ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಜಾಗ್ವಾರ್ ಇಂಡಿಯಾ ಕಂಪನಿಯು ಚೊಚ್ಚಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಐ-ಪೇಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿ ಕೇವಲ ಆರು ತಿಂಗಳಾಗಿದೆ, ಇದೀಗ ಜಾಗ್ವಾರ್ ಕಂಪನಿಯು ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಗಾಗಿ ಶೀಘ್ರದಲ್ಲೇ ಮತ್ತೊಂದು ರೂಪಾಂತರವನ್ನು ಸೇರಿಸಲಿದ್ದಾರೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇದನ್ನು ಐ-ಪೇಸ್ ಬ್ಲ್ಯಾಕ್ ಎಡಿಷನ್ ಎಂದು ಕರೆಯಲಾಗುತ್ತದೆ. ಈ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್(Jaguar I-Pace Black) ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ವಿದೇಶಗಳಲ್ಲಿ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಾಯಿತು. ಎಸ್‌ಇ ಮತ್ತು ಹೆಚ್‌ಎಸ್‌ಇ ರೂಪಾಂತರಗಳಿರುವ ಐ-ಪೇಸ್ ಸರಣಿಯಲ್ಲಿ ಜಾಗ್ವಾರ್ ಹೊಸ ಬ್ಲ್ಯಾಕ್ ಎಡಿಷನ್ ಅನ್ನು ಪಡೆದುಕೊಂಡಿದೆ. ಈ ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್ ಕಾರಿನಲ್ಲಿ ಬ್ಲ್ಯಾಕ್ ಪ್ಯಾಕೇಜ್ ಗ್ರಿಲ್, ಮಿರರ್ ಕ್ಯಾಪ್ಸ್, ವಿಂಡೋ ಸರೌಂಡ್ ಮತ್ತು ಹಿಂಭಾಗದ ಬ್ಯಾಡ್ಜ್‌ಗಳನ್ನು ಸೇರಿವೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಮಾದರಿಯಲ್ಲಿ 5-ಸ್ಪೋಕ್ ವ್ಹೀಲ್ ಗಳು ಸಹ ಬ್ಲ್ಯಾಕ್ ಬಣ್ಣದಲ್ಲಿದೆ. ಇನ್ನು ಒಳಭಾಗದಲ್ಲಿ ಎಬೊನಿ ಲೆದರ್ ಸ್ಪೋರ್ಟ್ಸ್ ಸೀಟುಗಳು ಮತ್ತು ಹೊಂದಾಣಿಕೆಯ ಹೆಡ್‌ಲೈನರ್ ಇವೆ. ಕ್ಯಾಬಿನ್ ಟ್ರಿಮ್ ಬ್ಲ್ಯಾಕ್ ಬಣ್ಣದಲ್ಲಿ ಒಳಗೊಂಡಿದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ ಪನರೋಮಿಕ್ ಸನ್‌ರೂಫ್ ಒಳಗೊಂಡಿದೆ ಇನ್ನು ಈ ಕಾರಿನ ಒಳಭಾಗವು ಕೂಡ ಬ್ಲ್ಯಾಕ್ ಬಣ್ಣದಲ್ಲಿದೆ. ಐ-ಪೇಸ್ ಬ್ಲ್ಯಾಕ್ ಎಡಿಷನ್ ಮಾದರಿಯ ವಿನ್ಯಾಸದಲ್ಲಿ ಬ್ಲ್ಯಾಕ್ ಅಂಶಗಳನ್ನು ನೀಡಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಐಷಾರಾಮಿ ಎಲೆಕ್ಟ್ರಿಕ್ ಕಾರು ಆಕ್ಸಲ್ ಮೇಲೆ ಇರಿಸಲಾಗಿರುವ ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅವುಗಳನ್ನು 90 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗುತ್ತದೆ. 11 ಕಿಲೋವ್ಯಾಟ್ ಆನ್-ಬೋರ್ಡ್ ಚಾರ್ಜರ್ ಮತ್ತು 100 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಅನ್ನು ಹೊಂದಿರುತ್ತದೆ. ಐ-ಪೇಸ್ ಬ್ಲ್ಯಾಕ್ ಎಡಿಷನ್ 470 ಕಿ,ಮೀ ರೇಂಜ್ ಅನ್ನು ಒದಗಿಸುತ್ತದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಎಲೆಕ್ಟ್ರಿಕ್ ಪವರ್‌ಟ್ರೇನ್ 400 ಬಿಹೆಚ್‍ಪಿ ಪವರ್ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುವ ಸಾಮರ್ಥ್ಯವನ್ನು ಹೊಂದಿದೆ. ಜಾಗ್ವಾರ್ ಐ-ಪೇಸ್ ಎಸ್‍ಯುವಿ 470 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಕೇವಲ 4.