2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಜರ್ಮನ್ ಮೂಲದ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಆರ್‌ಎಸ್5 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಆಡಿ ಆರ್‌ಎಸ್5 ಪವರ್ ಫುಲ್ ಸ್ಪೋರ್ಟ್‌ಬ್ಯಾಕ್ ಮಾದರಿಯಾಗಿದೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಡಿ ಕಂಪನಿಯು ಹೊಸ ಆರ್‌ಎಸ್5 ಕಾರಿನ ಬಿಡುಗಡೆಯನ್ನು ದಿನಾಂಕವನ್ನು ಬಹಿರಂಗಪಡಿಸಿದೆ. ಅದರಂತೆ ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ಈ ಹೊಸ ಆಡಿ ಆರ್‌ಎಸ್5 ಕಾರು ಭಾರತದಲ್ಲಿ ಸಿಬಿಯು ಯುನಿಟ್ ಆಗಿ ಬರುತ್ತದೆ. ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಬೆಲೆಯನ್ನು ಆಡಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಅದು ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಇರಬಹುದು. ಇದರ ಬೆಲೆಯು ಸುಮಾರು ರೂ.1.5 ಕೋಟಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಡಿ ಕಂಪನಿಯು ಆರ್‌ಎಸ್5 ಕಾರನು ಕಳೆದ ವರ್ಷದ ಕೊನೆಯಲ್ಲಿ ಜಾಗತಿವಾಗಿ ಪರಿಚಯಿಸಿದ್ದರು. ಆಡಿ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಎಸ್5 ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಆರ್‌ಎಸ್5 ಮಾದರಿಯನ್ನು ಹೆಚ್ಚಿನ ಸ್ಟೈಲಿಂಗ್ ಸೂಚನೆಗಳನ್ನು ಹೊಂದಿರುತ್ತದೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಕಾರಿನ ಮುಂಭಾಗ ಅಗ್ರೇಸಿವ್ ಆಗಿ ಕಾಣುವ ಮುಂಭಾಗದ ಗ್ರಿಲ್ ಅನ್ನು ಪಡೆಯುತ್ತದೆ. ಇದು ಎಸ್5 ಗಿಂತ ಸ್ವಲ್ಪ ಅಗಲವಾಗಿರುತ್ತದೆ. ಇನ್ನು ಮುಂಭಾಗದ ಗ್ರಿಲ್ ಕೆಳಗೆ ಹೊಸ ಏರ್ ವೆಂಟ್ ಗಳಿವೆ. ಹೊಸ ಆಡಿ ಆರ್‌ಎಸ್5 ಕಾರು ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಗಳ ಒಂದು ಸೆಟ್ ಆಗಿದೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಇತರ ಪ್ರಮುಖ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಸೈಡ್ ಸಿಲ್ಸ್, ಹೊಸ ಡಿಫ್ಯೂಸರ್ ಮತ್ತು 19 ಇಂಚಿನ ವ್ಹೀಲ್ ಗಳ ಒಳಗೊಂಡಿದೆ. ಈ ಆಡಿ ಆರ್‌ಎಸ್5 ಕಾರಿನಲ್ಲಿ ಅತ್ಯಂತ ಪರಿಚಿತ 2.9-ಲೀಟರ್ ಟಿಎಫ್‌ಎಸ್‌ಐ ಟ್ವಿನ್-ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 444 ಬಿಹೆಚ್‌ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಮತ್ತು ಟಾರ್ಕ್ ಅನ್ನು ಕಳುಹಿಸಲಾಗುತ್ತದೆ. ಈ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕೇವಲ 3.9 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಆಡಿ ಆರ್‌ಎಸ್5 ಕಾರು 280 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಪೋರ್ಟ್‌ಬ್ಯಾಕ್ ಟರ್ಬೊ ಬ್ಲೂ ಅಥವಾ ಟ್ಯಾಂಗೋ ರೆಡ್‌ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸ್ಪೋರ್ಟ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಡಿ ಡ್ರೈವ್ ಸೆಲೆಕ್ಟ್ ಜೊತೆಗೆ ಕಂಫರ್ಟ್, ಆಟೋ, ಡೈನಾಮಿಕ್ ಮತ್ತು ಇಂಡಿವಿಚ್ಯೂಯಲ್ ಎಂಬ ನಾಲ್ಕು ವಿಭಿನ್ನ ಮೋಡ್ ಗಳನ್ನು ಕೂಡ ಒಳಗೊಂಡಿವೆ.

2021ರ ಆಡಿ ಆರ್‌ಎಸ್5 ಕಾರು ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಹೊಸ ಆಡಿ ಆರ್‌ಎಸ್5 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಸಿ 63 ಎಎಂಜಿ ಮತ್ತು ಬಿಎಂಡಬ್ಲ್ಯು ಎಂ3 ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಆಡಿ ಸ್ಪೋರ್ಟ್‌ಬ್ಯಾಕ್ ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ,

More from DriveSpark

Article Published On: Monday, August 2, 2021, 15:48 [IST]
English summary
2021 Audi RS5 India Launch Date Confirmed. Read In Kannada.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+