ಹೊಸ ಜೀಪ್ ಕಮಾಂಡರ್ 7-ಸೀಟರ್ ಎಸ್‍ಯುವಿಯ ಚಿತ್ರಗಳು ಬಹಿರಂಗ
ಅಮೆರಿಕ ಮೂಲದ ಜೀಪ್ ಕಂಪನಿಯು ತನ್ನ ಕಂಪಾಸ್ ಮಾದರಿಯನ್ನು ಆಧರಿಸಿದ ಹೊಸ 7-ಸೀಟರ್ ಪ್ರೀಮಿಯಂ ಪೂರ್ಣ ಗಾತ್ರದ ಎಸ್‍ಯುವಿಯನ್ನು ಬ್ರೆಜಿಲ್‌ನಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬ್ರೆಜಿಲ್‌ನಲ್ಲಿ ಈ ಹೊಸ ಜೀಪ್ ಎಸ್‍ಯುವಿಯು ಕಮಾಂಡರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಈ ಎಸ್‍ಯುವಿಯನ್ನು ಮೆರಿಡಿಯನ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇನ್ನು ಈ ಹೊಸ ಜೀಪ್ ಕಮಾಂಡರ್ 7-ಸೀಟರ್ ಎಸ್‍ಯುವಿಯು ಇದೇ ತಿಂಗಳ 26 ರಂದು ಬ್ರೆಜಿಲ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಈ ಹೊಸ ಜೀಪ್ 7-ಸೀಟರ್ ಎಸ್‌ಯುವಿಯ ಅಧಿಕೃತ ಚಿತ್ರಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಹೊಸ ಎಸ್‍ಯುವಿಯು ಎಫ್‌ಸಿಎಯ ಸ್ಮಾಲ್ ವೈಡ್ 4×4 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ರೆನೆಗೇಡ್ ಮತ್ತು ಕಂಪಾಸ್‌ಗೆ ಸಹ ಆಧಾರವಾಗಿದೆ. ಉದ್ದವಾದ ದೇಹ ಮತ್ತು ಹೆಚ್ಚಿನ ವ್ಹೀಲ್‌ಬೇಸ್‌ಗೆ ಅನುಕೂಲವಾಗುವಂತೆ ಈ ಪ್ಲಾಟ್‌ಫಾರ್ಮ್ ಅನ್ನು ಮಾರ್ಪಡಿಸಲಾಗುತ್ತದೆ.

ಮೂರು-ಸಾಲಿನ ಎಸ್‌ಯುವಿ ಜೀಪ್‌ನ ಡಿಎನ್‌ಎಯನ್ನು ಒಳಗೊಂಡಂತೆ ತುಸು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಮೂರು ಸಾಲಿನ ಎಸ್‍ಯುವಿಯಯನ್ನು ಮಿಡ್ ಎಸ್‍ಯುವಿಯ ಕಂಪಾಸ್ ಮಾದರಿಗೆ ಹೋಲಿಸಿದರೆ ವಿಭಿನ್ನ ಮಾನಿಕರ್ ಪಡೆದಿದೆ. ಇನ್ನು ಹೊಸ 7-ಸೀಟರ್ ಜೀಪ್ ಎಸ್‍ಯುವಿಯು ಆಫ್-ರೋಡಿಂಗ್ ಸಾಮರ್ಥ್ಯದವನ್ನು ಹೊಂದಿರುತ್ತದೆ.

ಹೊಸ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿರಬಹುದು. ಇದರಲ್ಲಿ ಲಂಬವಾದ ಗ್ರಿಲ್ ಸ್ಲ್ಯಾಟ್‌ಗಳು, ತೀಕ್ಷ್ಣವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೆಚ್ಚು ಅಗ್ರೇಸಿವ್ ಬಂಪರ್ ಪೈಪ್‌ಲೈನ್ ಅನ್ನು ಹೊಂದಿದೆ.

ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಂಪಾಸ್ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ. ಹೊಸ ಎಸ್‍ಯುವಿಯಲ್ಲಿ ಎಸಿ ವೆಂಟ್ಸ್, ಸ್ಪೀಕರ್‌ಗಳು, ಡೋರ್ ಹ್ಯಾಂಡಲ್ಸ್ ಫ್ರೇಮ್ ಮತ್ತು ಇತರ ಭಾಗಗಳ ಸುತ್ತಲೂ ಕ್ರೋಮ್ ಔಟ್ ಲೈನ್ ಅನ್ನು ಒಳಗೊಂಡಿರುತ್ತದೆ.

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಕ್ರೂಸ್ ಕಂಟ್ರೋಲ್, ಫುಲ್ ಎಲ್ಇಡಿ ಆಟೋ ಹೆಡ್‌ಲ್ಯಾಂಪ್‌ಗಳು, ಅಪ್‌ಡೇಟೆಡ್ ಯುಕನೆಕ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಕಾರ್ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಇತರ ಅತ್ಯಾಧುನಿಕ ಫೀಚರ್ ಗಳನ್ನು ಕ್ಡೂಡ ಹೊಂದಿರಲಿದೆ.

