ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ500

ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಎಕ್ಸ್‌ಯುವಿ ಕಾರುಗಳ ಸರಣಿಯಲ್ಲಿ ಹಲವು ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಹೊಸ ತಲೆಮಾರಿನ ಎಕ್ಸ್‌ಯುವಿ500 ಕಾರು ಮಾದರಿಯನ್ನೇ ಮಹೀಂದ್ರಾ ಎಕ್ಸ್‌ಯುವಿ700 ಮಾದರಿಯಾಗಿ ಮಾರಾಟ ಮಾಡುವ ನಿರ್ಧಾರ ಪ್ರಕಟಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯು ಎಕ್ಸ್‌ಯುವಿ700 ಬಿಡುಗಡೆ ನಂತರ ಕೆಲವು ತಿಂಗಳು ಕಾಲ ಮಾರಾಟದಿಂದ ಸ್ಥಗಿತಗೊಳ್ಳಲಿದೆ. ಪ್ರತಿಸ್ಪರ್ಧಿ ಕಾರು ಮಾದರಿಗಳಿಗಾಗಿ ಎಕ್ಸ್‌ಯುವಿ500 ಮಾದರಿಯಲ್ಲಿ ಕೆಲವು ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಮಹೀಂದ್ರಾ ಕಂಪನಿಯು ಸದ್ಯ ಬಿಡುಗಡೆಗೊಳಿಸಬೇಕಿರುವ ಎಕ್ಸ್‌ಯುವಿ500 ನ್ಯೂ ಜನರೇಷನ್ ಮಾದರಿಯನ್ನೇ ಹೊಸ ಬದಲಾವಣೆಗಳೊಂದಿಗೆ ಎಕ್ಸ್‌ಯುವಿ700 ಮಾದರಿಯಾಗಿ ಮತ್ತು ಎಕ್ಸ್‌ಯುವಿ500 ಮಾದರಿಯನ್ನು ಎಕ್ಸ್‌ಯುವಿ700 ಮಾದರಿಗಿಂತ ಕೆಳ ಸ್ಥಾನದಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯು 7 ಸೀಟರ್ ಸೌಲಭ್ಯವನ್ನು ಹೊಂದಿದ್ದರು ಹಿಂಬದಿ ಆಸನಗಳು ವಯಸ್ಕ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಹೀಗಾಗಿ ಎಕ್ಸ್‌ಯುವಿ700 ಮಾದರಿಯನ್ನು ವಿಸ್ತರಿತ ವೀಲ್ಹ್‌ಬೆಸ್ ಮೂಲಕ ಮೂರನೇ ಸಾಲಿನ ಆಸನವನ್ನು ಹೆಚ್ಚಿಸಿ ಅಭಿವೃದ್ದಿಗೊಳಿಸಲಾಗಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾದರಿಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸದ್ಯ ಲಭ್ಯವಿರುವಂತಹ 7 ಸೀಟರ್ ಸೌಲಭ್ಯವನ್ನು ತೆಗೆದುಹಾಕಿ ಆರಾಮದಾಯಕ ಕ್ಯಾಬಿನ್ ರೂಂ ಹೊಂದಿರುವ 5 ಸೀಟರ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಈ ಮೂಲಕ 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮಾದರಿಯನ್ನು ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಹೊಸ ಎಕ್ಸ್‌ಯುವಿ500 ಮಾದರಿಯನ್ನು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡಲಿದ್ದು, ಹೊಸ ಎಕ್ಸ್‌ಯುವಿ 500 ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ 300 ಎಂಎಂ ಉದ್ದಳತೆ ಕಡಿತಗೊಳ್ಳಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

4,200 ಎಂಎಂ ನಿಂದ 4,300 ಉದ್ದಳತೆ ಹೊಂದಲಿರುವ ಹೊಸ ಎಕ್ಸ್‌ಯುವಿ500 ಮಾದರಿಯು ಪ್ರತಿಸ್ಪರ್ಧಿಗಳಿಗೆ ಅನುಗುಣವಾಗಿ ಎಂಜಿನ್ ಆಯ್ಕೆ ಹೊಂದಲಿದ್ದು, ಹೊಸ ಆವೃತ್ತಿಯೊಂದಿಗೆ ಎಕ್ಸ್‌ಯುವಿ500 ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಕಳೆದ ವಾರವಷ್ಟೇ ಎಕ್ಸ್‌ಯುವಿ ಸರಣಿಯಲ್ಲಿ ಹೊಸದಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿಯೇ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌‌ಯುವಿ700 ಮಾದರಿಯ ಜೊತೆಗೆ ಎಕ್ಸ್‌ಯುವಿ900 ಎಸ್‌ಯುವಿ, ಎಕ್ಸ್‌ಯುವಿ900 ಕೂಪೆ ಎಕ್ಸ್‌ಯುವಿ400 ಮತ್ತು ಎಕ್ಸ್‌ಯುವಿ100 ಸೇರಿದಂತೆ ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

MOST READ: ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಲಿದೆ ಎಕ್ಸ್‌ಯುವಿ500

ಸ್ಥಗಿತಗೊಳ್ಳಲಿರುವ ಅಲ್ಟುರಾಸ್ ಜಿ4 ಸ್ಥಾನಕ್ಕಾಗಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ900 ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಸುಮಾರು 5 ಮೀಟರ್ ಉದ್ದಳತೆಯೊಂದಿಗೆ ಫುಲ್ ಸೈಜ್ ಮಾದರಿಯಾಗಿರುವ ಎಕ್ಸ್‌ಯುವಿ900 ಮಾದರಿಯು ಫಾರ್ಚೂನರ್, ಎಂಡೀವರ್ ಮತ್ತು ಗ್ಲೊಸ್ಟರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Wednesday, May 12, 2021, 8:45 [IST]
English summary
New Mahindra XUV500 To Re-Launch As Hyundai Creta Rival. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+