439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಭಾರತದ ಕೆಲವೇ ವಾಹನ ತಯಾರಕರಲ್ಲಿ ಎಂಜಿ ಮೋಟಾರ್ಸ್ ಕೂಡ ಒಂದು. ಈ ಬ್ರಿಟಿಷ್ ಕಾರ್ ಬ್ರಾಂಡ್ ಈಗ ತನ್ನ ಜೆಡ್ಎಸ್ ಇವಿ ಮಾದರಿಯನ್ನು ಹಲವು ಮಹತ್ವದ ಬದಲಾವಣೆಗಳೊಂದಿಗೆ ನವೀಕರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಹೊಸ ಎಂಜಿ ಜೆಡ್ಎಸ್ ಇವಿ (MG ZS EV) ಯಲ್ಲಿ ಪ್ರತಿ ಚಾರ್ಜ್ ರೇಂಜ್ ಸುಧಾರಣೆಯು 439 ಕಿಮೀಗಳಷ್ಟು ಹೆಚ್ಚಿಸಿದೆ, ಇನ್ನು ಎಂಜಿ ಮೋಟಾರ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಈ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಅನ್ನು ಸಹ ಮಾರಾಟ ಮಾಡುತ್ತಿದ್ದಾರೆ. ಆದರೆ ನವೀಕರಿಸಿದ ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಯಾವಗ ಬಿಡುಗಡೆಯಾಗಲಿದೆ ಎಂಬುದನ್ನು ಎಂಜಿ ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಇಲ್ಲಿಯು ಕೂಡ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಬಹುದು.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಹೊಸ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ನಂತಹ ನವೀಕರಣಗಳನ್ನು ಪಡೆಯುತ್ತದೆ ಇದು ಎಲೆಕ್ಟ್ರಿಕ್ ಕಾರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ನವೀಕರಿಸಿದ ಈ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಮುಂಭಾಗದ ಪ್ರೊಫೈಲ್ ಗಮನಾರ್ಹ ಬದಲಾವಣೆಯನ್ನು ಪಡೆದಿದೆ.ಇದು ಐಸಿಇ ಚಾಲಿತ ಜೆಡ್ಎಸ್ ನಂತೆಯೇ ಹೊಸ ತೀಕ್ಷ್ಣವಾದ LED ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ. ಈ ಕಾರು ಗ್ರಿಲ್ ಅನ್ನು ತೆಗೆದು ಕವರ್ಡ್ ಪ್ಲೇಟ್ ನಿಂದ ಬದಲಾಯಿಸುತ್ತದೆ. ಮುಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ ಮತ್ತು ಇನ್ ಟೆಕ್ ನಯವಾದ ಕಡಿತಗಳೊಂದಿಗೆ ಬರುತ್ತದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಭಾರತದಲ್ಲಿ ಮಾರಾಟದಲ್ಲಿರುವ ಪ್ರಸ್ತುತ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ. ಹಿಂದಿನ ಪ್ರೊಫೈಲ್ ಕೂಡ ಸ್ವಲ್ಪ ಬದಲಾವಣೆ ಪಡೆಯುತ್ತದೆ. ಇದು ಮರುವಿನ್ಯಾಸಗೊಳಿಸಿದ ಅಲಾಯ್ ವ್ಹೀಲ್ ಗಳೊಂದಿಗೆ ಹೆಚ್ಚಿನ ದೃಶ್ಯ ಆಕರ್ಷಣೆಯನ್ನು ನೀಡುತ್ತದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಹೊಸ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೆ ಕೂಡ ನವೀಕರಿಸಿದ ಹಲವು ಬದಲಾವಣೆಗಳೊಂದಿಗೆ ಬರುತ್ತದೆ. ಹೊಸ ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ 10.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ, ಇದು ಹೊಸ ವೈಶಿಷ್ಟ್ಯಗಳು, ರಿಮೋಟ್ ಕಂಟ್ರೋಲ್ ಕಾರ್ಯಗಳು ಮತ್ತು ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್ ಆಯ್ಕೆಗಳನ್ನು ಪಡೆಯುತ್ತದೆ ಎಂದು ಬ್ರಿಟಿಷ್ ಕಾರ್ ಬ್ರಾಂಡ್ ಹೇಳಿಕೊಂಡಿದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಗೆ ಪರಿಚಯಿಸಲಾದ ಅತಿದೊಡ್ಡ ಅಪ್‌ಡೇಟ್ ಪವರ್‌ಟ್ರೇನ್ ಆಗಿದೆ. ಇದರ ಪವರ್‌ಟ್ರೇನ್ ಮುಂಭಾಗದಲ್ಲಿದೆ. ಇದು 72 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ,

