ಬಿಡುಗಡೆಗೂ ಮುನ್ನವೇ ಹೊಸ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮಾಹಿತಿ ಬಹಿರಂಗ
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಈ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಬಿಡುಗಡೆಯಾಗುವ ಮುನ್ನವೇ ಇದರ ಮಾಹಿತಿಗಳು ಸೋರಿಕೆಯಾಗಿದೆ.

ಸೋರಿಕೆಯಾದ ಮಾಹಿತಿಯ ಪ್ರಕಾರ, ಹೊಸ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಝಡ್ 2 ಡಬ್ಲ್ಯೂಡಿ ಆಟೋಮ್ಯಾಟಿಕ್ ಮತ್ತು ಝಡ್ ಪ್ರೆಸ್ಟೀಜ್ 4 ಡಬ್ಲ್ಯೂಡಿ ಆಟೋಮ್ಯಾಟಿಕ್ ಎಂಬ ಎರಡು ರೂಪಾಂತರಗಳನ್ನು ಬಿಡುಗಡೆಯಾಗಲಿದೆ. ಎರಡು ರೂಪಾಂತರಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ 1.9 ಎಲ್, 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ.

ಈ ಎಂಜಿನ್ 3,600 ಆರ್‌ಪಿಎಂನಲ್ಲಿ 161 ಬಿಹೆಚ್‌ಪಿ ಪವರ್ ಮತ್ತು 2,000 ಆರ್‌ಪಿಎಂನಲ್ಲಿ 360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ನವೀಕರಿಸಿದ ಡಿ-ಮ್ಯಾಕ್ಸ್ ವಿ-ಕ್ರಾಸ್ 2 ಡಬ್ಲ್ಯೂಡಿ ಮತ್ತು 4 ಡಬ್ಲ್ಯೂಡಿ ಆಯ್ಕೆಗಳೊಂದಿಗೆ ಬರುತ್ತದೆ. ಎರಡನೆಯದು ಹೆಚ್ಚಿನ ಟಾರ್ಕ್ ಮೋಡ್ ನೊಂದಿಗೆ ಶಿಫ್ಟ್-ಆನ್-ದಿ-ಫ್ಲೈ ಸಿಸ್ಟಂ ಅನ್ನು ಪಡೆಯುತ್ತದೆ.

ಹೊಸ ಡಿ-ಮ್ಯಾಕ್ಸ್ ಟ್ರಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ ಮತ್ತು ಸಾಫ್ಟ್ ರೈಡ್, ಹಿಂಭಾಗದಲ್ಲಿ ಲೀಫ್ ಸ್ಪಿರ್ಗ್ ಡಬಲ್ ವಿಷ್ಬೋನ್ ಅನ್ನು ಒಳಗೊಂಡಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಈ ಟ್ರಕ್ ಎರಡು ರೂಪಾಂತರಗಳು 255/60 ಆರ್ 18 ಫ್ರಂಟ್ ಟೈರ್ ಮತ್ತು ಹಿಂಭಾಗದ ರೇಡಿಯಲ್ ಟೈರ್‌ಗಳೊಂದಿಗೆ ಬರುತ್ತದೆ, ಇನ್ನು ಇದರ ಬ್ರೇಕ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಇದರಲ್ಲಿ ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರುತ್ತದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ 5295 ಎಂಎಂ ಉದ್ದ, 1860 ಎಂಎಂ ಅಗಲ ಮತ್ತು 1840 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಟ್ರಕ್ 3,095 ಎಂಎಂ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಖರೀದಿದಾರರಿಗೆ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಸ್ಪೈನಲ್ ರೆಡ್, ಟೈಟಾನಿಯಂ ಸಿಲ್ವರ್, ಕಾಸ್ಮಿಕ್ ಬ್ಲ್ಯಾಕ್, ಗಲೆನಾ ಗ್ರೇ, ಸಿಲ್ಕಿ ವೈಟ್ ಪರ್ಲ್, ಸರ್ಪೈರ್ ಬ್ಲೂ ಮತ್ತು ಸ್ಪ್ಲಾಷ್ ವೈಟ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಈ ಹೊಸ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಮುಂಭಾಗ ಫಾಗ್ ಲ್ಯಾಂಪ್, 6 ರೀತಿಯಲ್ಲಿ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡುವ ಡ್ರೈವರ್ ಸೀಟ್, ಆಟೋ ಕ್ರೂಸ್ (ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್) ಮತ್ತು ಲೈವ್ ಸ್ಪೌಂಡ್ ಸೌಂಡ್ 'ರೂಫ್ ಮೌಂಟೆಡ್ ಸೌಂಡ್ ಸಿಸ್ಟಮ್ 8 ಸ್ಪೀಕರ್‌ಗಳನ್ನು ಹೊಂದಿದೆ.

ಇದರೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಲೆಂಗ್ತ್ ಕರ್ಟನ್ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿರುತ್ತದೆ.


Click it and Unblock the Notifications








