ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಟ್ರ್ಯಾಕ್ ಆಧಾರಿತ ಹುರಾಕನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ (ಸೂಪರ್ ಟ್ರೋಫಿಯೋ ಓಮೊಲೊಗಾಟಾ) ಕಾರಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಇದೇ ತಿಂಗಳ 15 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಳಂತೆಯೇ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ. ಕಡಿಮೆ ಟಾರ್ಕ್ ಅನ್ನು ಸರಿದೂಗಿಸಲು ಹುರಾಕನ್ ಎಸ್‌ಟಿಒ ಹುರಾಕನ್ ಪರ್ಫಾರ್ಮೆಂಟೆಗಿಂತ 43 ಕಿ.ಗ್ರಾಂ ಹಗುರವಾಗಿರುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಟ್ರ್ಯಾಕ್ ಕಾರ್ಯಕ್ಷಮತೆಗೆ ಮತ್ತಷ್ಟು ಸಹಾಯ ಮಾಡಲು, ಹುರಾಕನ್ ಪರ್ಫಾರ್ಮೆಂಟಿನಿಂದ ಏರೋಡೈನಾನಿಕ್ ಮತ್ತಷ್ಟು ತಿರುಚಲಾಯಿತು. ಇದು ಕ್ರಮವಾಗಿ ಶೇ.37 ಮತ್ತು ಶೇ.53 ಏರೋಡೈನಾನಿಕ್ ದಕ್ಷತೆ ಮತ್ತು ಡೌನ್‌ಫೋರ್ಸ್‌ನಲ್ಲಿ ಹೆಚ್ಚಾಗುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿನ ಬಾಡಿಯ ಶೇ.75 ರಷ್ಟು ಫೈಬರ್ ಬಳಸಿ ಮತ್ತು ಮೆಗ್ನೀಸಿಯಮ್ ವ್ಹೀಲ್ ಗಳನ್ನು ಬಳಸುವ ಮೂಲಕ 43 ಕಿ.ಗ್ರಾಂ ತೂಕ ಉಳಿತಾಯ ಮಾಡಲಾಗಿದೆ. ಇದರ ಬಾನೆಟ್, ಬಂಪರ್ ಮತ್ತು ಮಡ್‌ಗಾರ್ಡ್ ಅನ್ನು ಒಂದೇ ಯುನಿಟ್ ಆಗಿ ಮಾಡುವ ಮೂಲಕ ಮತ್ತಷ್ಟು ತೂಕ ಉಳಿತಾಯ ಮಾಡಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿನಲ್ಲಿ 5.2-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 631 ಹೆಚ್‌ಪಿ ಪವರ್ ಮತ್ತು 565 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಹೊಸ ಕಾರು ಕೇವಲ 3 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕೇವಲ 9 ಸೆಕೆಂಡುಗಳಲ್ಲಿ 200 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್ ಕಾರ್ 310 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಕಾರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯು 327,838 ಯುಎಸ್ಡಿಗಳಿಂದ ಪ್ರಾರಂಭವಾಗುತ್ತದೆ, ಇದು ಲಂಬೋರ್ಘಿನಿ ಹುರಾಕನ್ ಪರ್ಫಾರ್ಮೆಂಟೆ ಮತ್ತು ಡಾಡ್ಜ್ ಚಾಲೆಂಜರ್ ಎಸ್ಆರ್ಟಿ ಹೆಲ್ಕ್ಯಾಟ್ ಮಾದರಿಗಳ ಬೆಲೆಗೆ ಸಮನಾಗಿರುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಕರೋನಾ ವೈರಸ್ ಆರ್ಭಟದಿಂದಾಗಿ 2021ರ ಹಣಕಾಸು ವರ್ಷದಲ್ಲಿ ಬಹುತೇಕ ಎಲ್ಲಾ ಐಷಾರಾಮಿ ಕಾರುಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಆದರೆ ಲ್ಯಾಂಬೊರ್ಗಿನಿ ಕಾರುಗಳ ಮಾರಾಟ ಪ್ರಮಾಣವು ದ್ವಿಗುಣಗೊಂಡಿತ್ತು. ಇದರಿಂದ ಲ್ಯಾಂಬೊರ್ಗಿನಿ ಕಾರುಗಳು ಹೊಸ ಸೂಪರ್ ಕಾರುಗಳು ಪರಿಚಯಿಸಲಾಗುತ್ತಿದೆ.

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

More from DriveSpark

Article Published On: Saturday, July 3, 2021, 20:18 [IST]
English summary
Lamborghini Huracan STO India Launch On July 15. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+