ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ 2021ರ ಟಾಟಾ ಸಫಾರಿ ಎಸ್‌ಯುವಿ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳು 22ರಂದು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಹೊಸ ಸಫಾರಿ ಎಸ್‌ಯುವಿ ಕಾರು ಮಾದರಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ರೂ.30 ಸಾವಿರ ಮುಂಗಡ ಬುಕ್ಕಿಂಗ್ ದರ ನಿಗದಿಪಡಿಸಲಾಗಿದ್ದು, ಹೊಸ ಕಾರಿನ ಬೆಲೆ ಹೊರತುಪಡಿಸಿ ಇನ್ನುಳಿದ ಎಲ್ಲಾ ತಾಂತ್ರಿಕ ಅಂಶಗಳ ಮಾಹಿತಿಯನ್ನು ಕಂಪನಿಯು ಈಗಾಗಲೇ ಹಂಚಿಕೊಂಡಿದೆ. ಹೊಸ ಕಾರು ಖರೀದಿಗಾಗಿ ಆನ್‌ಲೈನ್ ಅಥವಾ ನೇರವಾಗಿ ಡೀಲರ್ಸ್ ಬಳಿಯಲ್ಲೂ ಕೂಡಾ ಬುಕ್ಕಿಂಗ್ ದಾಖಲಿಸಬಹುದಾಗಿದ್ದು, ಹೊಸ ಕಾರು ಈಗಾಗಲೇ ಟೆಸ್ಟ್ ಡ್ರೈವ್‌ಗೆ ಲಭ್ಯವಾಗಿದೆ.

ಹೊಸ ಸಫಾರಿ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಆಕರ್ಷಕ ಬೆಲೆ ಪಡೆದುಕೊಳ್ಳಲಿದ್ದು, ಒಮೆಗಾ(OMEGA)ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣಗೊಂಡಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯಗಳ ಆಯ್ಕೆ ಹೊಂದಿದೆ.

ಸಫಾರಿ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯಾರಿಯರ್ ಕಾರಿಗಿಂತಲೂ 63 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ಮೂರನೇ ಸಾಲಿನ ಆಸನಗಳನ್ನು ಹೊಂದಿದ್ದು, ಹ್ಯಾರಿಯರ್ ಕಾರು ಮಾದರಿಯೆಂತೆಯೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿರುವ ಹೊಸ ಸಫಾರಿ ಕಾರು ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಹೊಸ ಸಫಾರಿ ಕಾರು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ಹ್ಯಾರಿಯರ್‌ಗಿಂತಲೂ ರೂ.1.50 ಲಕ್ಷದಿಂದ ರೂ. 2 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸಫಾರಿ ಕಾರು ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಎಂಜಿ ಹೆಕ್ಟರ್ ಪ್ಲಸ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿರುವ ಹೊಸ ಸಫಾರಿ ಕಾರಿನಲ್ಲಿ ಟಾಟಾ ಕಂಪನಿಯು ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ.

ಆರಂಭಿಕ ಮಾದರಿಯಾದ ಎಕ್ಸ್ಇ ವೆರಿಯೆಂಟ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯವಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಕ್ಸ್‌ಟಿ ಆವೃತ್ತಿಯಲ್ಲಿ ಆರಂಭಿಕ ಮಾದರಿಗಳಲ್ಲಿ ಕೆಲವು ಫೀಚರ್ಸ್‌ಗಳ ಜೊತೆಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ನೀಡಲಾಗಿದೆ.

ಟಾಪ್ ಎಂಡ್‌ನಲ್ಲಿರುವ ಎಕ್ಸ್‌ಟಿ ಪ್ಲಸ್ ಮತ್ತು ಎಕ್ಸ್‌ಜೆಡ್ ಆವೃತ್ತಿಗಳಲ್ಲಿ ಆರಂಭಿಕ ಮಾದರಿಗಳಲ್ಲಿನ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 18-ಇಂಚಿನ ಮಷಿನ್ ಕಟ್ ಅಯಾಲ್ ವೀಲ್ಹ್, ಜೆಕ್ಸಾನ್ ಹೆಚ್‌ಡಿಐ ಹೆಡ್‌ಲೈಟ್ಸ್, ಫ್ರಂಟ್ ಫಾಗ್ ಲೈಟ್ಸ್, ಕಾರ್ನರಿಂಗ್ ಫಂಕ್ಷನ್, ಟೆರೈನ್ ರೆನ್ಪಾನ್ಸ್ ಮೋಡ್, 8.8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಜೊತೆಗೆ 7 ಇಂಚಿನ ಡಿಜಿಟಲ್ ಡಿಸ್‌ಪ್ಲೇ, 9 ಜೆಬಿಎಲ್ ಸ್ಪೀಕರ್ಸ್ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಮತ್ತು ಹೈ ಎಂಡ್ ಮಾದರಿಯಲ್ಲಿ ಮಾತ್ರ ಪನೊರಮಿಕ್ ಸನ್‌ರೂಫ್ ಸೌಲಭ್ಯ ನೀಡಲಾಗಿದ್ದು, ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಮಾದರಿಯು 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.


Click it and Unblock the Notifications








