ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ Honda City ಹೈಬ್ರಿಡ್ ಕಾರು
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ Honda ಭಾರತೀಯ ಮಾರುಕಟ್ಟೆಯಲ್ಲಿ ಹೊಸ City ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲಿದೆ. Honda ಕಂಪನಿಯು City ಹೈಬ್ರಿಡ್ ಕಾರನ್ನು ಮಲೇಷ್ಯಾ ಮಾರುಕಟ್ಟೆಯಲ್ಲಿ ಕಳೆದ ವರ್ಷ ಪರಿಚಯಿಸಿದರು.

2021ರ Honda City ಹೈಬ್ರಿಡ್ ಕಾರು ಈ ವರ್ಷದಲ್ಲೇ ಬಿಡುಗಡೆಗೊಳಿಸಲು ಉದ್ದೇಶಿಸಿತ್ತು. ಆದರೆ ಕರೋನಾ ಆತಂಕದಿಂದ ಈ ಹೈಬ್ರಿಡ್ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಹೋಂಡಾ ಕಾರ್ಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ ರಾಜೇಶ್ ಗೋಯೆಲ್ ಅವರು ಹೊಸ City ಹೈಬ್ರಿಡ್ ಕಾರನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ ಎಂದು ಖಚಿತಪಡಿಸಿದ್ದಾರೆ.

ಅವರ ಪ್ರಕಾರ, ಮುಂಬರುವ Honda City ಹೈಬ್ರಿಡ್ ಕಾರನ್ನು ಮುಂದಿನ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ, ಹೋಂಡಾದ ಎಂಜಿನಿಯರ್‌ಗಳಿಗೆ ಹೋಂಡಾ ಸಿಟಿಯ ಹೈಬ್ರಿಡ್ ಆವೃತ್ತಿಯ ವಿವಿಧ ಗುಣಲಕ್ಷಣಗಳನ್ನು ಭಾರತೀಯ ರಸ್ತೆಗಳಿಗೆ ಸರಿಹೊಂದುವಂತೆ ಮತ್ತು ಇತರ ಹಲವು ಅಂಶಗಳನ್ನು ಸರಿಹೊಂದಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ.

Honda City ಹೈಬ್ರಿಡ್ ಮಾದರಿಯಲ್ಲಿ ಮಲ್ಟಿ-ಮೋಡ್ ಡ್ರೈವ್ (ಐ-ಎಂಎಂಡಿ) ಪವರ್‌ಟ್ರೇನ್ ಆಗಿದ್ದು ಅದು ಐ-ಡಿಸಿಡಿಯನ್ನು ಬದಲಾಯಿಸಿದೆ. ಇದರೊಂದಿಗೆ 1.5-ಲೀಟರ್ ಅಟ್ಕಿನ್ಸನ್-ಸೈಕಲ್ ಡಿಒಹೆಚ್‌ಸಿ ಐ-ವಿಟಿಇಸಿ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 98 ಬಿಹೆಚ್‍ಪಿ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಎರಡು ಮೋಟರ್‌ಗಳಿಗೆ ಹೊಂದಿಕೆಯಾಗುತ್ತದೆ. ಇನ್ನು ಎಲೆಕ್ಟ್ರಿಕ್ ಮೋಟರ್ ಅಸಿಸ್ಟ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಇನ್ನು ದೊಡ್ಡದಾದ ಎರಡನೇ ಮೋಟರ್ 108 ಬಿಹೆಚ್‍ಫಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚಿನ ಪರ್ಫಾಮೆನ್ಸ್ ಸ್ಥಿತಿಗತಿಗಳಂತೆ ಎಂಜಿನ್ ಹೆಚ್ಚಿನ ವೇಗದಲ್ಲಿ ನೇರ ಡ್ರೈವ್ ನೀಡಬಲ್ಲದು, ಇದು ಮೋಟಾರ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಇನ್ನು ಈ ಎಲೆಕ್ಟ್ರಿಕ್-ಹೈಬ್ರಿಡ್ ಸೆಟಪ್ ಸಿಟಿ ಕಾರು ಕೇವಲ 9.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಹೋಂಡಾ ಸಿಟಿ ಆರ್‌ಎಸ್ ಇ:ಹೆಚ್‌ಇವಿ ಕಾರು 173 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಹೈಬ್ರಿಡ್ ಕಾರು 27 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ City ಹೈಬ್ರಿಡ್ ಕಾರು ಹೆಚ್ಚಿನ ಮೈಲೇಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

