ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಜೀಪ್ ರ‍್ಯಾಂಗ್ಲರ್ 4xe ಹೈಬ್ರಿಡ್ ಎಸ್‍ಯುವಿ
ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ಕಂಪನಿಯು ಹೈಬ್ರಿಡ್ ಮಾದರಿಗಳಿಗೆ ಹೆಚ್ಚಿನ ಪ್ರಾಮ್ಯುಖತೆಯನ್ನು ನೀಡುತ್ತಿದೆ. ಜೀಫ್ ಕಂಪನಿಯು ತನ್ನ ಸರಣಿಯಲ್ಲಿರುವ ಜನಪ್ರಿಯ ಮಾದರಿಗಳನ್ನು ಹೈಬ್ರಿಡ್ ಆವೃತ್ತಿಗಳಾಗಿ ಕಂಪನಿಯು ಬಿಡುಗಡೆಗೊಳಿಸುತ್ತಿದೆ.

ಜೀಪ್ ತನ್ನ ಸರಣಿಯ ರ‍್ಯಾಂಗ್ಲರ್ 4xe ಹೈಬ್ರಿಡ್ ಮಾದರಿಯನ್ನು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ವರದಿಗಳ ಪ್ರಕಾರ, ಈ ಜೀಪ್ ರ‍್ಯಾಂಗ್ಲರ್ 4xe ಹೈಬ್ರಿಡ್ ಮಾದರಿಯನ್ನು ಯುರೋಪ್‌ನಲ್ಲಿ ಮೇ 27 ರಂದು ಪರಿಚಯಿಸಬಹುದು, ಹಳೆಯ ಎಸ್‌ಯುವಿಯಲ್ಲಿರುವ ಎಲ್ಲಾ ಫೀಚರ್ ಗಳು ಹೊಸ ಮಾದರಿಯಲ್ಲಿ ಮುಂದುವರೆಯಲಿವೆ.

ಜೀಪ್ ರ‍್ಯಾಂಗ್ಲರ್ ಹೈಬ್ರಿಡ್ ಆವೃತ್ತಿಯ ವಿನ್ಯಾಸದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲ್ಲಾಗಿದೆ. ಇನ್ನು ಈ ಹೊಸ ಜೀಪ್ ರ‍್ಯಾಂಗ್ಲರ್ 4xe ಮಾದರಿಯಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎಂಜಿನ್ 5,250 ಆರ್‌ಪಿಎಂನಲ್ಲಿ 270 ಬಿಹೆಚ್‍ಪಿ ಪವರ್ ಮತ್ತು 3,000 ಆರ್‌ಪಿಎಂನಲ್ಲಿ 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ.

ಇದು 44 ಬಿಹೆಚ್‍ಪಿ ಪವರ್ ಮತ್ತು 53 ಎನ್‌ಎಂ ಟಾರ್ಕ್ ಉತ್ಪಾದಿಸಲಾಗುತ್ತದೆ. ಇನ್ನು 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಜೀಪ್ ರ‍್ಯಾಂಗ್ಲರ್4xe ನಲ್ಲಿ 400ವಿ, 17ಕಿ.ವ್ಯಾಟ್ ಲಿಥಿಯಂ-ಅಯಾನ್ ಬ್ಯಾಟರ್ ಪ್ಯಾಕ್ ಯುನಿಟ್ ಅನ್ನು ಹೊಂದಿದೆ. ಇದನ್ನು ಎರಡನೇ ಸಾಲಿನ ಆಸನಗಳ ಅಡಿಯಲ್ಲಿ ಇರಿಸಲಾಗಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಈ ಜೀಪ್ ಹಿಂಭಾಗದ ಸೀಟುಗಳನ್ನು ಮರುವಿನ್ಯಾಸಗೊಳಿಸಿದೆ. ಬ್ಯಾಟರಿ ಯಾವಾಗಲೂ ಗರಿಷ್ಠ ತಾಪಮಾನದಲ್ಲಿ ಇಡಲು, ಇದರಲ್ಲಿ ಪ್ರತ್ಯೇಕವಾಗಿ ಕೂಲಿಂಗ್ ಮತ್ತು ಹಿಟಿಂಗ್ ಸಿಸ್ಟಂ ಅನ್ನು ಹೊಂದಿದೆ.

ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್ಸ್ ಅಂಶಗಳು ವಾಟರ್ ಫ್ರೋಫ್ ಆಗಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯು 76 ಸೆಂ.ಮೀ ಅಥವಾ 30 ಇಂಚುಗಳಷ್ಟು ಹರಿಯುವ ನೀರಿನಲ್ಲಿ ಸಲಿಸಾಗಿ ಚಲಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ರ‍್ಯಾಂಗ್ಲರ್ ಹೈಬ್ರಿಡ್ ಆವೃತ್ತಿಯಲ್ಲಿ ಹೈಬ್ರಿಡ್, ಎಲೆಕ್ಟ್ರಿಕ್ ಮತ್ತು ಇಸೇವ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳಿವೆ. ಹೈಬ್ರಿಡ್ ಮೋಡ್ ವಾಹನವನ್ನು ಎಲೆಕ್ಟ್ರಿಕ್ ಮೋಡ್‌ನಲ್ಲಿ ಪ್ರಾರಂಭಿಸುತ್ತದೆ ಮತ್ತು ಬ್ಯಾಟರಿ ಚಾರ್ಜ್ ಕಡಿಮೆಯಾದಾಗ ಪೆಟ್ರೋಲ್ ಎಂಜಿನ್ ಅನ್ನು ಆನ್ ಮಾಡುತ್ತದೆ.

ಕೊನೆಯ ಮೋಡ್, ಇಸೇವ್ ಎಲೆಕ್ಟ್ರಿಕ್ ಚಾಲನೆಗೆ ಆದ್ಯತೆ ನೀಡುವ ಮೂಲಕ ಬ್ಯಾಟರಿ ಚಾರ್ಜ್ ಅನ್ನು ಸಂರಕ್ಷಿಸುತ್ತದೆ. ರ‍್ಯಾಂಗ್ಲರ್ 4xe ಹೈಬ್ರಿಡ್ ಎಸ್‍ಯುವಿಯು ಶೀಘ್ರದಲ್ಲೇ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಎಸ್‍ಯುವಿಯು ಮುಂದಿನ ವರ್ಷಗಳಲ್ಲಿ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಗುವ ಸಾಧ್ಯತೆಗಳಿದೆ.


Click it and Unblock the Notifications








