ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಸ್ಟಾರಿಯಾ ಎಂಪಿವಿಯನ್ನು ಆಸ್ಟ್ರೇಲಿಯನ್ NCAP ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಈ ಆಸ್ಟ್ರೇಲಿಯನ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಸ್ಟಾರಿಯಾ(Hyundai Staria) ಎಂಪಿವಿಯು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಸ್ಟಾರಿಯಾ ಎಂಪಿವಿಯ ಸ್ಟಾರಿಯಾ ಮತ್ತು ಸ್ಟಾರಿಯಾ ಲೋಡ್ ಎರಡೂ ಮಾದರಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮೊದಲನೆಯದು ಪ್ರಯಾಣಿಕ ಆವೃತ್ತಿಯಾಗಿದ್ದರೆ ಎರಡನೆ ಮಾದರಿಯು ವಾಣಿಜ್ಯ ಆವೃತ್ತಿಯಾಗಿದೆ. ಕಿಯಾ ಕಾರ್ನಿವಲ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕ್ಯಾಡಿ ನಂತರ ANCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಪಡೆದ ಎಂಪಿವಿಯು ಸ್ಟಾರಿಯಾ ಆಗಿದೆ, ಸ್ಟಾರಿಯಾ ಉತ್ತಮ ಸುರಕ್ಷತಾ ಎಂಪಿವಿ ಮಾದರಿಯಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಆಸ್ಟ್ರೇಲಿಯನ್ NCAP ಗಾಗಿ ಸ್ಟಾರಿಯಾವನ್ನು ಹೆಚ್ಚು ಕಟ್ಟುನಿಟ್ಟಾದ ನಿಯಮಾವಳಿಗಳೊಂದಿಗೆ ಪರಿಷ್ಕರಿಸಲಾಗಿದೆ. ಆದ್ದರಿಂದ, ಪರಿಷ್ಕೃತ ಮಾನದಂಡಗಳ ವಿರುದ್ಧ ಪಂಚತಾರಾ ANCAP ಸ್ಕೋರ್ ಗಳಿಸಿದ ಮೊದಲ ವಾಣಿಜ್ಯ ವ್ಯಾನ್ ಆಯಿತು ಸ್ಟಾರಿಯಾ ಲೋಡ್.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಂಡ ಸ್ಟಾರಿಯಾ ಮತ್ತು ಸ್ಟಾರಿಯಾ ಲೋಡ್ ಎರಡೂ ಪ್ರಭಾವಶಾಲಿ ರಕ್ಷಣೆಯನ್ನು ತೋರಿಸಿದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ಟಾರಿಯಾ ಎಂಪಿವಿಯು, ಮಕ್ಕಳ ರಕ್ಷಣೆಯ ವಿಭಾಗದಲ್ಲಿ86 ಶೇಕಡಾ ಅತ್ಯಧಿಕ ಸ್ಕೋರ್‌ನೊಂದಿಗೆ ರಕ್ಷಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಒಟ್ಟಾರೆ 85 ಪ್ರತಿಶತ ಸ್ಕೋರ್ ಅನ್ನು ಪಡೆದುಕೊಂಡಿದೆ. ಈ ಮೌಲ್ಯಮಾಪನವು ವಾಣಿಜ್ಯ ವ್ಯಾನ್‌ಗೆ ಸಹ ಅನ್ವಯಿಸುತ್ತದೆ. ಸೈಡ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ ಪೂರ್ಣ ಅಂಕಗಳನ್ನು ಗಳಿಸಿದೆ .ಸ್ಟಾರಿಯಾ ತನ್ನ ಸುರಕ್ಷತಾ ಫೀಚರ್ಸ್ ಗಳಿಗೆ ಬಂದಾಗ ಕೆಲವು ಅಂಕಗಳನ್ನು ಕಳೆದುಕೊಂಡಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್ (AEB) ಮತ್ತು ಲೇನ್-ಕೀಪ್ ಅಸಿಸ್ಟ್ ಸೇರಿದಂತೆ, AEB ಸಿಸ್ಟಮ್‌ನ ಜಂಕ್ಷನ್ ಅಸಿಸ್ಟ್‌ನ ಕೊರತೆಗಾಗಿ ANCAP ಅಂಕಗಳನ್ನು ಕಡಿತಗೊಳಿಸಿತು, ಸುರಕ್ಷತಾ ಫೀಚರ್ ವಿಭಾಗದಲ್ಲಿ, ಸ್ಟಾರಿಯಾ 16 ರಲ್ಲಿ 11.9 ಅಂಕಗಳನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಇದಲ್ಲದೆ, ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಲಾದ ಪರೀಕ್ಷೆಗಳು ದುರ್ಬಲ ರಸ್ತೆ ಬಳಕೆದಾರರ ರಕ್ಷಣೆ ವಿಭಾಗದಲ್ಲಿದ್ದು, ಇದು 65 ಪ್ರತಿಶತದಷ್ಟು ಅಂಕವನ್ನು ಪಡೆದುಕೊಂಡಿದೆ. ಸುರಕ್ಷತಾ ಮೌಲ್ಯಮಾಪನವನ್ನು ಪೆಟ್ರೋಲ್ ಚಾಲಿತ ಸ್ಟಾರಿಯಾ ಪೀಪಲ್ಸ್ ಮೂವರ್‌ನಲ್ಲಿ ನಡೆಸಲಾಯಿತು. ANCAP ಗೆ ಹ್ಯುಂಡೈ ಒದಗಿಸಿದ ಡೇಟಾವು ಸ್ಟಾರಿಯಾ ಮತ್ತು ಸ್ಟಾರಿಯಾ ಲೋಡ್ ಎರಡೂ ರಚನಾತ್ಮಕವಾಗಿ ಒಂದೇ ಆಗಿವೆ ಎಂದು ಸೂಚಿಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಸ್ಟಾರಿಯಾ ಎಂಪಿವಿಯಲ್ಲಿ 3.5 ಲೀಟರ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 272 ಬಿಹೆಚ್‍ಪಿ ಪವರ್ ಮತ್ತು 331 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 3.5 ಲೀಟರ್ ವಿ6 ಪೆಟ್ರೋಲ್-LPG ಯುನಿಟ್ ಅನ್ನು ಹೊಂದಿದ್ದು, ಇದು 240 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಇನ್ನು 2.2 ಲೀಟರ್ 4-ಸಿಲಿಂಡರ್ ಟರ್ಬೊ- ಮೂರು ಎಂಜಿನ್ ಆಯ್ಕೆಗಳೊಂದಿಗೆ ಸಾಮಾನ್ಯ ಸ್ಟಾರಿಯಾದಲ್ಲಿ ಲಭ್ಯವಿದೆ.