ಹೊಸ ಮಹಿಂದ್ರಾ ಮಾರಾಜೋ ಎಎಂಟಿ ಆವೃತ್ತಿಯ ಮಾಹಿತಿ ಬಹಿರಂಗ
ಮಹೀಂದ್ರಾ ಕಂಪನಿಯು ತನ್ನ ಮರಾಜೋ ಎಂಪಿವಿಯನ್ನು 2019ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಮಹಿಂದ್ರಾ ಮಾರಾಜೋ ಎಂಫಿವಿಯು ಬಿಡುಗಡೆಯಾದ ಆರಂಭದಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟಾವಾಗಿತ್ತು.

ಆದರೆ ನಂತರದ ದಿನಗಳಲ್ಲಿ ಇದರ ಬೇಡಿಕೆಯು ಕುಸಿಯತೊಡಗಿತ್ತು. ಈ ಮರಾಜೋ ಎಂಪಿವಿ ಒಂದೇ ಎಂಜಿನ್ ಆಯ್ಕೆ ಮತ್ತು ಸಿಂಗಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಮಾತ್ರ ನೀಡಲಾಗುತ್ತದೆ ಎಂದು ಪರಿಗಣಿಸಿ ಮಾರಾಟದಲ್ಲಿ ಇದು ಗಮನಾರ್ಹ ಸಾಧನೆಯಾಗಿದೆ. ಆದರೆ ಕ್ರಮೇಣ ಮಾರಾಟವು ಕುಸಿಯಲು ಪ್ರಾರಂಭಿಸಿತು. ಕಳೆದ 3 ತಿಂಗಳಲ್ಲಿ ಮರಾಜೋ ಎಂಪಿವಿಯ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ.

ಮಾರಾಟವನ್ನು ಹೆಚ್ಚಿಸಲು ಮಹಿಂದ್ರಾ ಮರಾಜೋ ಎಂಪಿವಿಯನ್ನು ಶೀಘ್ರದಲ್ಲೇ ಎಎಂಟಿ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಮಹಿಂದ್ರಾ ಮರಾಜೋ ಡೀಸೆಲ್ ಎಎಂಟಿ ಆವೃತ್ತಿಯ ಮಾಹಿತಿಯು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮಾಹಿತಿಯ ಪ್ರಕಾರ, ಹೊಸ ಮಹಿಂದ್ರಾ ಮರಾಜೋ ಎಎಂಟಿ ಆವೃತ್ತಿಯು ಎಂ2, ಎಂ4 ಪ್ಲಸ್ ಮತ್ತು ಎಂ6 ಪ್ಲಸ್ ರೂಪಾಂತಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ 7 ಸೀಟರ್ ಮತ್ತು 8 ಸೀಟರ್ ಆಯ್ಕೆಯು ಲಭ್ಯವಿರುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮರಾಜೋ ಎಂಪಿವಿಯಲ್ಲಿ 1.5 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,500 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಹಾಗೂ 1750 ರಿಂದ 2500 ಆರ್‌ಪಿಎಂನಲ್ಲಿ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಮಹಿಂದ್ರಾ ಮರಾಜೋ ಎಂಪಿವಿಯನ್ನು ಇದೆ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ ಎಎಂಟಿ ಆಯ್ಕೆಯೊಂದಿಗೆ ನೀಡಲಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಮಹಿಂದ್ರಾ ಮರಾಜೋ ಎಎಂಟಿ ವೆರಿಯೆಂಟ್ ನಲ್ಲಿ ಪವರ್ ಮತ್ತು ಇಕೋ ಎಂಬ ಎರಡೂ ಡ್ರೈವ್ ಮೋಡ್‌ಗಳನ್ನು ಹೊಂದಿರುತ್ತದೆ. ಪವರ್ ಮೋಡ್‌ನಲ್ಲಿ ಎಂಜಿನ್ 122 ಬಿಹೆಚ್ಪಿ ಪವರ್ ಉತ್ಪಾದಿಸಿದರೆ, ಇಕೋ ಮೋಡ್‌ನಲ್ಲಿ 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಇನ್ನು ಮಹಿಂದ್ರಾ ಮರಾಜೋ ಎಂಪಿವಿಯಲ್ಲಿ ಹೊಸ 1.5-ಲೀಟರ್ 'ಜಿ 15' ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಮರಾಜೋ ಎಂಪಿವಿಯಲ್ಲಿ ಅಳವಡಿಸಬಹುದ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಮಹೀಂದ್ರಾ ಕಂಪನಿಯ ಪೆಟ್ರೋಲ್ ಎಂಜಿನ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 162 ಬಿಹೆಚ್ಪಿ ಪವರ್ ಮತ್ತು 280 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸುವ ಸಾಧ್ಯತೆಯಿದೆ.

ಮಹೀಂದ್ರಾ ಮರಾಜೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಎಂಪಿವಿಯನ್ನು ಹೊಸ ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮಹೀಂದ್ರಾ ಸಜ್ಜಾಗುತ್ತಿದೆ.


Click it and Unblock the Notifications