ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿ ವೈವಿಧ್ಯಮಯ ಮಾದರಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಕೂಡ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ.

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಇದರಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ದೇಶದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಕಳೆದ ತಿಂಗಳಿನಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಬಲೆನೊ ಕಾರು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಈ ಮಾರುತಿ ಬಲೆನೊ ಕಾಕಾರನ್ನು ಹಲವರು ಮಾಡಿಫೈ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಡಿಫೈಗೊಂಡ ಬಲೆನೊ ಕಾರಿನ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತದೆ. ಅದರೆ ಬಲೆನೊ ಕಾರನ್ನು ವಿಭಿನ್ನವಾಗಿ ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಈ ಮಾಡಿಫೈಗೊಂಡ ಮಾರುತಿ ಬಲೆನೊ ಕಾರು ಗ್ರೇ ಬಣ್ಣವನ್ನು ನೀಡಲಾಗಿದೆ. ಇದರೊಂದಿನ ಲೈಮ್ ಗ್ರೀನ್ ಅಸ್ಸೆಂಟ್ ಈ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡಿದೆ. ಈ ಬಣ್ಣದ ಆಯ್ಕೆಯಲ್ಲಿ ಆಸ್ಟನ್ ಮಾರ್ಟಿನ್ ಎಎಂಆರ್ ಮಾದರಿಗಳನ್ನು ನೆನಪಿಸುತ್ತವೆ.

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಮರ್ಸಿಡಿಸ್-ಎಎಂಜಿ ಮಾದರಿಗಳಿಂದ ಸ್ಫೂರ್ತಿ ಪಡೆದಂತೆ ಕಾಣುವ ಬಂಪರ್ ಅನ್ನು ಹೊಂದಿದೆ. ಇದರ ಮೆಷ್ ಗ್ರಿಲ್ ಮತ್ತು ಬೃಹತ್ ಏರ್ ಡ್ಯಾಮ್ ಅನ್ನು ಹೊಂದಿದೆ. ಇನ್ನು ಮುಂಭಾಗ ಬಂಪರ್ ಸಾಮಾನ್ಯ ಫಾಗ್ ಲ್ಯಾಂಪ್ ಜೊತೆಗೆ ಸ್ಪ್ಲಿಟರ್ ಮತ್ತು ಅಸಿಸ್ಟ್ ಎಲ್ಇಡಿ ಲ್ಯಾಂಪ್ ಸಹ ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಇನ್ನು ಈ ಕಾರಿನ ಹೆಡ್‌ಲ್ಯಾಂಪ್‌ಗಳಿಗೆ ಸ್ಪೋಕ್ಡ್ ಎಫೆಕ್ಟ್ ಅನ್ನು ನೀಡಲಾಗಿದೆ. ಹೊಸ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ಒಆರ್ವಿಎಂಗಳೊಂದಿಗೆ ಬರುತ್ತದೆ. ಈ ಬಲೆನೊದಲ್ಲಿನ ಅತ್ಯಂತ ಸೊಗಸಾದ ಬಿಟ್‌ಗಳಲ್ಲಿ ಒಂದಾದ ಅದರ ಮಲ್ಟಿ-ಸ್ಪೋಕ್ ಬ್ಲ್ಯಾಕ್ಡ್-ಔಟ್ ಅಲಾಯ್ ವ್ಹೀಲ್ ಗಳು ಲೋ ಪ್ರೊಫೈಲ್ ಟೈರ್‌ಗಳಲ್ಲಿ ಸುತ್ತಲಾಗಿದೆ.

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಡೋರ್ ಗಾರ್ಡ್‌ಗಳು, ವ್ಹೀಲ್, ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಇಂಟಿರಿಯರ್ ನಲ್ಲಿ ಕೆಲವು ಗ್ರೀನ್ ಅಸ್ಸೆಂಟ್ ಗಳಿವೆ. ಈ ಹ್ಯಾಚ್‌ಬ್ಯಾಕ್‌ನ ರೂಫ್-ಮೌಂಟಡ್ ಸ್ಪಾಯ್ಲರ್ ಮತ್ತು ಹಿಂಭಾಗದ ಬಂಪರ್‌ಗೆ ಡಿಫ್ಯೂಸರ್ ತರಹದ ಎಫೆಕ್ಟ್ ಅನ್ನು ನೀಡಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಮಾರುತಿ ಬಲೆನೊ ಕಾರಿನ ಬಹಳ ವಿಶಾಲವಾದ ಕ್ಯಾಬಿನ್ ಪಡೆಯುತ್ತಾನೆ. ಇದು ಫ್ಯಾಬ್ರಿಕ್ ಸೀಟುಗಳನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿ ಬ್ಲೂ ಮತ್ತು ಬ್ಲ್ಯಾಕ್ ಥೀಮ್ ಅನ್ನು ಪಡೆಯುತ್ತದೆ. ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ನೀಡಲಾಗಿದೆ.

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಇನ್ನು ಇದರಲ್ಲಿ ಮಧ್ಯದಲ್ಲಿ ಡಿಜಿಟಲ್ ಎಂಐಡಿಯೊಂದಿಗೆ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಕ್ಲೈಮೇಟ್ ಕಂಟ್ರೋಲ್ ನಂತರಹ ಫೀಚರ್ ಗಳನ್ನು ಕೂಡ ನೀಡಿದ್ದಾರೆ.

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಮಾರುತಿ ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಸ್ಟ್ರೀಟ್ ರೇಸರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಸುಜುಕಿ ಬಲೆನೊ

ಮಾರುತಿ ಬಲೆನೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಆದರೆ ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯು ಎಲ್ಲಾ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

More from DriveSpark

Article Published On: Thursday, April 29, 2021, 9:58 [IST]
English summary
Modified Maruti Suzuki Baleno Looks Sinister As A Street Racer. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+