ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಮಿನಿ ಶ್ಯಾಡೋ ಎಡಿಷನ್
ಮಿನಿ ಕಂಪನಿಯು ಕ್ಲಬ್‌ಮ್ಯಾನ್ ಮತ್ತು ಕಂಟ್ರಿಮ್ಯಾನ್ ಮಾದರಿಗಳಿಗಾಗಿ ಹೊಸ ಶ್ಯಾಡೋ ಎಡಿಷನ್ ಅನ್ನು ಬ್ರಿಟನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಶ್ಯಾಡೋ ಎಡಿಷನ್ ಮಿಡ್ ನೈಟ್ ಬ್ಲ್ಯಾಕ್ ಮೆಟಾಲಿಕ್ ಬಣ್ಣವನ್ನು ಹೊಂದಿದೆ.

ಈ ಹೊಸ ಮಿನಿ ಶ್ಯಾಡೋ ಎಡಿಷನ್ ಸಿಲ್ವರ್ ರೂಫ್ ಮತ್ತು ಪಿಯಾನೋ ಬ್ಲ್ಯಾಕ್ ಹೊರಭಾಗವನ್ನು ಹೊಂದಿದೆ, ಈ ಹೊಸ ಶ್ಯಾಡೋ ಎಡಿಷನ್ ನಲ್ಲಿ ಕೂಪರ್ ಮತ್ತು ಕೂಪರ್ ಎಸ್ ಎಂಜಿನ್‌ಗಳ ಆಧಾರದ ಮೇಲೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡುತ್ತಾರೆ. ಇನ್ನು ಶ್ಯಾಡೋ ಎಡಿಷನ್ 19 ಇಂಚಿನ ಜಾನ್ ಕೂಪರ್ ವರ್ಕ್ಸ್ ಸರ್ಕ್ಯೂಟ್ ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಿದ್ದಾರೆ.

ಹೊಸ ಕ್ಲಬ್‌ಮ್ಯಾನ್ ಕಂಟ್ರಿಮ್ಯಾನ್ ಶ್ಯಾಡೋ ಎಡಿಷನ್ ನಲ್ಲಿ ದೊಡ್ಡ ಸ್ಪಾಯ್ಲರ್ ಮತ್ತು ಆಕರ್ಷಕವಾಗಿ ಕಾಣುವ ಎಲ್ಇಡಿ ಲೈಟ್ ಗಳು ಸೇರಿದಂತೆ ಜೆಸಿಡಬ್ಲ್ಯೂ ಏರೋಡೈನಾಮಿಕ್ ಕಿಟ ಅನ್ನು ಒಳಗೊಂಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಈ ಸ್ಪೆಷಲ್ ಎಡಿಷನ್ ಬಾನೆಟ್ ಮತ್ತು ಎ-ಪ್ಯಾನೆಲ್‌ನಲ್ಲಿ ಗ್ರಾಫಿಕ್ ಅನ್ನು ಹೊಂದಿದ್ದರೆ, ರೂಫ್ ರೈಲ್ ಲೋಗೊವನ್ನು ಹೊಂದಿದೆ. ಇನ್ನು ರೂಫ್ ರೈಲ್ ಗಳನ್ನು ಕಂಟ್ರಿಮ್ಯಾನ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇನ್ನು ಈ ಹೊಸ ಮಿನಿ ಶ್ಯಾಡೋ ಎಡಿಷನ್ ಒಳಭಾಗದಲ್ಲಿ ಆಂಥ್ರಾಸೈಟ್ ಹೆಡ್‌ಲೈನಿಂಗ್ ಮತ್ತು ಹೆಚ್ಚುವರಿ ಗ್ರಾಫಿಕ್ಸ್‌ನೊಂದಿಗೆ ಹೈಲೈಟ್ ಮಾಡಲಾದ ಡ್ಯಾಶ್ ಟ್ರಿಮ್ ಮತ್ತು ಟ್ರೆಡ್‌ಪ್ಲೇಟ್‌ಗಳೊಂದಿಗೆ ಪಿಯಾನೋ ಬ್ಲ್ಯಾಕ್ ಟ್ರಿಮ್ ಅನ್ನು ಹೊಂದಿವೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಇದರ ಒಳಭಾಗದಲ್ಲಿ ಜೆಸಿಡಬ್ಲ್ಯೂ ಸ್ಪೋರ್ಟ್ಸ್ ಸೀಟುಗಳು ಮತ್ತು ಲೆದರ್ ನಿಂದ ಕೂಡಿದ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಹೊಸ 5.5-ಇಂಚಿನ ಡಿಜಿಟಲ್ ಡಿಸ್ ಪ್ಲೇ ಕಾಕ್‌ಪಿಟ್ ಅನ್ನು ಅಳವಡಿಸಲಾಗುತ್ತದೆ.

