ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಮೊದಲು ಕಾರುಗಳನ್ನು ಪ್ರಯಾಣಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ನಂತರ ಕಾರುಗಳನ್ನು ರೇಸ್ ಗಳಿಗಾಗಿ, ಆಫ್ ರೋಡಿಂಗ್ ಗಳಿಗಾಗಿ ಅಭಿವೃದ್ಧಿ ಪಡಿಸಲಾಯಿತು. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಲ್ಲಾ ಕಾರುಗಳನ್ನು ಅತ್ಯಾಕರ್ಷಕ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಈಗ ಮಿನಿ ಹೆಲಿಕಾಪ್ಟರ್ ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ಕಾರ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಈ ಕುರಿತು ಯೂಟ್ಯೂಬ್ ಚಾನೆಲ್ ಒಂದು ಪೋಸ್ಟ್ ಮಾಡಿರುವ ವೀಡಿಯೊ ವೈರಲ್ ಆಗಿದೆ. ಅಂದ ಹಾಗೆ Kodiaq ಎಸ್‌ಯು‌ವಿಯು Skoda ಕಂಪನಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರಿನ ಮಾದರಿಯನ್ನು ಮಿನಿ ಹೆಲಿಕಾಪ್ಟರ್ ಅನ್ನು ಸಾಗಿಸುವ ಸಾಮರ್ಥ್ಯದಿಂದ ನಿರ್ಮಿಸಲಾಗಿದೆ. ಟಾಪ್ ಗೇರ್ ಎಂಬ ಯೂಟ್ಯೂಬ್ ಚಾನೆಲ್ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ತನ್ನ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಈ ವೀಡಿಯೊದಲ್ಲಿ ಹೊಸ ತಲೆಮಾರಿನ Skoda Kodiaq ಎಸ್‌ಯು‌ವಿಯನ್ನು ಕಾಣ ಬಹುದು. ಈ ವೀಡಿಯೊದಲ್ಲಿರುವ ಎಸ್‌ಯು‌ವಿಯು ಇನ್ನೂ ಬಿಡುಗಡೆಯಾಗಿಲ್ಲ. ಶೀಘ್ರದಲ್ಲೇ ಈ ಎಸ್‌ಯು‌ವಿಯನ್ನು ಬಿಡುಗಡೆಗೊಳಿಸಲಾಗುವುದು. ಈ ಸಂದರ್ಭದಲ್ಲಿ ಹೊಸ Kodiaq ಎಸ್‌ಯು‌ವಿಯತ್ತ ಜನರನ್ನು ಆಕರ್ಷಿಸಲು ಹೊಸ ಪ್ರಚಾರದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಹೊಸ ತಲೆಮಾರಿನ Kodiaq ಎಸ್‌ಯು‌ವಿಯು ಈ ವರ್ಷದ ಅಂತ್ಯದ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ತಲೆಮಾರಿನ Kodiaq ಎಸ್‌ಯು‌ವಿಯನ್ನು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಬಿಡುಗಡೆಗೊಳಿಸಲಾಗುವುದು. ಹೊಸ ಎಸ್‌ಯು‌ವಿಯ ವಿತರಣೆಯು ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆಗಳಿವೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಈ ಹಿನ್ನೆಲೆಯಲ್ಲಿ ಹೊಸ ಎಸ್‌ಯು‌ವಿಯು ಕಾರು ಪ್ರಿಯರ ಗಮನ ಸೆಳೆಯಲಿ ಎಂಬ ಕಾರಣಕ್ಕೆ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. 2021 ರ ಹೊಸ Kodiaq ಎಸ್‌ಯು‌ವಿಯು ಹೆಚ್ಚು ತೂಕವನ್ನು ಸಹ ತಡೆದುಕೊಳ್ಳಬಲ್ಲದು ಎಂದು ತಿಳಿದು ಬಂದಿದೆ. ಮಿನಿ ಹೆಲಿಕಾಪ್ಟರ್ ಈ ಎಸ್‌ಯು‌ವಿಯ ಮೇಲೆ ಲ್ಯಾಂಡಿಂಗ್ ಆಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಈ ಹಿಂದೆ ಹೊಸ ತಲೆಮಾರಿನ Creta ಕಾರು ಹೆಚ್ಚು ಗಟ್ಟಿಯಾದ ನಿರ್ಮಾಣವನ್ನು ಹೊಂದಿದೆ ಎಂಬುದನ್ನು ತೋರಿಸುವ ವೀಡಿಯೊವನ್ನು Hyundai ಕಂಪನಿಯು ಬಿಡುಗಡೆ ಮಾಡಿತ್ತು ಎಂಬುದು ಗಮನಾರ್ಹ. ಈಗ Kodiaq ಎಸ್‌ಯು‌ವಿಯ ಸ್ಥಿರತೆಯನ್ನು ತೋರಿಸಲು Skoda ಕಂಪನಿಯು ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. ಹೊಸ 2021 Kodiaq ಎಸ್‌ಯು‌ವಿಯನ್ನು ಹೆಚ್ಚು ಆಕರ್ಷಕ ಕಾರು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

