ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಆಡಿ
ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಕಂಪನಿಯು ತನ್ನ ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ನಾಲ್ಕು ಡೋರಿನ ಕೂಪ್ ಆಗಿದೆ.

ಆಡಿ ಇಂಡಿಯಾ ಕಂಪನಿಯು ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಹೆಸರನ್ನು ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ. ಇದೀಗ ಆಡಿ ಕಂಪನಿಯು ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಇದೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಗುವ ಸಾಧ್ಯತೆಗಳಿದೆ. ಇತ್ತೀಚಿಗೆ ಬಿಡುಗಡೆಗೊಳಿಸಿದ ಟೀಸರ್ ಚಿತ್ರದಲ್ಲಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಸಂಪೂರ್ಣ ವಿನ್ಯಾಸ ಬಹಿರಂಗವಾಗಿಲ್ಲದಿದ್ದರೂ ಕೆಲವು ಮಾಹಿತಿಗಳು ಬಹಿರಂಗವಾಗಿವೆ.

ಟೀಸರ್ ಚಿತ್ರದಲ್ಲಿ ಈ ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಹೊಂದಿದೆ. ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನಲ್ಲಿ ಹನಿಕ್ಯೂಬ್ ಮಾದರಿಯೊಂದಿಗೆ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ನಯವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿದೆ. ಇದಲ್ಲದೆ ಹೆಡ್‌ಲ್ಯಾಂಪ್‌ಗಳು ಬ್ಲೂ ಸಿಗ್ನೇಚರ್ ಅಂಶಗಳನ್ನು ಒಳಗೊಂಡಿದೆ.

ಇನ್ನು 19 ಇಂಚಿನ 5-ಆರ್ಮ್-ಪೈಲಾನ್ ವಿನ್ಯಾಸ ವ್ಹೀಲ್ ಗಳೊಂದಿಗೆ ರೂಫ್ ರೈಲ್ ನೋಡಿದಾಗ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿ ಎಂದು ಖಚಿತವಾಗುತ್ತದೆ. ಬ್ಲ್ಯಾಕ್ ಒಆರ್‍ವಿಎಂ ಕೂಡ ಒಳಗೊಂಡಿರುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸ್ಪೋರ್ಟ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಡಿ ಡ್ರೈವ್ ಸೆಲೆಕ್ಟ್ ಜೊತೆಗೆ ಕಂಫರ್ಟ್, ಆಟೋ, ಡೈನಾಮಿಕ್ ಮತ್ತು ಇಂಡಿವಿಚ್ಯೂಯಲ್ ಎಂಬ ನಾಲ್ಕು ವಿಭಿನ್ನ ಮೋಡ್ ಗಳನ್ನು ಒಳಗೊಂಡಿವೆ.

ಆಡಿ ಕಂಪನಿಯು ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ 3.0-ಲೀಟರ್ ಟಿಎಫ್‌ಎಸ್‌ಐ ಎಂಜಿನ್ ಅನ್ನು ಹೊಂದಿರುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಎಂಜಿನ್ 349 ಬಿಹೆಚ್‌ಪಿ ಮತ್ತು 500 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಈ 3.0-ಲೀಟರ್ ಟಿಎಫ್‌ಎಸ್‌ಐ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯು ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಬಹುನಿರೀಕ್ಷಿತ ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


Click it and Unblock the Notifications








