ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ 2021ರ ಅಮೇಜ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಈ ಹೊಸ ಹೋಂಡಾ ಅಮೇಜ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ. ಹೊಸ ಮುಂಭಾಗದ ಬಂಪರ್, ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಇದರೊಂದಿಗೆ ಮರುವಿನ್ಯಾಸಗೊಳಿಸಿದ ಕ್ರೋಮ್ ಫ್ರಂಟ್ ಗ್ರಿಲ್, ಕ್ರೋಮ್ ಡೋರ್ ಹ್ಯಾಂಡಲ್‌ಗಳು, 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಫೇಸ್‌ಲಿಫ್ಟೆಡ್ ಕಾರಿನ ಒಟ್ಟಾರೆ ಸಿಲೂಯೆಟ್ ಬದಲಾಗದೆ ಉಳಿದಿದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಇನ್ನು ಈ ಹೊಸ ಅಮೇಜ್‌ನ ಒಳಭಾಗವು ಹೊಸ ಸೀಟ್ ಅಪ್‌ಹೋಲ್ಸ್ಟರಿ ಸೇರಿದಂತೆ ಹಲವು ಅಪ್‌ಗ್ರೇಡ್‌ಗಳನ್ನು ಮಾಡಲಾಗಿದೆ. ಒಳಭಾಗದಲ್ಲಿ ಶುದ್ಧ ಗಾಳಿಗಾಗಿ ಅಪ್‌ಗ್ರೇಡ್ ಕ್ಯಾಬಿನ್ ಫಿಲ್ಟರ್ ಅನ್ನು ಸೇರಿಸಿದೆ. ಇತರ ಅಪ್‌ಗ್ರೇಡ್‌ಗಳು ಸೇರಿವೆ. ಡ್ಯಾಶ್‌ಬೋರ್ಡ್‌ನಲ್ಲಿ ಸ್ಯಾಟಿನ್ ಸಿಲ್ವರ್ ಅಸ್ಸೆಂಟ್, ಕ್ಲೈಮೇಂಟ್ ಕಂಟ್ರೋಲ್, ಹೋಂಡಾ ಸ್ಮಾರ್ಟ್ ಕೀ ಮತ್ತು ಪುಶ್-ಬಟನ್ ಸ್ಟಾರ್ಟ್ ಅನ್ನು ಹೊಂದಿದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಇದರೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್‌ಗಳು ಸೇರಿದಂತೆ ಇತರ ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ, ಇನ್ನು ಈ ಹೊಸ ಅಮೇಜ್ ಕಾರು ಮೆಟಿರಾಯ್ಡ್ ಗ್ರೇ, ಪ್ಲಾಟಿನಂ ಪರ್ಲ್ ವೈಟ್, ಲೂನಾರ್ ಸಿಲ್ವರ್, ಗೋಲ್ಡನ್ ಬ್ರೌನ್ ಮತ್ತು ರೇಡಿಯಂಟ್ ರೆಡ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ,

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಅಮೇಜ್ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಗಳನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೀಟ್-ಬೆಲ್ಟ್ ರಿಮೈಂಡರ್ ಗಳನ್ನು ಹೊಂದಿದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಈ ಹೊಸ ಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾರಿನ ಆಯಾಮದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಇದು ಟ್ಟಾರೆ 3,995 ಮಿಮೀ ಉದ್ದ, 1,695 ಮಿಮೀ ಅಗಲ ಮತ್ತು 1,498 ಮಿಮೀ ಎತ್ತರವನ್ನು ಉಳಿಸಿಕೊಂಡಿದೆ. ಇನ್ನು ಈ ಕಾರು 2,470 ಮಿಮೀ ವ್ಹೀಲ್‌ಬೇಸ್ ಉದ್ದವನ್ನು ಹೊಂದಿದೆ.

Variants Petrol Diesel
E MT ₹6.32 lakh ₹8.66 lakh
S MT ₹7.16 lakh ₹9.26 lakh
S CVT ₹8.06 lakh NA
VX MT ₹8.22 lakh ₹10.25 lakh
VX CVT ₹9.05 lakh ₹11.15 lakh
ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಈ ಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾಂಪ್ಯಾಕ್ಟ್ ಸೆಡಾನ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಅದರ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎಂಜಿನ್ ಗಳಾಗಿವೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಇನ್ನು ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಇದರೊಂದಿಗೆ ಡೀಸೆಲ್ ಆಟೋಮ್ಯಾಟಿಕ್ ರೂಪಾಂರರವು 78 ಬಿಹೆಚ್‍ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅಮೇಜ್, ಜಾಝ್, ಡಬ್ಲ್ಯುಆರ್-ವಿ, ಸಿಟಿ ಸೇರಿದಂತೆ ವಿವಿಧ ಕಾರು ಮಾದರಿಗಳ ಆಫರ್ ಗಳನ್ನು ಘೋಷಿಸಲಾಗಿದೆ. ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರುತ್ತದೆ. ಹಿಂದಿನ ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.57 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಭಾರತದಲ್ಲಿ 2021ರ ಹೋಂಡಾ ಅಮೇಜ್ ಕಾರು ಬಿಡುಗಡೆ: ಬೆಲೆ ರೂ.6.32 ಲಕ್ಷ

ಹೋಂಡಾ ಕಂಪನಿಯು 2021ರ ಅಮೇಜ್ ಕಾರನ್ನು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಖರೀದಿದಾರರಿಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಇದನ್ನು ಖರೀದಿದಾರರು ತಮ್ಮ ಆದ್ಯತೆಯ ಅನುಗುಣವಾಗಿ ಅನ್ನು ಆಯ್ಕೆ ಮಾಡಬಹುದು.

Article Published On: Wednesday, August 18, 2021, 12:19 [IST]
English summary
New honda amaze launched 2021 price varaints engine details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+