2021ರ Kodiaq ಎಸ್‌ಯು‌ವಿಯು ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲ್ಯಾಂಪ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಬಟರ್ ಫ್ಲೈ ಶೈಲಿಯ ಗ್ರಿಲ್ ಹಾಗೂ ಅಪ್ ಡೇಟ್ ಮಾಡಲಾದ ಬಂಪರ್ ಗಳನ್ನು ಹೊಂದಿದೆ. ಕಾರಿನ ಹಿಂಭಾಗದಲ್ಲೂ ಇದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಗಮನಾರ್ಹ. ಇದರದ ಜೊತೆಗೆ ಈ ಎಸ್‌ಯು‌ವಿಯ ಆಕರ್ಷಣೆಯನ್ನು ಹೆಚ್ಚಿಸಲು ರೂಫ್ ರೇಲ್, ಶಾರ್ಕ್ ಪ್ಯಾಡಲ್ ಸಿಸ್ಟಂ ಹೊಂದಿರುವ ಆಂಟೆನಾ, ಹೊಸ ಶೈಲಿಯ ಅಲಾಯ್ ವ್ಹೀಲ್ ಹಾಗೂ ಸ್ಪಾಯ್ಲರ್ ಅನ್ನು ನೀಡಲಾಗಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

Kodiaq ಎಸ್‌ಯು‌ವಿಯ ಇಂಟಿರಿಯರ್'ನಲ್ಲಿಯೂ ಹಲವಾರು ಹೊಸ ಫೀಚರ್ ಗಳನ್ನು ನೀಡಲಾಗಿದೆ. Kodiaq ಎಸ್‌ಯು‌ವಿಯ ಇಂಟಿರಿಯರ್'ನಲ್ಲಿ ಡ್ಯುಯಲ್-ಸ್ಪೋಕ್ ಅಲಾಯ್ ವ್ಹೀಲ್, ಹೊಸ ಸ್ಟೈಲಿಶ್ ಹಾಗೂ ಆರಾಮದಾಯಕವಾದ ಸೀಟುಗಳು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಿಗೆ ಹೊಸ ಡಿಜಿಟಲ್ ಆಕ್ಟಿವೇಟೆಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಳನ್ನು ನೀಡಲಾಗಿದೆ.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಇದರ ಜೊತೆಗೆ ಪನೋರಾಮಿಕ್ ಸನ್ ರೂಫ್, ವರ್ಸಟೈಲ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, ವರ್ಸಟೈಲ್ ಏರ್ ಪ್ಯಾಕ್, ಆಂಬಿಯೆಂಟ್ ಎಲೆಕ್ಟ್ರಿಕ್ ಲೈಟಿಂಗ್, ಪ್ರೀಮಿಯಂ ಸ್ಪೀಕರ್, ವೆಂಟಿಲೇಟೆಡ್ ಹಾಗೂ ಮಸಾಜ್ ಸೀಟುಗಳು, ಆರ್ಮ್ ರೆಸ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಇನ್ನೂ ಹಲವು ಫೀಚರ್ ಗಳನ್ನು ನೀಡಲಾಗಿದೆ. 2021ರ Skoda Kodiaq ಎಸ್‌ಯು‌ವಿಯಲ್ಲಿ 2.0 ಲೀಟರ್ ಡಿಎಸ್ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ ಗರಿಷ್ಠ 187 ಬಿ‌ಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ, 7 ಸ್ಪೀಡ್ ಡಿ‌ಎಸ್‌ಜಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸಹ ನೀಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ Skoda ಆಟೋ ಇಂಡಿಯಾ ಕಂಪನಿಯು ಮೆಟ್ರೋ ನಗರವಲ್ಲದ ಸ್ಥಳಗಳಲ್ಲಿ ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳನ್ನು ತೆರೆಯುವುದಾಗಿ ಘೋಷಿಸಿತ್ತು.

ಹೊಸ SKoda Kodiaq ಎಸ್‌ಯು‌ವಿ ರೂಫ್ ಮೇಲೆ ಲ್ಯಾಂಡ್ ಆದ ಮಿನಿ ಹೆಲಿಕಾಪ್ಟರ್

ಈ ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳು ಈ ಸ್ಥಳಗಳಲ್ಲಿ ಮಾರಾಟ ಹಾಗೂ ಡೀಲರ್ ಶಾಖೆಗಳೊಂದಿಗೆ ಸಂಯೋಜಿಸಲ್ಪಟ್ಟು ಗ್ರಾಹಕರಿಗೆ ಮಾರಾಟದ ನಂತರದ ಸೇವಾ ಅವಶ್ಯಕತೆಗಳನ್ನು ಪೂರೈಸಲಿವೆ. ಈ ವರ್ಷದ ಅಂತ್ಯದ ವೇಳೆಗೆ Skoda ಕಂಪನಿಯು ಈ 30 ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳನ್ನು ದೇಶದಲ್ಲಿ ತೆರೆಯಲು ನಿರ್ಧರಿಸಿದೆ. ಇವುಗಳು ನಿಯಮಿತ ಮೆಂಟೆನೆನ್ಸ್ ಹಾಗೂ ಸಾಮಾನ್ಯ ಸರ್ವೀಸ್ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತವೆ. ಜೆಕ್ ಮೂಲದ ಕಾರು ತಯಾರಕ ಕಂಪನಿಯಾದ Skoda ಆಟೋ ಈ ಪ್ರತಿಯೊಂದು ಸ್ಥಳಗಳಲ್ಲಿ ಟೂ ಬೇ ಗಳ ಕನಿಷ್ಠ ಸೇವಾ ಸೌಲಭ್ಯವನ್ನು ನೀಡಲಿದೆ.

Most Read Articles

Kannada
Read more on ಸ್ಕೋಡಾ skoda
English summary
Mini helicopter lands on the roof of a new skoda kodiaq suv video details
Story first published: Tuesday, October 5, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X