ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಕಾರಿನ ಹೊಸ ಬೇಸ್ ವೆರಿಯೆಂಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟರ್ ತನ್ನ ಮೂರನೇ ತಲೆಮಾರಿನ ಐ20 ಪ್ರೀಮಿಯಂ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಹ್ಯುಂಡೈ ಐ20 ಕಾರು ವಿನ್ಯಾಸ ಮತ್ತು ಫೀಚರ್ಸ್ ವಿಭಾಗದಲ್ಲಿ ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಈ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತು. ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹ್ಯುಂಡೈ ಕಂಪನಿಯು ಈ ಜನಪ್ರಿಯ ಐ20 ಕಾರಿನ ಎರಾ ಎಂಬ ಹೊಸ ಬೇಸ್ ವೆರಿಯೆಂಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಐ20 ಎರಾ ವೆರಿಯೆಂಟ್ ಬ್ರ್ಯಾಂಡ್'ನ ಡೀಲರ್ ಬಳಿ ತಲುಪಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಐ20 ಎರಾ ವೆರಿಯೆಂಟ್ ವಿಡಿಯೋದಲ್ಲಿ ಹೊರಭಾಗ ಮತ್ತು ಕ್ಯಾಬಿನ್ ವಿವರಗಳನ್ನು ಸ್ಪಷ್ಟವಾಗಿ ಕಾಣಬಹುದು. ಬೇಸ್ ವೆರಿಯೆಂಟ್ ಆಗಿರುವುದರಿಂದ ಇದರಲ್ಲಿ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಹ್ಯುಂಡೈ ಐ20 ಎರಾ ವೆರಿಯೆಂಟ್ ಹೊರಭಾಗದಲ್ಲಿ, ಹ್ಯಾಲೊಜೆನ್ ಯುನಿಟ್ ಗಳನ್ನು ಬಳಸುವುದರಿಂದ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ರೇಡಿಯೇಟರ್ ಗ್ರಿಲ್‌ಗೆ ಪಿಯಾನೋ ಬ್ಲ್ಯಾಕ್ ಫಿನಿಶ್ ಇಲ್ಲ ಇದು ಫಾಗ್ ಲ್ಯಾಂಪ್ ಗಳ ಕೊರತೆಯನ್ನು ಹೊಂದಿದೆ ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಈ ಬೇಸ್ ವೆರಿಯೆಂಟ್ ನಲ್ಲಿ 14 ಇಂಚಿನ ಅಲಾಯ್ ವ್ಹೀಲ್ ಗಳ ಆಯ್ಕೆಯನ್ನು ಹೊಂದಿದೆ. ಈ ಐ20 ಎರಾ ವೆರಿಯೆಂಟ್ ನಲ್ಲಿ ಡೈವರ್ ಮತ್ತು ಸಹ-ಪ್ರಯಾಣಿಕರಿಗೆ ಮಾತ್ರ ಪವರ್ ವಿಂಡೋಸ್ ಅನ್ನು ಹೊಂದಿದ್ದು, ಸೆಂಟ್ರಲ್ ಲಾಕಿಂಗ್ ಫೀಚರ್ ಅನ್ನು ಹೊಂದಿರುವುದಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಹೊಸ ಹ್ಯುಂಡೈ ಐ20 ಎರಾ ವೆರಿಯೆಂಟ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.6 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ,

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯನ್ನು ಕೂಡ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಐ20 ಬೇಸ್ ವೆರಿಯೆಂಟ್

ಈ ಜನಪ್ರಿಯ ಹ್ಯುಂಡೈ ಐ20 ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 Hyundai i20 Era Walkaround Video. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X