ಭಾರತದಲ್ಲಿ ಐಷಾರಾಮಿ 2021ರ ಮಿನಿ ಕಂಟ್ರಿಮ್ಯಾನ್ ಬಿಡುಗಡೆ
ಮಿನಿ ಕಂಪನಿಯು ತನ್ನ ಹೊಸ ಕಂಟ್ರಿಮ್ಯಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಿನಿ ಕಂಟ್ರಿಮ್ಯಾನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39.50 ಲಕ್ಷಗಳಾಗಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಮತ್ತು ಟೆಸ್ಟ್ ಡ್ರೈವ್ ಅನ್ನು ಪ್ರಾರಂಭಿಸಿದೆ. ಇದು ಭಾರತದಾದ್ಯಂತ ಕಂಪನಿಯ ಎಲ್ಲಾ ಡೀಲರುಗಳ ಬಳಿ ಲಭ್ಯವಿರುತ್ತದೆ. ಹೊಸ ಮಿನಿ ಕಂಟ್ರಿಮ್ಯಾನ್ ಎಸ್‌ಎವಿ (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಎಂದು ಕರೆಯಲಾಗುತ್ತದೆ. ಈ ಮಿಮಿನಿ ಕಂಟ್ರಿಮ್ಯಾನ್ ನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ಎರಡೂ ವೆರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ.

ಟಾಪ್-ವೆರಿಯೆಂಟ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.43.40 ಲಕ್ಷಗಳಾಗಿದೆ. 2021ರ ಮಿನಿ ಕಂಟ್ರಿಮ್ಯಾನ್ ಒಂದೇ ರೀತಿಯ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಸಾಗಿಸುವುದರ ಜೊತೆಗೆ ಹಲವಾರು ರಿಫ್ರೆಶ್ ಸ್ಟೈಲಿಂಗ್ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

2021ರ ಕಂಟ್ರಿಮ್ಯಾನ್‌ನಲ್ಲಿನ ಹೊಸ ಸ್ಟೈಲಿಂಗ್ ವೈಶಿಷ್ಟ್ಯಗಳು ಯೂನಿಯನ್ ಜ್ಯಾಕ್ ವಿನ್ಯಾಸದೊಂದಿಗೆ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು, ಹೊಸ ರೇಡಿಯೇಟರ್ ಗ್ರಿಲ್ ಮತ್ತು ವ್ಯತಿರಿಕ್ತ ರೂಫ್ ಅನ್ನು ಒಳಗೊಂಡಿವೆ.

ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಟ್ ನಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳು ರನ್-ಫ್ಲಾಟ್ ಟೈರ್ ಮತ್ತು ಹೆಚ್ಚುವರಿ ಏರೋಡೈನಾಮಿಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮಾದರಿಯಲ್ಲಿ ಒಳಭಾಗದಲ್ಲಿ ಕಾರ್ಬನ್ ಬ್ಲ್ಯಾಕ್ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ, ಆದರೆ ಸರಣಿಯಲ್ಲಿ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಟ್ರಿಮ್ ಸಿಲ್ವರ್ ಟ್ರಿಮ್ ಜೊತೆಗೆ ಪ್ರೀಮಿಯಂ ಲೆದರ್ ಯ್ಕೆಯನ್ನು ಒಳಗೊಂಡಿದೆ.

ಹೊಸ ಮಿನಿ ಕಂಟ್ರಿಮ್ಯಾನ್ ಕಾರಿನಲ್ಲಿ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ ಪ್ಲೇ, ಆಂಬಿಯೆಂಟ್ ಲೈಟಿಂಗ್ ಮತ್ತು ಇನ್ನೂ ಹಲವು ಫೀಚರ್ ಗಳನ್ನು ಒಳಗೊಂಡಿವೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಿನಿ ಕಂಟ್ರಿಮ್ಯಾನ್ ಎರಡೂ ವೆರಿಯೆಂಟ್ ಗಳಲ್ಲಿ ಒಂದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಘ್ ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿರುತ್ತದೆ.

ಹೊಸ ಮಿನಿ ಕಂಟ್ರಿಮ್ಯಾನ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಮಿನಿ ಕಂಟ್ರಿಮ್ಯಾನ್ ಹಲವಾರು ಫೀಚರ್ ಗಳು ಮತ್ತು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ.


Click it and Unblock the Notifications








