ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಮಹೀಂದ್ರಾ ಕಂಪನಿಯು ಸರಣಿಯಲ್ಲಿ ಬೊಲೆರೊ ಜನಪ್ರಿಯ ಮಾದರಿಯಾಗಿದೆ. ಅತಿ ಹೆಚ್ಚು ಮಾರಾಟವಾಗುವ ಯುಟಿಲಿಟಿ ವಾಹನಗಳ ಪಟ್ಟಿಯಲ್ಲಿ ಬೊಲೆರೊ ಅಗ್ರಸ್ಥಾನದಲ್ಲಿದೆ. ಇದೀಗ ಮಹೀಂದ್ರಾ ಕಂಪನಿಯು ಹೊಸ ಬೊಲೆರೊ ನಿಯೋ ಎಂಬ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ವರದಿಗಳ ಪ್ರಕಾರ, ಈ ಹೊಸ ಬೊಲೆರೊ ನಿಯೋ ಮಾದರಿಯು ಟಿಯುವಿ 300 ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಆಧರಿಸಿದೆ. ಈ ಹೊಸ ಬೊಲೆರೊ ನಿಯೋ ಎಸ್‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯು ಟೈಲ್‌ಗೇಟ್-ಮೌಂಟಡ್ ಸ್ಪೇರ್ ವ್ಹೀಲ್ ಕವರ್‌ನಲ್ಲಿ ಬೊಲೆರೊ ಹೆಸರನ್ನು ಮತ್ತು ಬೂಟ್-ಲಿಡ್ ನಲ್ಲಿ ನಿಯೋ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಈ ಹೊಸ ಹೊಸ ಬೊಲೆರೊ ನಿಯೋ ಮಾದರಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಬೊಲೆರೊ ನಿಯೋ ಅಥವಾ ಟಿಯುವಿ300 ಎಸ್‍ಯುವಿಯ ಬದಲಾವಣೆಗಳ ಕುರಿತು ಹೇಳುವುದಾದರೆ, ಇದರಲ್ಲಿ ಇಂಟಿಗ್ರೇಟೆಡ್ (ಡಿಆರ್‌ಎಲ್) ಡೇಟೈಮ್ ರನ್ನಿಂಗ್ ಲೈಟ್ಸ್, ನವೀಕರಿಸಿದ ಗ್ರಿಲ್, ಫಾಗ್ ಲ್ಯಾಂಪ್ ಯುನಿಟ್ ಮತ್ತು ಬಂಪರ್ ವಿನ್ಯಾಸದೊಂದಿಗೆ ನವೀಕರಿಸಿದ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಇನ್ನು ಬಾನೆಟ್ ವಿನ್ಯಾಸವು ಒಂದೇ ಆಗಿರುತ್ತದೆ. ಡಿ-ಪಿಲ್ಲರ್ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ಪಡೆಯುವುದರೊಂದಿಗೆ ಬೊಲೆರೊ ನಿಯೋದ ಸೈಡ್ ಪ್ರೊಫೈಲ್ ಬದಲಾಗಿದೆ. ಮುಂಬರುವ ಕಾಂಪ್ಯಾಕ್ಟ್-ಎಸ್‌ಯುವಿಯ ಅಲಾಯ್-ವ್ಹೀಲ್ ಗಳು ಸಹ ಬದಲಾಗಿವೆ ಮತ್ತು ಈಗ ಐದು-ಸ್ಪೋಕ್ ವಿನ್ಯಾಸವನ್ನು ಹೊಂದಿರುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಈ ಎಸ್‍ಯುವಿಯು ಒಟ್ಟಾರೆ ಬಾಕ್ಸಿ ವಿನ್ಯಾಸವು ಹೊಸ ಮಾದರಿಯಲ್ಲಿ ಬದಲಾಗದೆ ಉಳಿದಿದೆ. ಹೊಸ ಬೊಲೆರೊ ನಿಯೋ ಇಂಟಿರಿಯರ್ ನಲ್ಲಿ ಹಿಂದಿನ ಮಾದರಿಗಿಂತ ಕೆಲವು ನವೀಕರಣಗಳನ್ನು ಹೊಂದಿರುತ್ತದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ನವೀಕರಿಸಿದ ಕಾಂಪ್ಯಾಕ್ಟ್-ಎಸ್‌ಯುವಿ ಕ್ಯಾಬಿನ್‌ಗೆ ಹೊಸ ಲುಕ್ ಮತ್ತು ಪ್ರೀಮಿಯಂ ಅನುಭವವನ್ನು ನೀಡಲು ಸಾಕಷ್ಟು ಬದಲಾವಣೆಗಳನ್ನು ಮಾಡಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ನೊಂದಿಗೆ ನವೀಕರಿಸಿದ ಇನ್ಫೋಟೈನ್ಮೆಂಟ್ ಟಚ್-ಸ್ಕ್ರೀನ್ ಸಿಸ್ಟಂ ಅನ್ನು ಒಳಗೊಂಡಿರಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಹಿಂದಿನ ಮಾದರಿಯಲ್ಲಿದ್ದ ಕೀ ಲೆಸ್ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕರ ಸೀಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಫೀಚರ್ ಗಳನ್ನು ಇದರಲ್ಲಿಯು ಮುಂದುವರೆಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಈ ಹೊಸ ಕಾಂಪ್ಯಾಕ್ಟ್-ಎಸ್‌ಯುವಿಯಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 1.5-ಲೀಟರ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 240 ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಜನಪ್ರಿಯ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು ಮಾರಾಟವನ್ನು ಹೆಚ್ಚಿಸಲು ಮಹೀಂದ್ರಾ ಟಿವಿಯು300 ಅನ್ನು ಬೊಲೆರೊ ನಿಯೋ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಾಗುತ್ತಿದೆ. ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್-ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗ ಬಳಿಕ ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂ, ಹೋಂಡಾ ಡಬ್ಲ್ಯುಆರ್-ವಿ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Saturday, February 13, 2021, 12:47 [IST]
English summary
Mahindra Bolero Neo To Be Based on TUV300. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+