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯು 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಜಾಗ್ವಾರ್ ಐ-ಪೇಸ್ ಎಸ್‍ಯುವಿ ಹಲವಾರು ಪುರಸ್ಕಾರಗಳನ್ನು ಮತ್ತು 80ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಕಾರಿಗಾಗಿ 7.4 ಕಿಲೋವ್ಯಾಟ್ ವಾಲ್ ಮೌಂಟ್ ಎಸಿ ಚಾರ್ಜರ್ ನೀಡಲಿರುವ ಕಂಪನಿಯು ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆಗೂಡಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 45 ನಿಮಿಷದಲ್ಲಿ ಶೇ.80 ಚಾರ್ಜಿಂಗ್ ಮಾಡಬಹುದಾಗಿದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಹೊಸ ಕಾರಿನಲ್ಲಿ ಒಳಭಾಗದ ಫೀಚರ್ಸ್‌ಗಳು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ಸ್, ಟೈಲ್ ಲೈಟ್ಸ್, ಫುಲ್ ಸೈಜ್ ಫಿಕ್ಸ್ಡ್ ಗ್ಲಾಸ್ ರೂಫ್, ಡ್ಯುಯಲ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಕಂಟ್ರೊಲ್ ಕನೆಕ್ಟೆಡ್ ಟೆಕ್ನಾಲಜಿ ಒಳಗೊಂಡಿದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಕಾರಿನ ಹೈ ಎಂಡ್ ಮಾದರಿಯಲ್ಲಿ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಹ್ಯಾಂಡ್ ಫ್ರೀ ಬೂಟ್ ಓಪನ್, ಅಡಾಪ್ಟಿವ್ ಕ್ರೂಸ್ ಕಂಟ್ರೊಲ್, ಹೆಡ್‌ಅಪ್ ಡಿಸ್‌ಪ್ಲೇ, ವಿಂಡ್‌ಸಾರ್ ಲೆದರ್ ಸ್ಪೋಟ್ ಸೀಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೊಲ್ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿವೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಜಾಗ್ವಾರ್ ಕಂಪನಿಯು ತನ್ನ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯು ಇತರ ಜಾಗ್ವಾರ್ ಮಾದರಿಗಳಂತೆ ಐಷಾರಾಮಿ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ಮುಂಭಾಗ ಮುಂಭಾಗದ ಬಂಪರ್ ಅನ್ನು ಅಗ್ರೇಸಿವ್ ಲುಕ್ ನೊಂದಿಗೆ ಕಾಣುವ ರೀತಿಯ ವಿನ್ಯಾಸಗೊಳಿಸಲಾಗಿದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಏರ್ ಇನ್ ಟೆಕ್ ಗಳು ದೊಡ್ಡದಾಗಿದೆ. ಇದು ಇದು ಬ್ರೇಕ್‌ಗಳನ್ನು ಕೂಲ್ ಆಗಿ ಇರಸಲು ಸಹಾಯ ಮಾಡುತ್ತದೆ. 2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಹೊಸ ಎಲ್ಇಡಿ ಹೆಡ್‌ಲೈಟ್‌ಗಳೊಂದಿಗೆ ಪಿಕ್ಸೆಲ್ ಎಲ್ಇಡಿ ತಂತ್ರಜ್ಞಾನವನ್ನು ಆಯ್ಕೆಯಾಗಿ ನೀಡಲಾಗಿದೆ.ಇನ್ನು ಈ ಎಸ್‍ಯುವಿಯು ನಯವಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು ಏರೋ ಪ್ಯಾಕೇಜ್ ಅನ್ನು ಸಹ ಹೊಂದಿದೆ, ಇದು ಬ್ರ್ಯಾಂಡ್‌ನ ಮೋಟಾರ್‌ಸ್ಪೋರ್ಟ್ ವಿಭಾಗದಿಂದ ಪ್ರೇರಿತವಾಗಿದೆ.

ಹೊಸ Jaguar I-Pace Black ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಜೆಎಲ್‌ಆರ್ ತನ್ನ 22 ಚಿಲ್ಲರೆ ಮಾರಾಟ ಕೇಂದ್ರಗಳನ್ನು 19 ನಗರಗಳಲ್ಲಿ 35 ಇವಿ ಚಾರ್ಜರ್‌ಗಳೊಂದಿಗೆ ಅಪ್‌ಗ್ರೇಡ್ ಮಾಡಿದೆ. ಜಾಗ್ವಾರ್ ಐ-ಪೇಸ್‌ನ ಬೆಲೆಗಳು ಎಸ್ ವೇರಿಯಂಟ್‌ಗಾಗಿ ರೂ.1.06 ಕೋಟಿಯಿಂದ ಆರಂಭವಾಗುತ್ತವೆ, ಇನು ಬ್ಲ್ಯಾಕ್ ಎಡಿಷನ್ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ.

More from DriveSpark

Article Published On: Tuesday, September 28, 2021, 19:57 [IST]
English summary
New jaguar i pace black edition bookings started in india launch soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+