಬಿಡುಗಡೆಗೂ ಮುನ್ನ ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಬ್ರಿಟಿಷ್ ಕಾರು ಉತ್ಪಾದನಾ ಕಂಪನಿಯಾದ ಎಂಜಿ ಮೋಟಾರ್ ಶೀಘ್ರದಲ್ಲೇ ತನ್ನ ಜನಪ್ರಿಯ ಕಾರು ಮಾದರಿಯಾದ ಹೆಕ್ಟರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ಕಾರನ್ನು ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಎಂಜಿ ಹೆಕ್ಟರ್ ಎಸ್‌ಯುವಿ ಮಾದರಿಯು 2020ರ ಆರಂಭದಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡಿತ್ತು. ಬಿಎಸ್-6 ಎಂಜಿನ್‍‌ನೊಂದಿಗೆ ಬಿಡುಗಡೆಗೊಂಡ ನಂತರ ಯಾವುದೇ ಬದಲಾವಣೆ ಪಡೆದುಕೊಂಡಿರದ ಹೆಕ್ಟರ್ ಎಸ್‌ಯುವಿಯು ಇದೀಗ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಪ್ರಮುಖ ಬದಲಾವಣೆ ಪಡೆದುಕೊಳ್ಳುತ್ತಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಎಂಜಿ ಮೋಟಾರ್ ಕಂಪನಿಯು ಹೆಕ್ಟರ್ ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಸಂಕ್ರಾಂತಿ ಸಂಭ್ರಮ ವೇಳೆ ಬಿಡುಗಡೆ ಮಾಡಬಹುದು ಎನ್ನಲಾಗಿದ್ದು, ಹೊಸ ಕಾರನ್ನು ಈಗಾಗಲೇ ಆಯ್ದ ಪ್ರಮುಖ ಕಾರ್ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಫೇಸ್‌ಲಿಫ್ಟ್ ಹೆಕ್ಟರ್ ಮಾದರಿಯಲ್ಲಿ ಹೆಕ್ಟರ್ ಪ್ಲಸ್‌ ಮಾದರಿಯಿಂದಲೂ ಕೆಲವು ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಜೊತೆಗೆ ಯುಎಸ್ಎ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಷವರ್ಲೆ ಕಾಪ್ಟಿವಿಯಾದಲ್ಲಿರುವಂತೆ ಹೊರ ವಿನ್ಯಾಸವನ್ನು ಸಿದ್ದಪಡಿಸಲಾಗಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಷವರ್ಲೆ ಕಾಪ್ಟಿವಿಯಾ ಎಸ್‌ಯುವಿ ಕಾರು ಎಂಜಿ ಹೆಕ್ಟರ್ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿ ಯುಎಸ್ಎನಲ್ಲಿ ಮಾರಾಟಗೊಳ್ಳುತ್ತಿದ್ದು, ಹೆಕ್ಟರ್ ಫೇಸ್‌ಲಿಫ್ಟ್‌ ನಲ್ಲಿ ಸ್ಟ್ಯಾಂಡರ್ಡ್ ಆಗಿ ಹೊಸ ವಿನ್ಯಾಸದ 18-ಇಂಚಿನ ಅಲಾಯ್ ವೀಲ್ಹ್, ಆಟೋ ಡಿಮ್ಮಿಂಗ್ ರಿಯಲ್ ವ್ಯೂ ಮಿರರ್ ನೀಡಲಾಗಿದೆ. ಹಾಗೆಯೇ ಫೇಸ್‌ಲಿಫ್ಟ್ ಮಾದರಿಯಲ್ಲಿ ಹೊಸದಾಗಿ ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಡ್ಯುಯಲ್ ಕಲರ್ ಇಂಟಿರಿಯರ್ ಸಹ ನೀಡಲಾಗಿದ್ದು, ವಿನ್ಯಾಸದಲ್ಲಿನ ಬದಲಾವಣೆ ಹೊರತುಪಡಿಸಿ ಎಂಜಿನ್ ಆಯ್ಕೆಯಲ್ಲಿ ಬಿಎಸ್-6 ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ತನ್ನದೆ ಆದ ಜನಪ್ರಿಯತೆ ಹೊಂದಿರುವ ಎಂಜಿ ಹೆಕ್ಟರ್ ಕಾರು ಮಾದರಿಯು ಫೇಸ್‌ಲಿಫ್ಟ್ ಮಾದರಿಯೊಂದಿಗೆ ಮತ್ತಷ್ಟು ಗ್ರಾಹಕರನ್ನು ಆಕರ್ಷಣೆ ಮಾಡುವ ತವಕದಲ್ಲಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಹೆಕ್ಟರ್ ಕಾರು ಮಾದರಿಯು ಬಿಎಸ್-6 ಮಾದರಿಯಲ್ಲಿರುವಂತೆಯೇ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಹೊಸ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳಲ್ಲಿ ಹೊಸ ಕಾರು ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಅತ್ಯುತ್ತಮ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಹೆಕ್ಟರ್ ಕಾರು ಫೇಸ್‌ಲಿಫ್ಟ್ ಮಾದರಿಯೊಂದಿಗೆ ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜುಗೊಂಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಇನ್ನು ಹೆಕ್ಟರ್ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.18.09 ಲಕ್ಷ ಬೆಲೆ ಹೊಂದಿದ್ದು, ಸ್ಪೆಷಲ್ ಎಡಿಷನ್ ಕೂಡಾ ಮಾರಾಟಕ್ಕೆ ಲಭ್ಯವಿದೆ.

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಹೆಕ್ಟರ್ ಎಸ್‌ಯುವಿ ಬಿಡುಗಡೆ ಮಾಡಲಾದ ಮೊದಲ ವರ್ಷದ ಸಂಭ್ರಮಕ್ಕಾಗಿ ಆನಿವರ್ಸರಿ ಎಡಿಷನ್ ಬಿಡುಗಡೆಗೊಳಿಸಿದ್ದ ಎಂಜಿ ಮೋಟಾರ್ ಕಂಪನಿಯು ಈ ತಿಂಗಳಾಂತ್ಯದ ತನಕ ಸ್ಪೆಷಲ್ ಎಡಿಷನ್ ಮಾರಾಟ ಮಾಡಲಿದ್ದು, ಫೇಸ್‌ಲಿಫ್ಟ್ ಬಿಡುಗಡೆಯ ನಂತರ ಸ್ಪೆಷಲ್ ಎಡಿಷನ್ ಸ್ಥಗಿತಗೊಳಿಸಲಿದೆ.

MOST READ: 2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಡಿಲರ್ಸ್ ಯಾರ್ಡ್ ತಲುಪಿದ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ

ಸ್ಟ್ಯಾಂಡರ್ಡ್ ಸೂಪರ್ ವೆರಿಯೆಂಟ್‌ಗಿಂತಲೂ ಆನಿವರ್ಸರಿ ಎಡಿಷನ್ ಮಾದರಿಯಲ್ಲಿ ಯಾವುದೇ ಹೆಚ್ಚುವರಿ ಬೆಲೆ ಏರಿಕೆಯಿಲ್ಲದೆ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಆನಿವರ್ಸರಿ ಎಡಿಷನ್ ಮಾದರಿಯು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿವೆ.

More from DriveSpark

Article Published On: Saturday, January 2, 2021, 20:58 [IST]
English summary
New MG Hector Facelift Reaches Dealership. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+