Just In
Don't Miss!
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- News
ದೆಹಲಿ ಸರ್ಕಾರ ಹೇಳಿದ್ದಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು ಸಾವು: ಮೇಯರ್
- Sports
ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2022ರ ಜೀಪ್ ಗ್ರ್ಯಾಂಡ್ ವ್ಯಾಗೊನೀರ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ
ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾ ಜೀಪ್ 1962ರಲ್ಲಿ ಮೊದಲ ಬಾರಿಗೆ ಐಕಾನಿಕ್ ವ್ಯಾಗೊನೀರ್ ಎಸ್‌ಯುವಿಯನ್ನು ಪರಿಚಯಿಸಿತು. ನಂತರ ಜೀಪ್ ಕಂಪನಿಯು ಹಲವು ಪ್ರಮುಖ ಹೊಸ ಎಸ್‍ಯುವಿಗಳ ಬಿಡುಗಡೆಗೊಳಿಸಿದಾಗ ಐಕಾನಿಕ್ ವ್ಯಾಗೊನೀರ್ ಎಸ್‌ಯುವಿಯನ್ನು ಕೊನೆಗೆ 1991ರಲ್ಲಿ ಸ್ಥಗಿತಗೊಳಿಸಿದರು.

ಜೀಪ್ ಗ್ರ್ಯಾಂಡ್ ವ್ಯಾಗೊನೀರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾದ ಮೊದಲ 4 ಡಬ್ಲ್ಯೂಡಿ ಎಸ್‌ಯುವಿ ಎಂಬ ಖ್ಯಾತಿಗೆ ಪಾತ್ರವಾದ ಮಾದರಿಯಾಗಿದೆ. ಈ ಐಕಾನಿಕ್ ಎಸ್‍ಯುವಿಯನ್ನು ಕಾನ್ಸೆಪ್ಟ್ ಮಾದರಿಯಾಗಿ ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಇದೀಗ 2022ರ ಜೀಪ್ ಗ್ರ್ಯಾಂಡ್ ವ್ಯಾಗೊನೀರ್ ಎಸ್‍ಯುವಿಯ ಟೀಸರ್ ವೀಡಿಯೋ ಮೂಲಕ ಇದರ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.

2022ರ ಜೀಪ್ ಗ್ರ್ಯಾಂಡ್ ವ್ಯಾಗೊನೀರ್ ಎಸ್‍ಯುವಿಯು ಮಾರ್ಚ್ 11ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಟೀಸರ್ ವೀಡಿಯೋದಲ್ಲಿ ಹೊಸ ವ್ಯಾಗೊನೀರ್ 7-ಸ್ಲ್ಯಾಟ್ ಗ್ರಿಲ್ ಅನ್ನು ಹೊಂದಿದೆ. ಆದರೆ ಇದರ ಕ್ರೋಮ್ ಲೈನ್ ಗಳು ಅನಾವರಣಗೊಳಿಸಿದ ಕಾನ್ಸೆಪ್ಟ್ ಮಾದರಿಗಿಂತ ಭಿನ್ನವಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಉಳಿದಂತೆ ಟೀಸರ್ ನಲ್ಲಿ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ. ಇನ್ನು ಕಳೆದ ವರ್ಷ ಅನಾವರಣಗೊಳಿಸಿದ ಜೀಪ್ ಗ್ರ್ಯಾಂಡ್ ವ್ಯಾಗೋನಿಯರ್ ಕಾನ್ಸೆಪ್ಟ್ ಮಾದರಿಯು ಪೂರ್ಣ ಗಾತ್ರದ ಎಸ್‍ಯುವಿ ಬೋಲ್ಡ್ ಪ್ರೊಫೈಲ್‌ನೊಂದಿಗೆ ಬರುತ್ತದೆ.

