ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಆಡಿ ಕಂಪನಿಯ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಮುಂದಿನ ತಿಂಗಳುಗಳಲ್ಲಿ ದೇಶದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆಡಿ ಕಂಪನಿಯು ತನ್ನ ಅಧಿಕೃತ ಭಾರತದ ವೆಬ್‌ಸೈಟ್‌ನಲ್ಲಿ ಇ-ಟ್ರಾನ್ ಮಾದರಿಯ ಹೆಸರನ್ನು ಪಟ್ಟಿ ಮಾಡಿದೆ. ಆಡಿ ಇ-ಟ್ರಾನ್ ಎಸ್‍ಯುವಿ ಆಕರ್ಷಕ ಸ್ಟೈಲಿಂಗ್ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಮುಂಭಾಗದಲ್ಲಿ ಲಂಬ ಸ್ಲ್ಯಾಟ್‌ಗಳೊಂದಿಗೆ ಹೊಸ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಡಿಆರ್‌ಎಲ್‌ಗಳೊಂದಿಗೆ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿದೆ.

ಇನ್ನು ಹಿಂಭಾಗದಲ್ಲಿ ವಿಶಿಷ್ಟವಾದ ಆಡಿ ರೀತಿಯಲ್ಲಿರುವಂತೆ ಟೈಲ್ ಲ್ಯಾಂಪ್‌ಗಳು ಆಕರ್ಷಕವಾಗಿದೆ. ಇನ್ನು ಈ ಹೊಸ ಆಡಿ ಇ-ಟ್ರಾನ್ ಎಸ್‍ಯುವಿಯಲ್ಲಿ 20-ಇಂಚಿನ ಲೈಟ್ ವೈಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‌ಯುವಿ

ಹೊಸ ಆಡಿ ಇ-ಟ್ರಾನ್ ಎಸ್‍ಯುವಿಯ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್ ನಲ್ಲಿ ಎರಡು ದೊಡ್ಡ ಟಚ್‌ಸ್ಕ್ರೀನ್ ಯುನಿಟ್ ಗಳನ್ನು ನೀಡಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಆಂಬಿಯೆಂಟ್ ಲೈಟಿಂಗ್, ನಾಲ್ಕು ಹಂತದ ಕ್ಲೈಮೇಂಟ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್ ಮತ್ತು ಇತರ ಅಂಶಗಳು ಒಳಗೊಂಡಿವೆ.

ಹೊಸ ಆಡಿ ಇ-ಟ್ರಾನ್ ಎಸ್‍ಯುವಿಯಲ್ಲಿ 55 ಕ್ವಾಟ್ರೊ ರೂಪಾಂತರದಲ್ಲಿ, ಇ-ಟ್ರಾನ್ ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ ಎಂಬ ಎರಡು ಎಲೆಕ್ಟ್ರಿಕ್ ಮೋಟರ್‌ಗಳು, ಪ್ರತಿ ಆಕ್ಸಲ್‌ನಲ್ಲಿ ಇದು 402 ಬಿಹೆಚ್‍ಪಿ ಪವರ್ ಮತ್ತು 664 ಎನ್ಎಂ ಟಾರ್ಕ್ ಅನ್ನು ಉತ್ಪದಿಸುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಟಾಪ್ ಸ್ಪೀಡ್ 200 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಈ ಎಸ್‍ಯುವಿಯಲ್ಲಿ 95 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಚಾರ್ಜಿಂಗ್ ಆಯ್ಕೆಗಳು 11 ಕಿ.ವ್ಯಾಟ್ ಚಾರ್ಜರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ, ಇನ್ನು ಇದರಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಹೊಂದಿರಲಿದೆ.

ಈ ಇ-ಟ್ರಾನ್ ಎಸ್‍ಯುವಿಯು ಕೇವಲ 6.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 452 ಕಿ.ಮೀ ವರೆಗೆ ಚಲಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಎಸ್‍ಯುವಿಯನ್ನು ಸಾಮಾನ್ಯ ಚಾರ್ಜರ್ ಬಳಸಿ ಎಂಟೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಹೊಸ ಆಡಿ ಇ-ಟ್ರಾನ್ ಎಸ್‍ಯುವಿಯ ಬೆಲೆಯು ಸರಿಸುಮಾರು ಎಕ್ಸ್ ಶೋರೂಂ ಪ್ರಕಾರ ರೂ.1 ರಿಂದ 1.5 ಕೋಟಿಗಳವರೆಗೆ ಇರಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಮಾದರಿ ಇ-ಟ್ರಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು. ಇದು ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