ಇದರ ಡೀಸೆಲ್ ಯುನಿಟ್ 177 ಬಿಹೆಚ್‍ಪಿ ಪವರ್ ಮತ್ತು 431 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಲಭ್ಯವಿದ್ದು, ಡೀಸೆಲ್ ಮೋಟಾರ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಹೊಸ ಹ್ಯುಂಡೈ ಸ್ಟಾರಿಯಾ ಎಂಪಿವಿವಿಯು 7 ಸೀಟರ್, 9 ಸೀಟರ್ ಮತ್ತು 11 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಸ್ಟಾರಿಯಾ ಎಂಪಿವಿಯು ಬರೋಬ್ಬರಿ 5,253 ಎಂಎಂ ಉದ್ದ, 1,997 ಎಂಎಂ ಅಗಲ, 1,990 ಎಂಎಂ ಎತ್ತರ ಮತ್ತು 3,273 ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, 7 ಸೀಟರ್ ಮಾದರಿಯಲ್ಲಿ 2+2+3 ಮಾದರಿಯ ಆಸನ, 9 ಸೀಟರ್ ಮಾದರಿಯಲ್ಲಿ 2+2+2+3 ಮಾದರಿ ಆಸನ ಮತ್ತು 11 ಸೀಟರ್ ಮಾದರಿಯಲ್ಲಿ 2+3+3+3 ಮಾದರಿಯ ಆಸನಗಳನ್ನು ಜೋಡಿಸಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಈ ಸ್ಟಾರಿಯಾ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಿದ್ದು, ದೊಡ್ಡದಾದ ಗ್ರಿಲ್ ಸಿಸ್ಟಂ, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್ ಮತ್ತು ಸ್ಲೈಡಿಂಗ್ ಡೋರ್ ಜೊತೆಗೆ ಪನೊರಮಿಕ್ ವ್ಯೂ ಹೊಂದಿರುವ ಸೈಡ್ ವಿಂಡೋಗಳನ್ನು ನೀಡಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಇದರೊಂದಿಗೆ 10.25-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿ ಸೌಲಭ್ಯಗಳು, ಪನೊರಮಿಕ್ ವ್ಯೂ, ಅರಾಮದಾಯಕವಾದ ಆಸನಗಳೊಂದಿಗೆ ಎಂಪಿವಿ ಕಾರು ಖರೀದಿದಾರರನ್ನು ಸೆಳೆಯುತ್ತಿದೆ. ಈ ಹೊಸ ಕಾರಿನಲ್ಲಿ ವಿವಿಧ ಮಾದರಿಗಳಿಗಾಗಿ 2.2-ಲೀಟರ್ ಟರ್ಬೊ ಡೀಸೆಲ್ ಮತ್ತು 7 ಸೀಟರ್‌ನೊಂದಿಗೆ ಐಷಾರಾಮಿ ಫೀಚರ್ಸ್ ಹೊಂದಿರುವ ಹೈ ಎಂಡ್ ಮಾದರಿಯಲ್ಲಿ 3.5-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಇನ್ನು ಹ್ಯುಂಡೈ ಸ್ಟಾರಿಯಾ ಇತರ ಆವೃತ್ತಿಗಳಲ್ಲಿ ಲಭ್ಯವಿದೆ, ಅಂದರೆ ಲೋಡ್ ವ್ಯಾನ್ ಮತ್ತು ಕ್ಯಾಂಪರ್. ತಯಾರಕರು ಪ್ರಸ್ತುತ ಯಾವುದೇ ರೂಪದಲ್ಲಿ ಸ್ಟಾರಿಯಾವನ್ನು ಭಾರತಕ್ಕೆ ತರುವ ಯಾವುದೇ ಯೋಜನೆಯನ್ನು ಹೊಂದಿಲ್ಲ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Hyundai Staria ಎಂಪಿವಿ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಎಂಪಿವಿ ಕಾರನ್ನು ಸಿದ್ದಪಡಿಸುತ್ತಿದೆ. ಈ ಕಾರಿಗೆ ಸ್ಟಾರ್‌ಗೇಜರ್ ಎಂದು ಹೆಸರಿಸನ್ನು ನೀಡಬಹುದು, ಈ ಹೊಸ ಹ್ಯುಂಡೈ ಎಂಪಿವಿ ಬಿಡುಗಡೆಯಾದ ಬಳಿಕ ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೊ ಎಂಪಿವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New hyundai staria mpv scores 5 star safety rating in ancap crash test details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X