Just In
- 6 min ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 56 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 1 hr ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 1 hr ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
Don't Miss!
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜಾದ 470 ಕಿ.ಮೀ ಮೈಲೇಜ್ ನೀಡುವ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿ
ಜಾಗ್ವಾರ್ ಕಂಪನಿಯು ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಎಸ್ಯುವಿ ಐ-ಪೇಸ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಜಾಗ್ವಾರ್ ತನ್ನ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.
ಹೊಸ ಜಾಗ್ವಾರ್ ತನ್ನ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯು ಭಾರತದಲ್ಲಿ 2021ರ ಮಾರ್ಚ್ 9 ರಂದು ಬಿಡುಗಡೆಯಾಗಲಿದೆ. ಕಂಪನಿಯು ಜಾಗ್ವಾರ್ ತನ್ನ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಜಾಗ್ವಾರ್ ಡೀಲರುಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಈ ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರು ಎಸ್, ಎಸ್ಇ ಮತ್ತು ಎಚ್ಎಸ್ಇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯ ವಿತರಣೆಯನ್ನು ಕೂಡ ಮುಂದಿನ ತಿಂಗಳಿನಲ್ಲಿ ಪ್ರಾರಂಭಿಸಬಹುದು.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ, ಅವರು ಮಾತನಾಡಿ, ಲ್ಯಾಂಡ್ ರೋವರ್ ಡಿಫೆಂಡರ್ನ ಡಿಜಿಟಲ್ ಬಿಡುಗಡೆಗೆ ಅದ್ಭುತವಾದ ಪ್ರತಿಕ್ರಿಯೆಯ ನಂತರ, ಜಾಗ್ವಾರ್ ಐ-ಪೇಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮತ್ತೊಂದು ಡಿಜಿಟಲ್ ವೇದಿಕೆಯ ಮೂಲಕ ಬಿಡುಗಡೆಗೊಳಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಮೊದಲ ಐ-ಪೇಸ್ ಎಲೆಕ್ಟ್ರಿಕ್-ಎಸ್ಯುವಿ ಕಳೆದ ತಿಂಗಳು ಮುಂಬೈ ಬಳಿಯ (ಜೆಎನ್ಪಿಟಿ) ಜವಾಹರಲಾಲ್ ನೆಹರು ಬಂದರಿನಲ್ಲಿ ಬಂದು ತಲುಪಿತ್ತು. ಈ ಮೊದಲ ಐ-ಪೇಸ್ ಎಲೆಕ್ಟ್ರಿಕ್-ಎಸ್ಯುವಿಯನ್ನು ಭಾರತದಲ್ಲಿ ಟೆಸ್ಟ್ ಮಾಡಲಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
ಈ ಎಸ್ಯುವಿನಲ್ಲಿ ಹೆಚ್ಚುವರಿಯಾಗಿ, ಚಾರ್ಜ್ ಮಾಡಲು ಐ-ಪೇಸ್ ಗ್ರಾಹಕರಿಗೆ ಒಂದೆರಡು ಆಯ್ಕೆಗಳನ್ನು ನೀಡುವುದಾಗಿ ಜಾಗ್ವಾರ್ ಘೋಷಿಸಿದೆ. ಟಾಟಾ ತನ್ನ 'ಇಝಡ್ ಚಾರ್ಜ್' ಇವಿ ಚಾರ್ಜಿಂಗ್ ನೆಟ್ವರ್ಕ್ನ ಭಾಗವಾಗಿ ದೇಶಾದ್ಯಂತ 200ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಿದೆ.
ಈ 'ಇಝಡ್ ಚಾರ್ಜ್ 'ಇವಿ ಚಾರ್ಜಿಂಗ್ ನೆಟ್ವರ್ಕ್ಗೆ ಗ್ರಾಹಕರಿಗೆ ಪ್ರವೇಶವಿರುತ್ತದೆ, ಇವುಗಳನ್ನು ನಗರದೊಳಗಿನ ಅನುಕೂಲಕರ ಸ್ಥಳಗಳಲ್ಲಿ ಇರಿಸಲಾಗುತ್ತದೆ. ಇದು ಮಾಲ್ಗಳು, ರೆಸ್ಟೋರೆಂಟ್ಗಳು, ಕಚೇರಿಗಳು ಮತ್ತು ಹೆದ್ದಾರಿಗಳಂತಹ ಸ್ಥಳಗಳಲ್ಲಿ ಇರಿಸಲಾಗುತ್ತದೆ. ಇದನ್ನು ಸ್ಟ್ಯಾಂಡರ್ಡ್ ಆಗಿ 7.4 ಕಿ.ವ್ಯಾ ಎಸಿ ವಾಲ್-ಮೌಂಟ್ ಚಾರ್ಜರ್ ಸಹ ನೀಡಲಾಗುವುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಜಾಗ್ವಾರ್ ಐ-ಪೇಸ್ ಎಸ್ಯುವಿಯ ಬಗ್ಗೆ ಹೇಳುವುದಾದರೆ, ಈ ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿ ಆಕ್ಸಲ್ ಮೇಲೆ ಇರಿಸಲಾಗಿರುವ ಎರಡು ಎಲೆಕ್ಟ್ರಿಕ್ ಮೋಟರ್ಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅವುಗಳನ್ನು 90 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ಗೆ ಜೋಡಿಸಲಾಗುತ್ತದೆ.
ಈ ಎಲೆಕ್ಟ್ರಿಕ್ ಪವರ್ಟ್ರೇನ್ 395 ಬಿಹೆಚ್ಪಿ ಪವರ್ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತದೆ. ಜಾಗ್ವಾರ್ ಐ-ಪೇಸ್ ಎಸ್ಯುವಿ 470 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಎಸ್ಯುವಿ ಕೇವಲ 4.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
ಇನ್ನು ಜಾಗ್ವಾರ್ ಐ-ಪೇಸ್ ಎಸ್ಯುವಿ 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಜಾಗ್ವಾರ್ ಐ-ಪೇಸ್ ಎಸ್ಯುವಿ ಹಲವಾರು ಪುರಸ್ಕಾರಗಳನ್ನು ಮತ್ತು 80 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದಿದೆ.