ಐಷಾರಾಮಿ 2022ರ ಲೆಕ್ಸಸ್ ಎನ್ಎಕ್ಸ್ ಕಾರಿನ ಚಿತ್ರಗಳು ಬಹಿರಂಗ
ಐಷಾರಾಮಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಲೆಕ್ಸಸ್ ತನ್ನ ಎನ್ಎಕ್ಸ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಲೆಕ್ಸಸ್ ಎನ್ಎಕ್ಸ್ ಕಾರು ಇದೇ ತಿಂಗಳ 12 ರಂದು ಜಾಗತಿಕವಾಗಿ ಅನಾವರಣವಾಗಲಿದೆ. ಆದರೆ ಅನಾವರಣವಾಗವ ಮೊದಲೇ ಈ ಕಾರಿನ ಚಿತ್ರಗಳು ಬಹಿರಂಗವಾಗಿದೆ.

ಹೊಸ ಲೆಕ್ಸಸ್ ಎನ್ಎಕ್ಸ್ ಕಾರು ಕ್ಯಾಬಿನ್ ಸಮಗ್ರ ನವೀಕರಣವನ್ನು ಪಡೆದುಕೊಂಡಿದೆ. ಬಹಿರಂಗವಾದ ಚಿತ್ರಗಳಲ್ಲಿ ಹೊಸ ಎನ್‌ಎಕ್ಸ್ ಕಾರಿನಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿದೆ. ಲೆಕ್ಸಸ್ ಎನ್ಎಕ್ಸ್ ಕಾರು 'ಸ್ಪಿಂಡಲ್ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಸಣ್ಣ ಬದಲಾವಣೆಗಳನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿ ಎಲ್-ಆಕಾರದ ಟೈಲ್ ಲ್ಯಾಂಪ್‌ಗಳಿಗೆ ಒಂದು ಹೊಸ ಎಲ್‌ಇಡಿ ಸ್ಟ್ರಿಪ್‌ನೊಂದಿಗೆ ಮಧ್ಯದಲ್ಲಿ ಸೇರ್ಪಡೆಗೊಳ್ಳುತ್ತದೆ.

ಲೆಕ್ಸಸ್ ಎನ್ಎಕ್ಸ್ ಕಾರಿನ ಇಂಟಿರಿಯರ್ ಮಾರ್ಡನ್ ಲುಕ್ ಅನ್ನು ಹೊಂದಿದೆ. ಚಾಲಕ-ಕೇಂದ್ರಿತ ಕಾಕ್‌ಪಿಟ್‌ನಲ್ಲಿ ಡ್ರೈವರ್‌ನ ಡಿಸ್ ಪ್ಲೇ ಹೊಂದಿಕೊಂಡಂತೆ ದೊಡ್ಡ ಸೆಂಟರ್ ಟಚ್‌ಸ್ಕ್ರೀನ್ ಇದೆ. ಮತ್ತೊಂದೆಡೆ ಚಾಲಕನ ಡಿಸ್ ಪ್ಲೇ ಡಿಜಿಟಲ್ ಕನ್ಸೋಲ್ ಆಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಇದರ ಸೆಂಟರ್ ಕನ್ಸೋಲ್ ಸಹ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನು ಈ ಹೊಸ ಲೆಕ್ಸಸ್ ಎನ್ಎಕ್ಸ್ ಕಾರಿನಲ್ಲಿ ಕ್ಲೈಮೇಂಟ್ ಕಂಟ್ರೋಲ್, ಆಂಡಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಮತ್ತು ಎಸಿ ವೆಂಟ್ ಗಳನ್ನು ಹೊಂದಿರುತ್ತದೆ.

ಲೆಕ್ಸಸ್ ಎನ್ಎಕ್ಸ್ ಕಾರಿನ ಎಂಜಿನ್ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಈ ಎನ್‌ಎಕ್ಸ್ ಕಾರು ಟೊಯೊಟಾ ಆರ್‌ಎವಿ4 ಮಾದರಿಯಲ್ಲಿರುವ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎರವಲು ಪಡೆಯುವ ಸಾಧ್ಯತೆಯಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದರೊಂದಿಗೆ ಪ್ಲಗ್-ಇನ್ ಮತ್ತು ವಿ6 ಅನ್ನು ಸಹ ಪಡೆಯಬಹುದು, ಅದು ಈಗಾಗಲೇ ಇತರ ಟೊಯೊಟಾ ಮತ್ತು ಲೆಕ್ಸಸ್ ಮಾದರಿಗಳಲ್ಲಿ ಲಭ್ಯವಿದೆ. ಇದು ಸಾಫ್ಟ್ ರೋಡರ್ ಎಸ್‍ಯುವಿ ಮಾದರಿಯಾಗಿರುತ್ತದೆ. ಇದರಿಂದ ಇದರಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ,

ಭಾರತೀಯ ಮಾರುಕಟ್ಟೆಯಲ್ಲಿ ಲೆಕ್ಸಸ್ ತನ್ನ ಎಲ್‍ಸಿ 500ಹೆಚ್ ಸೆಡಾನ್‌ನ ಲಿಮಿಟೆಡ್-ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಲೆಕ್ಸಸ್‌ನಿಂದ ಪ್ರೀಮಿಯಂ ಸೆಡಾನ್‌ನ ಲಿಮಿಟೆಡ್ ಎಡಿಷನ್ ಏರ್-ರೇಸಿಂಗ್ ಏರೋಡೈನಾಮಿಕ್ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಲೆಕ್ಸಸ್ ಎಂಜಿನಿಯರ್‌ಗಳು ಮತ್ತು ಯೋಶಿಹೈಡ್ ಮೊರುಯಾ ಏರ್ ರೇಸ್ ಪೈಲಟ್ ನಡುವಿನ ಪಾಲುಗಾರಿಕೆಯಲ್ಲಿ ಈ ಹೊಸ ಲಿಮಿಟೆಡ್ ಎಡಿಷನ್ ಅನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುವ 2022ರ ಲೆಕ್ಸಸ್ ಎನ್‌ಎಕ್ಸ್ ಕಾರನ್ನು ಇದೇ ತಿಂಗಳ 12 ರಂದು ಜಾಗತಿಕವಾಗಿ ಅನಾವರಣವಾಗಲಿದೆ. ಈ ವೇಳೆ ಹೊಸ ಲೆಕ್ಸಸ್ ಎನ್ಎಕ್ಸ್ ಕಾರಿನ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.


Click it and Unblock the Notifications