ಈ ಹೊಸ ಗ್ರ್ಯಾಂಡ್ ವ್ಯಾಗೊನೀರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಟೀಸರ್ ನಲ್ಲಿರುವ ರೀತಿ ಇದರಲ್ಲಿ ಸಾಂಪ್ರದಾಯಿಕವಾದ ಜೀಪ್ 7-ಸ್ಲ್ಯಾಟ್ ಗ್ರಿಲ್ ಇರುತ್ತದೆ. ಗ್ರಿಲ್ ನಲ್ಲಿ ಸಂಪೂರ್ಣ ಅಗಲವನ್ನು ವಿಸ್ತರಿಸುವ ಎಲ್ಇಡಿ ಲೈಟ್ ಗಳ ಸ್ಲ್ಯಾಟ್ಗಳನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಈ ಹೊಸ ಎಸ್‍ಯುವಿಯು ಎಲ್ಇಡಿ ಬೈ-ಫಂಕ್ಷನಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಈ ಎಸ್‍ಯುವಿಯ ಮೇಲೆ ಸ್ಲಿಕ್ ಗ್ರಿಲ್ ಅನ್ನು ಹೊಂದಿದೆ. ಕೆಳಗಿನ ಬಂಪರ್ ಭಾಗದಲ್ಲಿ ಏರ್ ಇನ್ ಟೆಕ್ ಅನ್ನು ಹೊಂದಿದೆ.

ಜೀಪ್ ಗ್ರ್ಯಾಂಡ್ ವ್ಯಾಗನೀರ್ ಕಾನ್ಸೆಪ್ಟ್ ದೊಡ್ಡ ಮಲ್ಟಿ-ಸ್ಪೋಕ್ 24 ಇಂಚಿನ ವ್ಹೀಲ್ ಗಳನ್ನು ಹೊಂದಿರುತ್ತದೆ. ಇನ್ನು ಎಸ್‍ಯುವಿಯ ಮುಂಭಾಗದಲ್ಲಿ ಗ್ರ್ಯಾಂಡ್ ವ್ಯಾಗೋನಿಯರ್ ಬ್ಯಾಡ್ಜಿಂಗ್, ಎಲ್ಇಡಿ ಟೈಲ್-ಲ್ಯಾಂಪ್‌ಗಳು ಮತ್ತು ರನ್ನಿಂಗ್ ಟೈಲ್-ಗೇಟ್ ಅನ್ನು ಒಳಗೊಂಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300
ಈ ಎಸ್‌ಯುವಿ ಫ್ಲಾಟ್ ರಿಯರ್ ಮತ್ತು ಸೈಡ್ ಪ್ರೊಫೈಲ್ ಅನ್ನು ಪಡೆಯುತ್ತದೆ, ಇದು ಮೂಲ ವ್ಯಾಗೋನೀರ್‌ನಿಂದ ಸ್ಫೂರ್ತಿ ಪಡೆದಿದೆ. ಗ್ರ್ಯಾಂಡ್ ವ್ಯಾಗೊನೀರ್‌ನ ಕ್ಯಾಬಿನ್ ಫ್ಯೂಚರಿಸ್ಟಿಕ್ ಆಗಿದೆ, ಇದರಲ್ಲಿ ಏಳು ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, 12.3-ಇಂಚಿನ ಡ್ರೈವರ್ ಡಿಸ್ಪ್ಲೇ, ಸೆಂಟ್ರಲ್ ಕನ್ಸೋಲ್‌ನಲ್ಲಿ 12.1-ಇಂಚಿನ ಟಚ್‌ಸ್ಕ್ರೀನ್ ಮತ್ತು ಕನ್ಸೋಲ್‌ನಲ್ಲಿ ಕೆಳಗೆ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ.

ಹಿಂಭಾಗದಲ್ಲಿ ಕ್ಯಾಪ್ಟನ್ ಸಿಟುಗಳ ನಡುವೆ 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು ಮುಂಭಾಗದ ಆಸನಗಳ ಹಿಂಭಾಗದಲ್ಲಿ ಒಂದೆರಡು 10.1-ಇಂಚಿನ ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಈ ಎಸ್‍ಯುವಿಯಲ್ಲಿ ಇತ್ತೀಚಿನ ಯುಕನೆಕ್ಟ್ 5 ಸಿಸ್ಟಂ ಅನ್ನು ಅಳವಡಿಸಬಹುದು.

ಜೀಪ್ ಗ್ರ್ಯಾಂಡ್ ವ್ಯಾಗೊನೀರ್‌ನ ಎಂಜಿನ್ ಮಾಹಿತಿಯನ್ನು ಇನ್ನು ಬಹಿರಂಗಪಡಿಸಿಲ್ಲ. ಆದರೆ ಈ ಎಸ್‌ಯುವಿಯಲ್ಲಿ ಪ್ಲಗ್-ಇನ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಈ ಎಸ್‍ಯುವಿಯಲ್ಲಿ 4×4 ಸಿಸ್ಟಂ ಮತ್ತು ಕ್ವಾಡ್ರಾ-ಲಿಫ್ಟ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿರುತ್ತದೆ.