Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು ಹೇಳಿ; ಸುವೇಂದುಗೆ ಒಮರ್ ತಿರುಗೇಟು
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೂ.10 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
ಭಾರತದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು ಇತ್ತೀಚೆಗೆ ಮೂರು ಹೊಸ ಐಷಾರಾಮಿ ಎಸ್‌ಯುವಿಗಳನ್ನು ಖರೀದಿಸಿದ್ದಾರೆ. ಇದೀಗ ಭಾರತದ ಅತ್ಯಂತ ದುಬಾರಿ ದುಬಾರಿ ಎಸ್‍ಯುವಿಯಾದ ರೋಲ್ಸ್ ರಾಯ್ಸ್ ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಕೂಡ ಖರೀದಿಸಿದ್ದಾರೆ.

ಮುಖೇಶ್ ಅಂಬಾನಿ ಅವರ ಗ್ಯಾರೇಜ್‌ನಲ್ಲಿರುವ ಮೂರನೇ ಕುಲಿನನ್ ಕಾರು ಇದಾಗಿದೆ. ಇವರ ಕಾರು ಗ್ಯಾರೇಜ್ ಅನ್ನು ಜಿಯೋ ಗ್ಯಾರೇಜ್ ಎಂದು ಕರೆಯಲಾಗುತ್ತದೆ. ಹೊಸ ರೋಲ್ಸ್ ರಾಯ್ಸ್ ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಕಾರನ್ನು ಮುಂಬೈನ ಅಂಬಾನಿ ಕುಟುಂಬದ ಮನೆಯಾದ ಆಂಟಿಲ್ಲಾದ ಡ್ರೈವಾಲ್ನಲ್ಲಿ ನಿಲ್ಲಿಸಲಾಗಿದೆ. ಇದರ ವೀಡಿಯೋವನ್ನು ಸಿ12 ವ್ಲಾಗ್ಸ್ ಬಹಿರಂಗಪಡಿಸಿದೆ. ಕಾರು ಸ್ಪಷ್ಟವಾಗಿ ಕಾಣುವುದಿಲ್ಲ ಆದ ಆದರೆ ಮುಂಭಾಗದ ಗ್ರಿಲ್‌ನಲ್ಲಿರುವ ಕಪ್ಪು ಕ್ರೋಮ್ ನಿಂದಾಗಿ ಇದು ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯೆಂದು ಖಚಿತವಾಗಿ ಹೇಳಬಹುದು.

ಇವರು ಖರೀದಿಸಿದ ರೋಲ್ಸ್ ರಾಯ್ಸ್ ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಯಾವುದೇ ಕಸ್ಟಮೈಸ್ ಆಯ್ಕೆ ಇಲ್ಲದೆ ರೂ.8.2 ಕೋಟಿಯಿಂದ ಬೆಲೆಯು ಪ್ರಾರಂಭವಾಗುತ್ತದೆ. ಅಂಬಾನಿ ಕುಟುಂಬ ಯಾವಾಗಲೂ ಅವರ ಕಾರುಗಳನ್ನು ಕಸ್ಟಮೈಸ್ ಮಾಡುತ್ತಾರೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಅದೇನೇ ಇದ್ದರೂ ಇದರ ಮೂಲ ಬೆಲೆ ರೂ.8.2 ಕೋಟಿ ಗಳಿದ್ದರೂ ಸಹ ಆನ್ ರೋಡ್ ಬೆಲೆಯು ರೂ. 10 ಕೋಟಿ ಅಧಿಕವಾಗಿದೆ. ಇದು ಭಾರತದ ಅತ್ಯಂತ ದುಬಾರಿ ಎಸ್‍ಯುವಿಯಾಗಿದೆ. ರೋಲ್ಸ್ ರಾಯ್ಸ್ ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯು ಕಾರಿನ ಸುತ್ತಲೂ ಬ್ಲ್ಯಾಕ್ ಅಂಶಗಳೊಂದಿಗೆ ಐಷಾರಾಮಿ ಮತ್ತು ರಗಡ್ ಲುಕ್ ಅನ್ನು ಹೊಂದಿದೆ.

ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯು ಸ್ಟ್ಯಾಂಡರ್ಡ್ ಕುಲಿನನ್ ಗಿಂತ ಸುಮಾರು ರೂ.1.25 ಕೋಟಿಯು ಹೆಚ್ಚು ದುಬಾರಿಯಾಗಿದೆ. ಇನ್ನು ರೋಲ್ಸ್ ರಾಯ್ಸ್ ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಕಾರಿನ ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 22 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೆಚ್ಚು ಪ್ರೀಮಿಯಂ ರೋಲ್ಸ್ ರಾಯ್ಸ್ ಕುಲಿನನ್ ಬ್ಲ್ಯಾಕ್ ಬ್ಯಾಡ್ಜ್ ಕಾರಿನಲ್ಲಿ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 600 ಬಿಹೆಚ್‍ಫಿ ಪವರ್ ಮತ್ತು 900 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2019ರಲ್ಲಿ ಮುಖೇಶ್ ಅಂಬಾನಿ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದರು. ನಂತ ಅವರು ಚಾಪೆಲ್ ಬಣ್ಣದ ಕುಲಿನನ್ ಕಾರನ್ನು ಇತ್ತೀಚೆಗೆ ಖರೀಸಿದ್ದರು. ಇದೀಗ ಮೂರನೇ ಕುಲಿನನ್ ಖರೀದಿಸಿದ್ದಾರೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಸ್ಟ್ಯಾಂಡರ್ಡ್ ಕುಲಿನನ್ ಕಾರಿಗೆ ಹೋಲಿಸಿದರೆ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯು 29 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಂಬಾನಿ ಅವರ ಬಳಿ ಇರುವ ರೋಲ್ಸ್ ರಾಯ್ಸ್ ಕಾರುಗಳ ನಿಕರ ಸಂಖ್ಯೆಯು ಯಾರಿಗೂ ತಿಳಿದಿಲ್ಲವಾದರೂ, ನಾಲ್ಕು ರೋಲ್ಸ್ ರಾಯ್ಸ್ ಪ್ರಯಾಣಿಸುವಾಗ ಕಾಣಿಸಿಕೊಂಡಿದೆ.

ಬ್ರಿಟಿಷ್ ಐಷಾರಾಮಿ ಕಾರು ತಯಾರಕರಾದ ರೋಲ್ಸ್ ರಾಯ್ಸ್ ಅವರ ಮೂರು ಕುಲ್ಲಿನಾನ್ ಎಸ್‌ಯುವಿಗಳನ್ನು ಹೊರತುಪಡಿಸಿ, ಅಂಬಾನಿ ಕುಟುಂಬವು ಮಾರಾಟದಲ್ಲಿ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಅನ್ನು ಸಹ ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ರೋಲ್ಸ್ ರಾಯ್ಸ್ ಫ್ಯಾಂಟಮ್ ಎಕ್ಸ್ಟಡ್ ವೀಲ್‌ಬೇಸ್ ಅನ್ನು ಹೊಂದಿದ್ದಾರೆ. ಇದರ ಬೆಲೆಯು ರೂ.13.5 ಕೋಟಿಯಾಗಿದೆ. ಇನ್ನು ಅಂಬಾನಿ ಟುಂಬವು ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆ ಅಥವಾ ಡಿಎಚ್‌ಸಿಯನ್ನು ಸಹ ಹೊಂದಿದೆ, ಇದು ವಿಶ್ವದ ಅತ್ಯಂತ ದುಬಾರಿ ಕನ್ವರ್ಟಿಬಲ್ ಕಾರುಗಳಲ್ಲಿ ಒಂದಾಗಿದೆ.

ರೋಲ್ಸ್ ರಾಯ್ಸ್ ಕುಲಿನನ್ ಎಸ್‌ಯುವಿಯ ನಂತರ ಅಂಬಾನಿಯವರ ಕುಟುಂಬವು ಬೆಂಟ್ಲೆ ಬೆಂಟಾಯ್ಗಾ ಕಾರನ್ನು ಖರೀದಿಸಿತು. ಈ ಕಾರು 2021ರ ಮಾದರಿಯ ಐಷಾರಾಮಿ ಕಾರು. ಅಂಬಾನಿ ಕುಟುಂಬವು ಬೆಂಟ್ಲಿ ಕಂಪನಿಯ ಹಲವು ಕಾರುಗಳನ್ನು ಹೊಂದಿದ್ದಾರೆ.

ಇನ್ನು ಅಂಬಾನಿ ಕುಟುಂಬವು ಭಾರತದ ಅತಿದೊಡ್ಡ ಸೂಪರ್ ಕಾರುಗಳ ಸಂಗ್ರಹವನ್ನು ಹೊಂದಿದೆ. ಇದರಲ್ಲಿ ಬಿಎಂಡಬ್ಲ್ಯು ಐ8 ನಿಂದ ಪ್ರಾರಂಭಿಸಿ, ಅವರು ಫೆರಾರಿ 812 ಸೂಪರ್‌ಫಾಸ್ಟ್, ಮೆಕ್‌ಲಾರೆನ್ 520ಎಸ್ ಸ್ಪೈಡರ್, ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್ಸ್ಟರ್, ಫೆರಾರಿ 488 ಜಿಟಿಬಿ, ಫೆರಾರಿ ಪೋರ್ಟೊಫಿನೊ ಮತ್ತು ಆಯ್ಸ್ಟನ್ ಮಾರ್ಟಿನ್ ಡಿಬಿ11 ಅನ್ನು ಸಹ ಹೊಂದಿದ್ದಾರೆ.