ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಎನ್ ಪರ್ಫಾರ್ಮೆನ್ಸ್ ಸರಣಿಯ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿವೆ. ಮೊದಲಿಗೆ ಹ್ಯುಂಡೈ ಕಂಪನಿಯ ಎನ್ ಸರಣಿಯ ಜನಪ್ರಿಯ ಐ20 ಎನ್ ಲೈನ್‌ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಗಳನ್ನು ಗಳಿಸಿದೆ. ಬಿಎಂಡಬ್ಲ್ಯು ಎಂ, ಸ್ಕೋಡಾದ ಆರ್‌ಎಸ್ ಮಾದರಿಗಳ ಹಾಗೇ ಹ್ಯುಂಡೈ ಕಂಪನಿಯ ಎನ್ ಸರಣಿಯ ಕಾರುಗಳು ಪರ್ಫಾಮೆನ್ಸ್ ಮಾದರಿಗಳಾಗಿವೆ. ಹ್ಯುಂಡೈ ಕಂಪನಿಯು ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಈ ವರ್ಷದ ಮಧ್ಯಾಂತರ ಅವಧಿಯಲ್ಲಿ ಹ್ಯುಂಡೈ ಎನ್ ಪರ್ಫಾಮೆನ್ಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಹ್ಯುಂಡೈ ಪರ್ಫಾಮೆನ್ಸ್ ಸರಣಿಯು ಎನ್ ಮತ್ತು ಎನ್ ಲೈನ್ ಕಾರುಗಳನ್ನು ಒಳಗೊಂಡಿದೆ. ಈ ಪರ್ಫಾಮೆನ್ಸ್ ಕಾರುಗಳು ಸ್ಟ್ಯಾಂಡರ್ಡ್ ಮಾದರಿಗಳಿಗಿಂತ ಹೆಚ್ಚು ಪವರ್ ಫುಲ್ ಎಂಜಿನ್‌ಗಳನ್ನು ಒಳಗೊಂಡಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಇನ್ನು ಹ್ಯುಂಡೈ ಎನ್ ಲೈನ್ ಕಾರುಗಳು ಭಾರತೀಯ ಮಾರುಕಟ್ಟೆಯ ಪರ್ಫಾಮೆನ್ಸ್ ಕಾರು ಪ್ರಿಯರು ಬಹುನಿರೀಕ್ಷೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳು ಸಂಖ್ಯೆಯು ವಿರಳವಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕರು ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯನ್ನು ಕಾಣದೆ ಸ್ಥಗಿತಗೊಳಿಸಿದ್ದಾರೆ. ಇದೀಗ ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎನ್ ಲೈನ್ ಸರಣಿಯ ಜನಪ್ರಿಯ ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಹ್ಯುಂಡೈ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಐ20 ಎನ್ ಲೈನ್‌ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಇತ್ತೀಚೆಗೆ ಸ್ಪೋರ್ಟಿಯರ್ ಐ20 ಎನ್ ಲೈನ್ ಹಾಟ್ ಹ್ಯಾಚ್‌ಬ್ಯಾಕ್ ಮತ್ತೊಮ್ಮೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಐ20 ಎನ್ ಲೈನ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳು ಬಹಿರಂಗವಾಗಿದೆ. ಈಗಗಾಲೇ ಯುರೋಪ್ ಮಾರುಕಟ್ಟೆಯಲ್ಲಿ ಐ20 ಎನ್ ಲೈನ್‌ ಅನ್ನು ಪರಿಚಯಿಸಲಾಗಿದೆ. ಅದೇ ಮಾದರಿಯಲ್ಲಿ ಸಣ್ಣ ನವೀಕರಣದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಜಾಗತಿಕ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಐ20 ಎನ್ ಲೈನ್‌ 1.6 ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್‌ಪಿ ಪವರ್ ಮತ್ತು 275 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಇನ್ನು ಈ ಪರ್ಫಾಮೆನ್ಸ್ ಕಾರಿನಲ್ಲಿ ಇಂಟರ್ಕೂಲರ್, ಹ್ಯುಂಡೈನ ಹೊಸ ಸಿವಿವಿಡಿ (ನಿರಂತರವಾಗಿ ವೇರಿಯಬಲ್ ವಾಲ್ವ್ ಅವಧಿ) ತಂತ್ರಜ್ಞಾನ ಮತ್ತು 350 ಬಾರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್‌ನೊಂದಿಗೆ ಮೋಟರ್ ಅನ್ನು ಹೆಚ್ಚಿಸಲಾಗಿದೆ. ಸಿವಿವಿಡಿ ತಂತ್ರಜ್ಞಾನವು ಎಂಜಿನ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಸಾಮಾನ್ಯ ಐ20 ಮಾದರಿಯಂತೆ ‘ಎನ್ ಲೈನ್' ರೂಪಾಂತರವು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುತ್ತದೆ. ಇನ್ನು ಇದರಲ್ಲಿ 10.25-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಇನ್ನು ಡ್ರೈವರ್ ಅಸಿಸ್ಟ್ ಫೀಚರ್ ಗಳೊಂದಿಗೆ ಬ್ಲೂಲಿಂಕ್ ಕನೆಕ್ಟಿವಿಟಿ ಕಾರ್ ಸೂಟ್ ಸಹ ನೀಡುತ್ತದೆ. ಇನ್ನು ಐ20 ಎನ್ ಲೈನ್‌ ಕಾರಿನಲ್ಲಿ ಟ್ವೀಕ್ಡ್ ಸ್ಟೀಯರಿಂಗ್ ಮತ್ತು ಎಕ್ಸಾಸ್ಟ್ ಸಿಸ್ಟಂ ಜೊತೆಗೆ ಗಟ್ಟಿಯಾದ ಸಸ್ಪೆಂಕ್ಷನ್ ಸೆಟಪ್ ಅನ್ನು ಕೂಡ ಪಡೆಯುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಪರ್ಫಾಮೆನ್ಸ್ ಕಾರು

ಈ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ಆರಂಭಿಕ ಬೆಲೆಯು ಭಾರತದಲ್ಲಿ ಸರಿಸುಮಾರು ರೂ.12 ಲಕ್ಷ ನಿಗದಿಪಡಿಸಬಹುದು. ಇನ್ನು ಈ ಪರ್ಫಾಮೆನ್ಸ್ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hyundai i20 N Line Spied Ahead Of Launch. Read In Kannada.
Story first published: Wednesday, March 24, 2021, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X