ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಮೊದಲ ಬಾರಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡುವ ಸುಳಿವು ನೀಡಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಯಲ್ಲಿ ಸದ್ಯ ಎಂಜಿ ಕಂಪನಿಯು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆ ಸ್ಟ್ಯಾಂಡರ್ಡ್ ಆಗಿ ಮತ್ತು ಪೆಟ್ರೋಲ್ ಮಾದರಿಗಳಿಗಾಗಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತಿದೆ. ಆದರೆ ಹೊಸ ಕಾರುಗಳಲ್ಲಿ ಕಂಪನಿಯು 6-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಅನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಹೊಸ ಆವೃತ್ತಿಯು ಆಟೋಮ್ಯಾಟಿಕ್ ಆವೃತ್ತಿಗಳನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಸದ್ಯ ಖರೀದಿಗೆ ಲಭ್ಯವಿರುವ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ಹೈ ಎಂಡ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆರಂಭಿಕ ಪೆಟ್ರೋಲ್ ಮಾದರಿಗಳಿಗಾಗಿ ಸಿವಿಟಿ ಗೇರ್‌ಬಾಕ್ಸ್ ಸೂಕ್ತ ಆಯ್ಕೆಯಾಗಲಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಹೊಸ ಸಿವಿಟಿಯನ್ನು 1.5-ಲೀಟರ್ ಪೆಟ್ರೋಲ್ ಟರ್ಬೊ ಮಾದರಿಗಳಿಗಾಗಿ ಸಿದ್ದಪಡಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಹೊಸ ಸಿವಿಟಿ ಆಯ್ಕೆಯು ಹೆಕ್ಟರ್ ಮತ್ತು ಹೆಕ್ಟರ್ ಎರಡು ಆವೃತ್ತಿಗಳಿಗೂ ಪರಿಚಯಿಸಲಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, 2021ರ ಹೆಕ್ಟರ್ ಪ್ಲಸ್ ಮಾದರಿಯನ್ನು ಗ್ರಾಹಕರ ಬೇಡಿಕೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಸ್ಟೈಲ್, ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸೆಲೆಕ್ಟ್ ವೆರಿಯೆಂಟ್‌ಗಳೊಂದಿಗೆ ಬಿಡುಗಡೆ ಮಾಡಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ ಕಾರು ಹೊಸ ವೆರಿಯೆಂಟ್ ಸೇರ್ಪಡೆ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 13.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.13 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರಿನಲ್ಲಿ 7 ಸೀಟರ್ ಆಯ್ಕೆಯೇ ಪ್ರಮುಖ ಬದಲಾವಣೆಯಾಗಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಕಾರಿನಲ್ಲಿ ಆರಂಭಿಕ ಕಾರು ಮಾದರಿಯಾದ ಸ್ಟೈಲ್ ಆವೃತ್ತಿ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಇನ್ನುಳಿದ ಆವೃತ್ತಿಗಳಲ್ಲಿ ಕೆಲವು ಮಾದರಿಗಳಲ್ಲಿ ವೆರಿಯೆಂಟ್‌ಗೆ ಅನುಗುಣವಾಗಿ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಹೆಕ್ಟರ್ ಮತ್ತು ಹೆಕ್ಟರ್ ಕಾರು ಮಾದರಿಗಳು ಬಹುತೇಕ ತಾಂತ್ರಿಕ ಅಂಶಗಳನ್ನು ಒಂದೇ ಮಾದರಿಯಲ್ಲಿ ಪಡೆದುಕೊಂಡಿದ್ದು, ಎಂಜಿನ್ ಆಯ್ಕೆ ಮತ್ತು ಆಸನ ಸೌಲಭ್ಯಗಳು ಮಾತ್ರ ವಿಭಿನ್ನತೆಯೊಂದಿಗೆ ಗ್ರಾಹಕರನ್ನು ಸೆಳೆಯಲಿವೆ. ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯು, 6 ಸೀಟರ್ ಮಾದರಿಯಲ್ಲಿರುವಂತಹ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಅನ್ನು ಹೊಂದಿದೆ. ಆದರೆ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟಿನ ಬದಲಿಗೆ ಬೆಂಚ್ ಸೀಟನ್ನು ನೀಡಲಾಗಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.35 ಲಕ್ಷಗಳಿಂದ ರೂ.18.33 ಲಕ್ಷಗಳಾದರೆ, 6 ಸೀಟರ್ ಗಳ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.15.99 ಲಕ್ಷಗಳಿಂದ ರೂ.19.13 ಲಕ್ಷಗಳಾಗಿದೆ.

ಹೆಕ್ಟರ್ ಎಸ್‌ಯುವಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ ಎಂಜಿ ಮೋಟಾರ್

ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಹೆಕ್ಟರ್‌ ಕಾರಿನಲ್ಲಿರುವಂತಹ ಎಂಜಿನ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದ್ದು, ಗ್ರಾಹಕರು ತಮ್ಮಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

More from DriveSpark

Article Published On: Wednesday, February 3, 2021, 8:45 [IST]
English summary
MG is planning to launch Hector SUV with a CVT automatic in India soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+