ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಟಿಯಾಗೋ ಹ್ಯಾಚ್‌ಬ್ಯಾಕ್‌ನ ಹೊಸ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ತನ್ನ ಟಿಯಾಗೋ ಲಿಮಿಟೆಡ್ ಎಡಿಷನ್ ಮಾದರಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್ ಮಾದರಿಯು ಹೊಸ ಬಾಡಿ ಗ್ರಾಫಿಕ್ಸ್, ಹೊಸ ವಿನ್ಯಾಸ ಅಂಶಗಳು ಮತ್ತು ಹೆಚ್ಚುವರಿ ಫೀಚರ್ ಗಳೊಂದಿಗೆ ಬರಲಿದೆ, ಆದರೆ ಎಂಜಿನ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಇನ್ನು ಈ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಅದೇ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರುತ್ತದೆ. ಈ ಎಂಜಿನ್ 85 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

2020ರಲ್ಲಿ ಟಾಟಾ ಮೋಟಾರ್ಸ್ ಟಿಯಾಗೊ ಕ್ಯಾಮೊ ಮತ್ತು ಟಿಯಾಗೊ ಡಾರ್ಕ್ ಅನ್ನು ಒಳಗೊಂಡಿರುವ ಕೆಲವು ಸ್ಪೆಷಲ್ ಎಡಿಷನ್ ಗಳ ಮಾದರಿ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿತ್ತು. ಮುಂಬರುವ ಮಾದರಿಯು ಈ ಎರಡು ಹೆಸರುಗಳಲ್ಲಿ ಒಂದನ್ನು ಬಳಸಬಹುದು.

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿದ್ದರೆ. ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಟರ್ಬೋಚಾರ್ಜ್ಡ್ ಆವೃತ್ತಿಯ ಬಿಡುಗಡೆಯ ಮಾಹಿತಿಯನ್ನು ಟಾಟಾ ಬಹಿರಂಗಪಡಿಸಿಲ್ಲ.

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಟಾಟಾ ಕಂಫನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ ಹಲವು ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಸಫಾರಿ, ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿ, ಆಲ್ಟ್ರೊಜ್ ಇವಿ ಮತ್ತು ಟೀಗೊರ್ ಇವಿ ಫೇಸ್‌ಲಿಫ್ಟ್ ಸೇರಿವೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಟಾಟಾ ಮೋಟಾರ್ಸ್ ಇತ್ತೀಚೆಗೆ ಕಳೆದ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಟಾಟಾ ಕಂಪನಿಯು ಕಳೆದ ತಿಂಗಳು 23,545 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಇದನ್ನು 2019ರ ಡಿಸೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.84 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್

ಹೊಸ ಟಾಟಾ ಟಿಯಾಗೋ ಲಿಮಿಟೆಡ್ ಎಡಿಷನ್ ಟೀಸರ್ ವೀಡಿಯೋದಲ್ಲಿ ನಾಳೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಅದನ್ನು ಹೊರತುಪಡಿಸಿ ಟಿಯಾಗೋ ಲಿಮಿಟೆಡ್ ಎಡಿಷನ್ ಮಾದರಿಯ ಬಗ್ಗೆ ಇತರ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

Most Read Articles

Kannada
English summary
Tata Tiago New Limited Edition Coming Tomorrow. Read In Kananda.
Story first published: Friday, January 29, 2021, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X