ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ
ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿ ಕಿಯಾ ಮೋಟಾರ್ಸ್ ತನ್ನ ಜನಪ್ರಿಯ ಎಂಪಿವಿ ಆವೃತ್ತಿಯಾದ ಕಾರ್ನಿವಾಲ್ ಕಾರು ಮಾದರಿಯಲ್ಲಿ ಹೊಸ ತಲೆಮಾರಿನ ಮಾದರಿಯನ್ನು ಕಳೆದ ಅಗಸ್ಟ್‌ನಲ್ಲಿ ಅನಾವರಣಗೊಳಿಸಿ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಶೀಘ್ರದಲ್ಲೇ ಭಾರತವನ್ನು ಹೊರತುಪಡಿಸಿ ಪ್ರಮುಖ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಾರ್ನಿವಾಲ್ ಕಾರು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಮೊಡೆನಾ ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ನ್ಯೂ ಜನರೇಷನ್ ಮಾದರಿಯು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದ್ದು, 2022ಕ್ಕೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ನ್ಯೂ ಜನರೇಷನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರ್ನಿವಾಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಬೆಲೆ ಹೊಂದಿರಲಿದ್ದು, ನ್ಯೂ ಜನರೇಷನ್ ಮಾದರಿಯು ಇದೇ ತಿಂಗಳು 23 ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಲಿದೆ.

ನ್ಯೂ ಜನರೇಷನ್ ಕಾರ್ನಿವಾಲ್ ಮಾದರಿಯು ಮುಂಭಾಗದ ವಿನ್ಯಾಸದಲ್ಲಿ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮಾರ್ಡನ್ ಡಿಸೈನ್‌ನೊಂದಿಗೆ ಸ್ಲಿಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್‌ಗಳನ್ನು ಹೊಂದಿದೆ.

ಹೊಸ ಕಾರಿನ ಒಳಭಾಗವು ಕೂಡಾ ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ 12.3-ಇಂಚಿನ ಇನ್ಟೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಟಚ್ ಸ್ಕ್ರೀನ್ ಮಲ್ಟಿ ಇನ್ಪೋ ಡಿಸ್ಲೈ, ಮಲ್ಟಿ ಡ್ರೈವಿಂಗ್ ಮೋಡ್, ಆರ್ಮ್ ರೆಸ್ಟ್ ಜೊತೆಗೆ ಕಪ್ ಹೋಲ್ಡರ್, ಮಲ್ಟಿ ಕಂಟ್ರೋಲ್ ಸ್ಟೀರಿಂಗ್ ವೀಲ್ಹ್ ಸೇರಿದಂತೆ ವಿವಿಧ ಮಾದರಿಯ ಹಲವು ಗುಣಮಟ್ಟದ ಫೀಚರ್ಸ್‌ಗಳು ಗ್ರಾಹಕರನ್ನು ಸೆಳೆಯಲಿವೆ.

ಜೊತೆಗೆ ಹೊಸ ತಲೆಮಾರಿನ ಕಾರ್ನಿವಾಲ್ ಮಾದರಿಯ ಉದ್ದಳತೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, 40-ಎಂಎಂ ಹೆಚ್ಚಳದೊಂದಿಗೆ ಹೊಸ ಕಾರು 5,155-ಎಂಎಂ ಉದ್ದಳತೆ ಹೊಂದಿದೆ. ಇದರೊಂದಿಗೆ ಮೂರನೇ ಮತ್ತು ನಾಲ್ಕನೇ ಸಾಲಿನಲ್ಲಿನ ಪ್ರಯಾಣಿಕರಿಗೆ ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಡಲಾಗಿದ್ದು, ಚಾಲಕ ಸೇರಿ 11 ಜನ ಪ್ರಯಾಣಿಕರೂ ಅರಾಮವಾಗಿ ಪ್ರಯಾಣಿಸಬಹುದಾಗಿದೆ.

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 2+2+3=7, 2+2+2+3=9, 2+3+3+3=11 ಮಾದರಿಯ ಆಸನ ಸೌಲಭ್ಯಗಳನ್ನು ಹೊಂದಿದ್ದು, ಇದರಲ್ಲಿ 7 ಸೀಟರ್ ಮಾದರಿಯೇ ಅತ್ಯಧಿಕ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಕಿಯಾ ಮೋಟಾರ್ಸ್ ಕಂಪನಿಯು ಭಾರತವನ್ನು ಹೊರತುಪಡಿಸಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಾರ್ನಿವಾಲ್ ಮಾದರಿಯಾಗಿ ಈ ಹಿಂದಿನ 2.2-ಲೀಟರ್ ಆಟೋಮ್ಯಾಟಿಕ್ ಡೀಸೆಲ್ ಎಂಜಿನ್‌ನೊಂದಿಗೆ ಹೊಸದಾಗಿ 3.5-ಲೀಟರ್ ಎನ್ಎ ವಿ6 ಪೆಟ್ರೋಲ್ ಮತ್ತು 3.5-ಲೀಟರ್ ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ ನೀಡಲಿದೆ.
MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಇದರಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 199-ಬಿಎಚ್‌ಪಿ, 404-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ, 3.5-ಲೀಟರ್ ಎಂಪಿಐ ಪೆಟ್ರೋಲ್ ಮಾದರಿಯು 268-ಬಿಎಚ್‌ಪಿ, 332-ಎನ್ಎಂ ಟಾರ್ಕ್ ಮತ್ತು 3.5-ಲೀಟರ್ ಜಿಡಿಐ ವಿ6 ಪೆಟ್ರೋಲ್ ಮಾದರಿಯು 290-ಬಿಎಚ್‌ಪಿ, 355-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರ್ನಿವಾಲ್ ಕಾರು ಮಾದರಿಗಿಂತಲೂ ರೂ. 10 ಲಕ್ಷದಿಂದ ರೂ.15 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಕಾರ್ನಿವಾಲ್ ಮಾದರಿಯು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್ ಹೊಂದಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಭಾರತದಲ್ಲಿ ಮಾರಾಟವಾಗುವ ಕಾರ್ನಿವಾಲ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 25.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.33.95 ಲಕ್ಷ ಬೆಲೆ ಹೊಂದಿದೆ.


Click it and Unblock the Notifications








