ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಕಂಪನಿಯು ಹೊಸ ಡಿಫೆಂಡರ್ ಟ್ರೋಫಿ ಎಡಿಷನ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಟ್ರೋಫಿ ಸೀರಿಸ್ ಮಾದರಿಗಳು ಪ್ರಬಲ ಆಫ್-ರೋಡ್ ಗಳಾಗಿವೆ. ಇದೀಗ ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ ಮೂಲಕ ಹೊಸ ಆಫ್-ರೋಡ್ ಮಾದರಿಯನ್ನು ಪರಿಚಯಿಸುತ್ತಿದೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಡಿಫೆಂಡರ್ ಟ್ರೋಫಿ ಎಡಿಷನ್ ಎಸ್‍ಯುವಿಯು ಮಾದರಿಯು ಸ್ಟ್ಯಾಂಡರ್ಡ್ ಡಿಫೆಂಡರ್ ಎಸ್‍ಯುವಿಗಿಂತ ಪವರ್ ಫುಲ್ ಮತ್ತು ಹೆಚ್ಚಿನ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ ಮಾದರಿಯ ಬ್ಲ್ಯಾಕ್ ಮತ್ತು ಯೆಲ್ಲೋ ಬಣ್ಣಗಳ ಮಿಶ್ರಣವು ಡಿಫೆಂಡರ್ ವರ್ಕ್ಸ್ V8 ಟ್ರೋಫಿಯಿಂದ ಸ್ಫೂರ್ತಿ ಪಡೆದಿದೆ. ಹಳೆಯ ಲ್ಯಾಂಡ್ ರೋವರ್ ಲೋಗೋವನ್ನು ಡೋರುಗಳ ಮೇಲೆ ನೋಡುತ್ತೇವೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಆಫ್-ರೋಡಿಂಗ್‌ಗೆ ಸಂಬಂಧಿಸಿದಂತೆ, ಟ್ರೋಫಿ ಆವೃತ್ತಿಯು ಮುಂಭಾಗದ ಸ್ಕಿಡ್ ಪ್ಲೇಟ್, ನಿಯೋಜಿಸಬಹುದಾದ ಲ್ಯಾಂಡರ್ ನೊಂದಿಗೆ ರೂಫ್ ರ್ಯಾಕ್, ಮಣ್ಣಿನ ಫ್ಲಾಪ್‌ಗಳು ಮತ್ತು ಇಂಟಿಗ್ರೇಟೆಡ್ ಏರ್ ಕಂಪ್ರೆಸರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಇದು ವಿಂಚ್‌ಗಾಗಿ ಮೀಸಲಾದ ಸ್ಲಾಟ್‌ನೊಂದಿಗೆ ಬರುತ್ತದೆ. ಆದರೆ ನಿಜವಾದ ವಿಂಚ್ ಹೆಚ್ಚುವರಿ ಆಯ್ಕೆಯಾಗಿದೆ. ನಂತರ, ಇದು ಎಕ್ಸ್‌ಟೆಂಡೆಡ್ ಬ್ಲಾಕ್ ಎಕ್ಸ್‌ಟೀರಿಯರ್ ಪ್ಯಾಕ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ ಅದು ದೇಹಕ್ಕೆ ಸಾಕಷ್ಟು ಡಾರ್ಕ್ ಟ್ರಿಮ್ ಅನ್ನು ಸೇರಿಸುತ್ತದೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಈ ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ ಮಾದರಿಯಲ್ಲಿ ಏರ್ ಸಸ್ಪೆಂಕ್ಷನ್, ಕೋಲ್ಡ್ ಕ್ಲೈಮೇಟ್ ಪ್ಯಾಕ್, ಆಫ್-ರೋಡ್ ಪ್ಯಾಕ್, ಸುಧಾರಿತ ಆಫ್-ರೋಡ್ ಸಾಮರ್ಥ್ಯದ ಪ್ಯಾಕ್, ರಿಯರ್ ವ್ಯೂ ಮಿರರ್ ಕ್ಯಾಮೆರಾ ಸಿಸ್ಟಂ ಮತ್ತು ಟೋ ಹಿಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಇನ್ನು ಈ ಎಸ್‍ಯುವಿಯು ಬಿಲ್ಟ್‌ಮೋರ್ ಎಸ್ಟೇಟ್‌ನಲ್ಲಿ ಒಂದು ದಿನದ ಆಫ್-ರೋಡ್ ಟ್ರೋಫಿ ಪರೀಕ್ಷಿಸಲು ಅವಕಾಶವಿದೆ. 2022ರ ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಂನ ಈಸ್ಟ್ನರ್ ಕ್ಯಾಸಲ್‌ನಲ್ಲಿ ಇದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಬಹುದು.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಕ್ಲಾಸಿಕ್ 2021ರ ಕ್ಲಾಸಿಕ್ ಕ್ಯಾಮೆಲ್ ಟ್ರೋಫಿ ಲ್ಯಾಂಡಿಸ್ ಎಂಬ ವಿಶೇಷ ಸ್ಪರ್ಧೆಗಾಗಿ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ವಾಹನವನ್ನು ಈ ಹಿಂದೆ ಪರಿಚಯಿಸಿದ್ದರು. ಈ ಆಫ್-ರೋಡರ್ ನಲ್ಲಿ ಹೆಚ್ಚುವರಿ ಆಲ್-ಟೆರೈನ್ ಕಿಟ್‌ನಲ್ಲಿ ಫ್ರಂಟ್ ವಿಂಚ್, ಮಲ್ಟಿ-ಪಾಯಿಂಟ್ ಎಕ್ಸ್‌ಪೆಡಿಶನ್ ಕೇಜ್, ರೂಫ್ ರ್ಯಾಕ್, ಅಂಡರ್ಬಾಡಿ ಪ್ರೊಟೆಕ್ಷನ್, ಎ-ಬಾರ್, ಎಲ್ಇಡಿ ಸ್ಪಾಟ್‌ಲೈಟ್‌ಗಳು ಮತ್ತು ಮಡ್ ಟೆರೆಯೆನ್ ಟಯರ್ ಗಳಿವೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಡಿಫೆಂಡರ್ ಹಳೆಯ ಡಿಫೆಂಡರ್ ಅನ್ನು ಆಧರಿಸಿ ಮರು-ವಿನ್ಯಾಸಗೊಳಿಸಿದ ಡಿಫೆಂಡರ್ ವರ್ಕ್ಸ್ ವಿ8 ಲ್ಯಾಂಡ್ ರೋವರ್ ಕ್ಲಾಸಿಕ್ ಅಭಿವೃದ್ಧಿಪಡಿಸಿದೆ. ಟ್ರೋಫಿ ವಾಹನಗಳು ಆಫ್-ರೋಡ್ ಬಳಕೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸುವುದರ ಜೊತೆಗೆ ಹೆಚ್ಚುವರಿ ನವೀಕರಣಗಳನ್ನು ಹೊಂದಿದೆ. 90 ಮತ್ತು 110 ಸ್ಟೇಷನ್ ವ್ಯಾಗನ್ ಬಾಡಿ ವಿನ್ಯಾಸಗಳ ಮಿಶ್ರಣದಲ್ಲಿ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿಯನ್ನು ವಿನ್ಯಾಸಗೊಳಿಸಲಾಗಿದೆ

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಇದರಲ್ಲಿ 4x4 ಸಿಸ್ಟಂ, ಸಂಯೋಜಿತ ನ್ಯಾವಿಗೇಷನ್ ಮತ್ತು ಮೊಬೈಲ್ ಕನೆಕ್ಟಿವಿಟಿಯೊಂದಿಗೆ ಲ್ಯಾಂಡ್ ರೋವರ್ ಕ್ಲಾಸಿಕ್‌ನ ಕ್ಲಾಸಿಕ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ಅಳವಡಿಸಲಾಗಿದೆ. ಈ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಮಾದರಿಯು ಅಸಾಧಾರಣ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಆಫ್-ರೋಡ್ ಆಧಾರಿತ ಡಿಫೆಂಡರ್ ಟ್ರೋಫಿ ಎಡಿಷನ್ ಅನಾವರಣಗೊಳಿಸಿದ ಲ್ಯಾಂಡ್ ರೋವರ್

ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ 3.0 ಲೀಟರ್, ಆರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದು ಬಿಎಂಡಬ್ಲ್ಯು ಮೂಲದ ವಿ8 ಮೋಟಾರ್‌ನೊಂದಿಗೆ ಪಾದಾರ್ಪಣೆ ಮಾಡುತ್ತದೆ. ಈ ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
English summary
Off-Road Focused Land Rover Defender Trophy Edition Unveiled. Read In Kannada.
Story first published: Saturday, July 31, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X