ಇದು ಯುಎಸ್‌ಬಿ ಹೊಂದಿರುವ ಬ್ಲೂಟೂತ್, ರಿಯರ್ ಪಾರ್ಕ್ ಕಂಟ್ರೋಲ್ ಮತ್ತ್ಯ್ ಇಂಟಿರಿಯರ್ ಲೈಟ್ಸ್ ಪ್ಯಾಕ್ ಅನ್ನು ಹೊಂದಿದೆ. ಇದರೊಂದಿಗೆ ಸ್ಪೋರ್ಟ್ ಮತ್ತು ಗ್ರೀನ್ ಸೆಟ್ಟಿಂಗ್‌ಗಳ ನಡುವೆ ಬದಲಾಯಿಸಬಹುದು. ಡ್ರೈವಿಂಗ್ ಮೋಡ್‌ಗಳನ್ನು ಬದಲಾಯಿಸಬಹುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಮಿನಿ ಶ್ಯಾಡೋ ಎಡಿಷನ್ ನಲ್ಲಿ ಎಕ್ಸೈಟ್‌ಮೆಂಟ್ ಪ್ಯಾಕ್' ಅನ್ನು ಸಹ ಆಯ್ಜೆ ಮಾಡಬಹುದು. ಇದರಲ್ಲಿ ಮಿನಿ ಲೋಗೋ ಪ್ರೊಜೆಕ್ಷನ್ ಮತ್ತು ಎಲ್ಇಡಿ ಮೂಡ್ ಲೈಟಿಂಗ್ ಅನ್ನು ಒಳಗೊಂಡಿದೆ. ಅಥವಾ 'ನ್ಯಾವಿಗೇಷನ್ ಪ್ಯಾಕ್' 8.8-ಇಂಚಿನ ಡಿಸ್ ಪ್ಲೇ, ನ್ಯಾವಿಗೇಷನ್, ರಿಯಲ್-ಟೈಮ್ ಟ್ರಾಫಿಕ್ ಮಾಹಿತಿ (ಆರ್‌ಟಿಟಿಐ), ಆಪಲ್ ಕಾರ್ ಪ್ಲೇ ಮತ್ತು ಎಮರ್ಜನ್ಸಿ ಕಾಲ್ ಫೀಚರ್ ಅನ್ನು ಒಳಗೊಂಡಿದೆ.

ಇದಲ್ಲದೆ, ಕಂಫರ್ಟ್ ಪ್ಯಾಕ್, ಕಂಫರ್ಟ್ ಪ್ಲಸ್ ಪ್ಯಾಕ್ ಮತ್ತು ನ್ಯಾವಿಗೇಷನ್ ಪ್ಲಸ್ ಪ್ಯಾಕ್ ಸಹ ವೈರ್‌ಲೆಸ್ ಚಾರ್ಜಿಂಗ್ ಮತ್ತು ಹೆಡ್-ಅಪ್ ಡಿಸ್ ಪ್ಲೇಯನ್ನು ಆಯ್ಕೆ ಮಾಡಬಹುದು. ಈ ಹೊಸ ಮಿನಿ ಕ್ಲಬ್‌ಮ್ಯಾನ್ ಕಂಟ್ರಿಮ್ಯಾನ್ ಶ್ಯಾಡೋ ಎಡಿಷನ್ ಶೀಘ್ರದಲ್ಲೇ ಬ್ರಿಟನ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಸ್ಪೆಷಲ್ ಎಡಿಷನ್ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








