ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಹ್ಯುಂಡೈ ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಈ ಜನಪ್ರಿಯ ಹ್ಯುಂಡೈ ಸಂಸ್ಥೆಯು ಭಾರತದಲ್ಲಿ ಹ್ಯಾಚ್‌ಬ್ಯಾಕ್, ಎಸ್‌ಯುವಿ ಮತ್ತು ಸೆಡಾನ್ ಸೇರಿದಂತೆ ಹಲವು ವಿಭಾಗದಲ್ಲಿ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಆದರೆ ಎಂಪಿವಿ ವಿಭಾಗದಲ್ಲಿ ಹ್ಯುಂಡೈ ಯಾವುದೇ ಮಾದರಿಗಳನ್ನು ಹೊಂದಿಲ್ಲ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಮಾದರಿಯನ್ನು ಕೂಡ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮುಂಬರುವ ಹ್ಯುಂಡೈ ಪ್ರೀಮಿಯಂ ಎಂಪಿವಿಯ ಪೇಟೆಂಟ್ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕಾರು ತಯಾರಕ ಮುಂಬರುವ ಮಾದರಿಯ ಹೆಸರು ಮತ್ತು ವಿವರಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಇದಕ್ಕೆ ಹ್ಯುಂಡೈ ಕಸ್ಟೊ ಎಂಬ ಹೆಸರಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಎಂಪಿವಿಯನ್ನು ನಿರ್ದಿಷ್ಟವಾಗಿ ಏಷ್ಯನ್ ಮಾರುಕಟ್ಟೆಗಳಿಗ್ಗಿ ಅಭಿವೃದ್ಧಿಪಡಿಸಲಾಗಿದೆ, ಆದರೆ ಆರಂಭದಲ್ಲಿ ಇದನ್ನು ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ಈ ಎಂಪಿವಿ ಚೀನಾದಲ್ಲಿ ರೋಡ್ ಟೆಸ್ಟ್ ಅನ್ನು ನಡೆಸಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ದೊಡ್ಡ ರೇಡಿಯೇಟರ್ ಗ್ರಿಲ್ ಅನ್ನು ಕ್ರೋಮ್ ನೊಂದಿಗೆ ತೀಕ್ಷ್ಣವಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಹೆಡ್ ಲ್ಯಾಂಫ್ ಗಳು ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಒಳಗೊಂಡಿವೆ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನು ಡಿಸೈನ್ ಬಿಟ್‌ಗಳಾದ ಮಸ್ಕ್ಯುಲರ್ ಬಂಪರ್, ವೈಡ್ ಏರ್ ಇಂಟೆಕ್ಸ್, ಫ್ಲಾಟ್ ಹುಡ್ ಮತ್ತು ಕ್ರೋಮ್ ಲೈನಿಂಗ್ ಹೊಂದಿರುವ ಫಾಗ್ ಲ್ಯಾಂಪ್ ಅಸೆಂಬ್ಲಿ ಅದರ ಸ್ಪೋರ್ಟಿ ಫ್ರಂಟ್ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಸೈಡ್ ಪ್ರೊಫೈಲ್ ನಲ್ಲಿ ವ್ಹೀಲ್ ಅರ್ಚಾರ್, ಮೌಂಟಡ್ ಹಿಂಭಾಗದ ಸ್ಪಾಯ್ಲರ್, ಸಿಲ್ವರ್ ಟ್ರಿಮ್ ಡೋರ್ ಹ್ಯಾಂಡಲ್ ಗಳು ಮತ್ತು ದಪ್ಪ ಬಾಡಿ ಲೈನ್ ಗಳನ್ನು ಹೊಂದಿದೆ. ಇನ್ನು ಈ ಎಂಪಿವಿಯ ಹಿಂಭಾಗದಲ್ಲಿ ಸ್ಪೋರ್ಟ್ಸ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ತೆಳುವಾದ ಎಲ್‌ಇಡಿ ಬಾರ್ ಮೂಲಕ ಸಂಪರ್ಕಿಸಲಾಗಿದೆ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಹ್ಯುಂಡೈ ಕಸ್ಟೊ ಎಂಪಿವಿಯ ಒಳಭಾಗದಲ್ಲಿ ಗೇರ್ ಸೆಲೆಕ್ಟರ್ ಬಟನ್‌ಗಳು, ಫ್ಹೋರ್-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅದರ ಕೆಲವು ವಿನ್ಯಾಸ ಬಿಟ್‌ಗಳು ಮತ್ತು ಫೀಚರ್ ಗಳನ್ನು ಹ್ಯುಂಡೈ ಸೊನಾಟಾದೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನು ಎಂಪಿವಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಮತ್ತು ಕಾನ್ಫಿಗರ್ ಮಾಡಬಹುದಾದ ಕಲರ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ನೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹ್ಯುಂಡೈ ಎಂಪಿವಿ ಮೂರು ಸಾಲಿನೊಂದಿಗೆ 6,7 ಮತ್ತು 8 ಸೀಟುಗಳ ಸಂರಚನೆಗಳಲ್ಲಿ ನೀಡಲಾಗುತ್ತದೆ. ಇನ್ನು ಈ ಹೊಸ ಎಂಪಿವಿಯ ಎಂಜಿನ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಆದರೆ ಈ ಎಂಪಿವಿಯಲ್ಲಿ 2.0 ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 237 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನು ಈ ಎಂಜಿನ್‌ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಬಹುದು. ಇನ್ನು ಈ ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಹ್ಯುಂಡೈ ಕಸ್ಟೊ ಎಂಪಿವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಹೊಸ ಎಂಪಿವಿಯನ್ನು ಭಾರತೀಯ ಮಾರುಕಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇತ್ತೀಚೆಗೆ ಹ್ಯುಂಡೈ ತನ್ನ ಸ್ಟಾರಿಯಾ ಐಷಾರಾಮಿ ಎಂಪಿವಿಯ ಚಿತ್ರಗಳನ್ನು ಬಹಿರಂಗಪಡಿಸಲಾಯಿತು. ಭಾರತ ಸೇರಿದಂತೆ ಏಷ್ಯಾದ ಹಲವಾರು ಮಾರುಕಟ್ಟೆಗಳಲ್ಲಿ ಈ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಲಾಗಿದೆ.

Most Read Articles

Kannada
English summary
All-New Hyundai Custo MPV Leaked In Patent Images. Read In Kannada.
Story first published: Friday, March 19, 2021, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X