ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಹೊಸ ಒನ್ ಮಿಡ್ ಸೈಜ್ ಎಸ್‍ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಎಂಜಿ ಒನ್ ಎಸ್‍ಯುವಿಯು ಯುರೋಪಿಯನ್ ಸ್ಪೋರ್ಟಿ ಶೈಲಿಯ ವಿನ್ಯಾಸ ಮತ್ತು ಆಕರ್ಷಕ ಫೀಚರ್ಸ್ ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿ ಒನ್ ಮಿಡ್ ಸೈಜ್ ಎಸ್‍ಯುವಿಯು ಬಬಲ್ ಆರೇಂಜ್ ಮತ್ತು ವೈಲ್ಡ್ ನಸ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಎಸ್‍ಯುವಿಯಲ್ಲಿ ಲೈಫ್ ಗನ್‌ಮೆಟಲ್ ಬೂದು ಎಂಜಿ ಗ್ರಿಲ್ ಗಿಂತ ದೊಡ್ಡದಾಗಿದೆ. ವಿನ್ಯಾಸಕರು ಸಮಗ್ರ ವಿನ್ಯಾಸವನ್ನು ಸರಳಗೊಳಿಸುವ ವಿವರಗಳಿಗೆ ವಿಶೇಷ ಗಮನ ಹರಿಸಿದ್ದಾರೆ. ಟಂಗ್ಸ್ಟನ್ ಸ್ಟೀಲ್ ಎಲೆಕ್ಟ್ರೋಪ್ಲೇಟೆಡ್ ವಸ್ತುಗಳ ವೈವಿಧ್ಯಮಯ ಸಂಯೋಜನೆಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿ ಒನ್ ಎಸ್‍ಯುವಿಯು ಆಲ್-ಇನ್-ಒನ್ ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನ ಬ್ರ್ಯಾಂಡ್‌ನ ಹೊಸ ಸಿಗ್ಮಾ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಪ್ರಬಲವಾದ ಚಿಪ್ ಟೆಕ್, ಆಕ್ಟಿವ್ ಡಿಜಿಟಲ್ ಇಕೋ ಸಿಸ್ಟಮ್, ಸುಧಾರಿತ ಎಲೆಕ್ಟ್ರಿಕ್ ಆರ್ಕಿಟೆಕ್ಚರ್ ಮತ್ತು ಹಾರ್ಡ್-ಕೋರ್ ಸಾಫ್ಟ್‌ವೇರ್ ತಂತ್ರಜ್ಞಾನದಂತಹ ಸುಧಾರಿತ ತಂತ್ರಜ್ಞಾನವನ್ನು ಈ ಪ್ಲಾಟ್‌ಫಾರ್ಮ್ ಹೊಂದಿಕೊಳ್ಳುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿನ್ ಎಸ್‍ಯುವಿಯು ವ್ಯತಿರಿಕ್ತ ರೂಫ್ ರೈಲ್ ಗಳನ್ನು ಹೊಂದಿದೆ. ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಬಾಡಿಯ ಸುತ್ತಲೂ ಕಾಣಬಹುದು, ಇದರ ವ್ಹೀಲ್ ಕಮಾನುಗಳು ಸ್ಪೋರ್ಟಿ ಪ್ರೊಫೈಲ್ ನೀಡುತ್ತದೆ. ಈ ಎಸ್‍ಯುವಿ ಐದು-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಕೂಪ್ ತರಹದ ಸ್ಟೈಲಿಂಗ್ ಅನ್ನು ಒಳಗೊಂಡಿರುವ ಕಾರಣ ಹಿಂಭಾಗದ ಪ್ರೊಫೈಲ್ ಪ್ರಮುಖವಾಗಿ ಕಾಣುತ್ತದೆ. ಈ ಎಸ್‍ಯುವಿಯು ಮ್ ಎಲ್ಇಡಿ ಟೈಲ್-ಲ್ಯಾಂಪ್ ಗಳು, ಬೂಟ್ ಲಿಡ್ ಬಲವಾದ ಕ್ರೀಸ್‌ಗಳು ಮತ್ತು ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್ ಅನ್ನು ಪಡೆಯುತ್ತದೆ. ಇನ್ನು ಎಕ್ಸಾಟ್ ಪೈಪ್ ಗಳೊಂದಿಗೆ ಡ್ಯುಯಲ್-ಟೋನ್ ಬಂಪರ್ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿ ಒನ್ ಎಸ್‍ಯುವಿಯು ಅಗ್ರೇಸಿವ್ ಸ್ಟೈಲಿಂಗ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಗೆ ಬಲವಾದ ಯುರೋಪಿಯನ್ ಶೈಲಿಯ ಪ್ರೀಮಿಯಂ ಸ್ಪೋರ್ಟಿ ಸ್ಪರ್ಶವನ್ನು ಕೂಡ ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಇನ್ನು ಈ ಎಂಜಿ ಎಸ್‍ಯುವಿಯ ಒಳಬಾಗವು ಹೆಚ್ಚು ಪ್ರೀಮಿಯಂ ಆಗಿದೆ. ಎಂಜಿ ಒನ್‌ನ ಚಿತ್ರಗಳು ಕೂಪೆ-ಎಸ್‌ಯುವಿ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ. ಇದು ಡ್ಯುಯಲ್ ಟೋನ್ ಆಗಿ ಆರೆಂಜ್ ಮತ್ತು ಬ್ಲ್ಯಾಕ್ ಹಾಗೂ ಗ್ರೀನ್ ಮತ್ತು ಬ್ಲ್ಯಾಕ್ ಬಣ್ಣಗಳಿಂದ ಕೂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿ ಒನ್ ಮಿಡ್ ಸೈಜ್ ಎಸ್‍ಯುವಿಯು 4,579 ಎಂಎಂ ಉದ್ದ, 1,866 ಎಂಎಂ ಅಗಲ ಮತ್ತು 1,609 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2,670 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಎಂದು ವರದಿಗಳಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಎಂಜಿ ಒನ್ ಎಸ್‍ಯುವಿ

ಈ ಹೊಸ ಎಂಜಿನ್ ಎಸ್‍ಯುವಿಯಲ್ಲಿ 1.5 ಎಲ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 178 ಬಿಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಎಂಟಿ ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಅನ್ನು ಒಳಗೊಂಡಿರಬಹುದು.

Most Read Articles

Kannada
English summary
MG One SUV Officially Unveiled. Read In Kannada.
Story first published: Thursday, July 29, 2021, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X