ಹೊಸ ಜೀಪ್ ಕಮಾಂಡರ್ ಎಸ್‍ಯುವಿಯಲ್ಲಿ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 173 ಬಿಹೆಚ್ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಫಿಯೆಟ್ ಮೂಲದ 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಇದು 200 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗುತ್ತದೆ. ಇದರೊಂದಿಗೆ ಎಡಬ್ಲ್ಯೂ ಸಿಸ್ಟಂ ಅನ್ನು ಒಳಗೊಂಡಿರುತ್ತದೆ ಇದು ಎರಡೂ ಆಕ್ಸಲ್‌ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಇನ್ನು ಜೀಪ್ ಕಂಪನಿಯು ಜನಪ್ರಿಯ ಜೀಪ್ ರ‍್ಯಾಂಗ್ಲರ್ 80ನೇ ವರ್ಷದ ಸಂಭ್ರಮದ ಭಾಗವಾಗಿ 80ನೇ ರ‍್ಯಾಂಗ್ಲರ್ ಆನಿವರ್ಸರ್ ಎಡಿಷನ್ ಅನ್ನು ಇತ್ತೀಚೆಗೆ ಪರಿಚಯಿಸಿದೆ. ಎಂಟು ದಶಕಗಳ ಕಾಲ 4x4 ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿರುವ ಎಸ್‍ಯುವಿ ಎಂಬ ಹೆಗ್ಗಳಿಕೆಗೆ ರ‍್ಯಾಂಗ್ಲರ್ ಪಾತ್ರವಗಿದೆ. 2021ರ ಜೀಪ್ ರ‍್ಯಾಂಗ್ಲರ್ ಸುರಕ್ಷತಾ ವೈಶಿಷ್ಟ್ಯಗಳು, ಆಫ್-ರೋಡ್ ಸಾಮರ್ಥ್ಯಗಳನ್ನು ಮತ್ತು ಹೊಸ ಬಣ್ಣಗಳ ಸೇರ್ಪಡೆಯಾಗಿದೆ.

ನವೀಕರಿಸಿದ ವಾಹನದ ಎಲ್ಲಾ ಮಾದರಿಗಳಿಗೆ 2.0ಎಲ್ ಯುರೋ6ಡಿ ಪೆಟ್ರೋಲ್ ಎಂಜಿನ್ ಅಳವಡಿಸಲಿದ್ದು. ಈ ಎಂಜಿನ್ 272 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ರ‍್ಯಾಂಗ್ಲರ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ) ಅನ್ನು ಸ್ಟಾಪ್ ಅಂಡ್ ಗೋ, ಎಮರ್ಜನ್ಸಿ ಬ್ರೇಕಿಂಗ್ (ಎಇಬಿ) ಮತ್ತು ಆಟೋ ಹೈ ಬೀಪ್ ಹೊಂದಿದೆ.

ಈ 2021ರ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿ ಹೊಸ ಫೀಚರ್ಸ್ ಗಳನ್ನು ಸೇರಿಸಿದ್ದು, ಇದು ಹೆಚ್ಚು ಸಮರ್ಥ ಆಫ್-ರೋಡರ್ ಆಗಿ ಮಾರ್ಪಟ್ಟಿದೆ. ಈ ಹೊಸ ಮಾದರಿಯು ಸೆಲೆಕ್-ಸ್ಪೀಡ್ ಕಂಟ್ರೋಲ್ ಅನ್ನು ಹೊಂದಿರುತ್ತದೆ. ಇದು ಆಫ್-ರೋಡ್ ಕ್ರೂಸ್ ಕಂಟ್ರೋಲ್ ಆಗಿದ್ದು, ಇದು ರಾಕ್ ಕ್ರಾಲ್ ಮತ್ತು ಚಾಲಕನಿಗೆ ಸ್ಥಿರವಾದ ವೇಗವನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಮಾದರಿಯ ಹಲವಾರು ಅತ್ಯಾಧ್ಯುನಿಕ ತಂತ್ರಜ್ಙಾನಗಳನ್ನು ಪಡೆದುಕೊಂಡಿದೆ.

ಇನ್ನು 8.4 ಇಂಚಿನ ಟಚ್‌ಸ್ಕ್ರೀನ್ ಮೂಲಕ ಗ್ರಾಹಕರು ಆಯ್ಕೆ ಮಾಡಬಹುದಾದ ಟೈರ್ ಫಿಲ್ ಅಲರ್ಟ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ. ಇನ್ನು ಇದರ ಬಾಡಿ-ಕಲರ್ ಹಾರ್ಡ್‌ಟಾಪ್ ಮತ್ತು ಫ್ರಂಟ್ ವ್ಹೀಲ್ ಕಮಾನುಗಳಲ್ಲಿನ 80ನೇ ಆನಿವರ್ಸ ಬ್ಯಾಡ್ಜ್ ಹೊಂದಿರುವ ಪೂರ್ಣ ಎಲ್ಇಡಿ ಹೈ-ಬೀಮ್ ಹೆಡ್‌ಲೈಟ್‌ಗಳು ಈ ಸ್ಪೆಷಲ್ ಎಡಿಷನ್ ಮಾದರಿಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ಇನ್ನು ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯಯು ಭಾರತೀಯ ಮಾರುಕಟ್ಟೆಯಲ್ಲಿಯು ಮೆರಿಡಿಯನ್ ಎಂಬದ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಹೊಸ 7-ಸೀಟರ್ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ4 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