Honda City ಹೈಬ್ರಿಡ್ ಬೆಸ್ಪೋಕ್ ಸ್ಟೈಲಿಂಗ್ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಗ್ಲೋಸ್-ಬ್ಲ್ಯಾಕ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಡಿಫ್ಯೂಸರ್ನಲ್ಲಿ ಕಾರ್ಬನ್-ಪ್ಯಾಟರ್ನ್ ಟ್ರಿಮ್, ಹೊಸ ಫಾಗ್ ಲ್ಯಾಂಪ್, ಹೊಸ ಮಿರರ್ ಕವರ್ ಮತ್ತು ಗ್ಲೋಸ್-ಬ್ಲ್ಯಾಕ್ ಫಿನಿಶ್‌ನಲ್ಲಿ ಡಕ್‌ಟೇಲ್ ಸ್ಪಾಯ್ಲರ್ ಅನ್ನು ಹೊಂದಿದೆ.

ಈ City ಹೈಬ್ರಿಡ್ ಡ್ಯುಯಲ್-ಟೋನ್ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆಗಿ ಆಟೋಮ್ಯಾಟಿಕ್ ಎಲ್ಇಡಿ ಹೆಚ್ ಲ್ಯಾಂಪ್ ಗಳು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ರಿಯರ್ ಲೈಟ್ಸ್, ಪುಶ್ ಸ್ಟಾರ್ಟ್ ನೊಂದಿಗೆ ಕೀಲೆಸ್ ಎಂಟ್ರಿ, ಸಿಂಗಲ್-ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

ಇದರ ಹಿಂಭಾಗದ ಏರ್-ಕಾನ್ ವೆಂಟ್ಸ್, ಸ್ಟೀಯರಿಂಗ್ ಆಡಿಯೊ ಬಟನ್ ಮತ್ತು 8.0-ಇಂಚಿನ ಟಚ್ಸ್ಕ್ರೀನ್ ಹೆಡ್ ಯುನಿಟ್ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಎಂಟು ಸ್ಪೀಕರ್ ಆಡಿಯೊ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಒಳಗೊಂಡಿದೆ,

ಇನ್ನು ಹೋಂಡಾ ಕಂಪನಿಯು ತನ್ನ 2021ರ Amaze ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಅಮೇಜ್ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ.

ಈ Honda amaze facelift ಕಾಂಪ್ಯಾಕ್ಟ್ ಸೆಡಾನ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಅದರ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎಂಜಿನ್ ಗಳಾಗಿವೆ. ಇನ್ನು ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Honda City ಹೈಬ್ರಿಡ್ ಕಾರಿನಲ್ಲಿ ಹೆಚ್ಚುವರಿಯಾಗಿ, ಅಲ್ಟ್ರಾಸ್ಯೂಡ್ ಸೀಟುಗಳು, ಐ-ಎಂಎಂಡಿಗೆ ಡಿಕ್ಲೀರೇಶನ್ ಸೆಲೆಕ್ಟರ್ ಪ್ಯಾಡಲ್, ಲೆದರ್ ಸ್ಟೀರಿಂಗ್ ವ್ಹೀಲ್, ಗೇರ್ ಲಿವರ್ ಕನ್ಸೋಲ್, ಸೆಂಟರ್ ಟನಲ್ ಮತ್ತು ಡ್ಯಾಶ್‌ಬೋರ್ಡ್, ಮತ್ತು ಅಲ್ಯೂಮಿನಿಯಂ ಸ್ಪೋರ್ಟ್ ಪೆಡಲ್‌ಗಳು. ಆರು ಏರ್‌ಬ್ಯಾಗ್‌ಗಳು, ವಿಎಸ್‌ಎ, ಹಿಲ್ ಸ್ಟಾರ್ಟ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಇತರ ಫೀಚರ್ ಗಳನ್ನು ಕೂಡ ಹೊಂದಿದೆ.


Click it and Unblock the Notifications