ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಇಸುಝು ವಿ-ಕ್ರಾಸ್
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಬಿಎಸ್-6 ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಬಿಎಸ್-6 ಇಸುಝು ವಿ-ಕ್ರಾಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಇನ್ನು ವರದಿಗಳ ಪ್ರಕಾರ, ಬಿಎಸ್-6 ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಕಳೆದ ವರ್ಷ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಬಿಡುಗಡೆಯು ತಡವಾಗಿದೆ. ಇಸುಝು ತನ್ನ ಹೊಸ ತಲೆಮಾರಿನ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಅನ್ನು 2019ರ ಅಕ್ಟೋಬರ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ಅನಾವರಣಗೊಳಿಸಿತ್ತು. ಈ ವಿ-ಕ್ರಾಸ್ ಮಾದರಿಯ ಮುಂಭಾಗದಲ್ಲಿ ಟ್ವಿನ್ ಕ್ರೋಮ್ ಸ್ಲಾಟ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೊಂದಿರುವ ಎಲ್‍ಇಡಿ ಹೆಡ್‍ಲ್ಯಾಂಪ್ ಹಾಗೂ ಡಿಆರ್‍ಎಲ್‍ಗಳಿವೆ.

ಇದರ ಜೊತೆಗೆ ವರ್ಟಿಕಲ್ ಸ್ಟಾಕ್‍ನ ಡ್ಯುಯಲ್ ಫಾಗ್ ಲ್ಯಾಂಪ್ ಹೊಂದಿರುವ ಹೊಸ ಬಂಪರ್ ಹಾಗೂ ಹೊಸ ಸ್ಕಿಡ್ ಪ್ಲೇಟ್‍ಗಳಿದ್ದು, ವಿ-ಕ್ರಾಸ್ ವಾಹನಕ್ಕೆ ಮೊದಲಿಗಿಂತ ಹೆಚ್ಚಿನ ರಗಡ್ ಲುಕ್ ನೀಡುತ್ತವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ವಾಹನದ ಟೇಲ್‍ಗೇಟ್ ಅನ್ನು ಪರಿಷ್ಕರಿಸಲಾಗಿದೆ. ಹೊಸ ಪಿಕ್‍ಅಪ್ ವಾಹನದಲ್ಲಿ 18 ಇಂಚಿನ ಬ್ಲಾಕ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವಾಹನದ ಲುಕ್ ಹೆಚ್ಚಿದೆ. ಕ್ಯಾಬಿನ್‍ನೊಳಗೆ ಹಲವಾರು ಹೊಸ ಫೀಚರ್‍ಗಳನ್ನು ಅಳವಡಿಸಲಾಗಿದೆ.

ಇನ್ನು ಹೊಸ ಇಸುಝು ವಿ-ಕ್ರಾಸ್ ಕ್ಯಾಬಿನ್‍ನಲ್ಲಿ ಹೊಸ ಡ್ಯಾಶ್‍ಬೋರ್ಡ್ ವಿನ್ಯಾಸದ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಹಾಗೂ ಟ್ರೈಗ್ಯುಲರ್ ಎಸಿ ವೆಂಟ್ಸ್ ಗಳನ್ನು ಹೊಂದಿರಲಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಈ ಇಸುಝು ವಿ-ಕ್ರಾಸ್ ನಲ್ಲಿ 6 ಏರ್‍ಬ್ಯಾಗ್, ಸ್ಟಾಬಿಲಿಟಿ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಆಟೋಮ್ಯಾಟಿಕ್ ಲಾಕಿಂಗ್, ವೆಲ್‍ಕಮ್ ಹಾಗೂ ಫಾಲೋ ಮಿ ಹೋಂ ಲೈಟಿಂಗ್ ಹಾಗೂ ವಾಯ್ಸ್ ಕಂಟ್ರೋಲ್ ಗಳನ್ನು ಹೊಂದಿದೆ.

ಇನ್ನು ಇಸುಝು ವಿ-ಕ್ರಾಸ್ ನಲ್ಲಿ 3.0 ಲೀಟರಿನ ಹೊಸ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 188 ಬಿಹೆಚ್‍ಪಿ ಪವರ್ ಹಾಗೂ 450 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 1.9 ಲೀಟರಿನ ಡೀಸೆಲ್ ಎಂಜಿನ್‍ನೊಂದಿಗೂ ಈ ವಾಹನವನ್ನು ಮಾರಾಟ ಮಾಡಲಾಗುವುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎಂಜಿನ್ 148 ಬಿಹೆಚ್‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇಸುಝು ಕಂಪನಿಯು ಭಾರತದಲ್ಲಿ ಡಿ-ಮ್ಯಾಕ್ಸ್, ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಎಂಬ ಮೂರು ಮಾದರಿಗಳನ್ನು ನೀಡಿತು. ಡಿ-ಮ್ಯಾಕ್ಸ್ ವಾಣಿಜ್ಯ ಉದ್ದೇಶದ ಪಿಕ್-ಅಪ್ ಟ್ರಕ್ ಆಗಿದ್ದು, ಇದು ಒಂದೆರಡು ರೂಪಾಂತರಗಳಲ್ಲಿ ಲಭ್ಯವಿದೆ.

ವಿ-ಕ್ರಾಸ್ ಖಾಸಗಿ ಬಳಕೆಗಾಗಿ ಮಾರಾಟವಾಗುವ ಪಿಕ್-ಅಪ್ ಟ್ರಕ್ ಮತ್ತು ಉತ್ತಮ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ. ಕಳೆದ ವರ್ಷ ಇಸುಝು ವಿ-ಕ್ರಾಸ್ ಬಿಎಸ್-6 ಮಾದರಿಯು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿತ್ತು.


Click it and Unblock the Notifications