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಈಗಿರುವ ಮಾಡೆಲ್ ನೀಡುತ್ತಿರುವ 262 ಕಿಮೀಗೆ ಹೋಲಿಸಿದರೆ ಇದು ಸಿಂಗಲ್ ಚಾರ್ಜ್ ನಲ್ಲಿ 439 ಕಿಮೀ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ರೇಂಜ್ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆಯು ಕೂಡ ಹೆಚ್ಚಾಗಬಹುದು.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಚಾರ್ಜಿಂಗ್ ಪೋರ್ಟ್ ಒಳಗೆ ನಾಲ್ಕು ಹಂತದ ಸೂಚಕ LED ಗಳನ್ನು ಪಡೆಯುತ್ತದೆ. ಇದು ಚಾರ್ಜಿಂಗ್ ಸ್ಥಿತಿಯ ನೋಟವನ್ನು ನೀಡುತ್ತದೆ. ಕಾರು ಟೈಪ್ 2 ಮತ್ತು ಸಿಸಿಎಸ್ ಚಾರ್ಜರ್‌ಗಳ ಸಂಯೋಜನೆಯನ್ನು ಪಡೆಯುತ್ತದೆ ಆನ್‌ಬೋರ್ಡ್ ಎಸಿ ಚಾರ್ಜರ್ ಬಳಸಿ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಇನ್ನು ಭಾರತದಲ್ಲಿ ಇಂದನ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಇದರ ನಡುವೆ ಈಗಾಗಲೇ ಮಾರಾಟವಾಗುತ್ತಿರುವ ಹಲವು ಎಲೆಕ್ಟ್ರಿಕ್ ವಾಹನಗಳು ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಎಂಜಿ ಜೆಡ್ಎಸ್ ಇವಿ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ, 2020-21 ವಾರ್ಷಿಕ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡಾ 53 ರಷ್ಟು ಬೆಳವಣಿಗೆಯನ್ನು ಕಂಡಿದೆ. ಪ್ರಸ್ತುತ, ಟಾಟಾ ನೆಕ್ಸಾನ್ ಇವಿ ವಿಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರ್ ಆಗಿದೆ.

439 ಕಿ.ಮೀ ರೇಂಜ್ ಹೊಂದಿರುವ MG ZS EV ಫೇಸ್‌ಲಿಫ್ಟ್ ಅನಾವರಣ

ಎಂಜಿ ಮೋಟಾರ್ ಇಂಡಿಯಾ ಕಳೆದ ವರ್ಷ ಜನವರಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಾದರಿಯಾದ ಜೆಡ್ಎಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆ ಸಮಯದಲ್ಲಿ ದೇಶದಲ್ಲಿ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿ ಈ ಜೆಡ್ಎಸ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರಿಂದ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಕಾರನ್ನು ನವೀಕರಿಸಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಬಹುದು. ಇದರ ಜೊತೆಗೆ ಕಂಪನಿಯು ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮುಂದಿನ ವರ್ಷಗಳಲ್ಲಿ ಪರಿಚಯಿಸಲಿದೆ,

More from DriveSpark

Article Published On: Friday, October 8, 2021, 15:02 [IST]
English summary
Mg zs ev facelift unveiled range features new updates details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+