ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಕೋವಿಡ್ 19 ಎರಡನೇ ಅಲೆ ಭಾರತದಲ್ಲಿ ಭಾರೀ ಹಾನಿಯನ್ನುಂಟು ಮಾಡುತ್ತಿದೆ. ಕರೋನಾ ವೈರಸ್ ಸೋಂಕಿಗೆ ಒಳಗಾಗುತ್ತಿರುವವರು ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಆಕ್ಸಿಜನ್ ಸಿಗದೇ ಪ್ರಾಣ ಬಿಡುತ್ತಿದ್ದಾರೆ.

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಈ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲವರು ಕರೋನಾ ಸೋಂಕಿತರ ನೆರವಿಗೆ ಧಾವಿಸುತ್ತಿದ್ದಾರೆ. ಈಗ ರಾಜಸ್ಥಾನದ ಆರು ಜನ ಸ್ನೇಹಿತರು ತಮ್ಮ 4 ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ್ದಾರೆ. ಈ ಮೂಲಕ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಪರದಾಡುತ್ತಿರುವ ಕೋವಿಡ್ 19 ಸೋಂಕಿತರಿಗೆ ನೆರವಾಗುತ್ತಿದ್ದಾರೆ.

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಈ ಯುವಕರು ಮೊಬೈಲ್ ಆಸ್ಪತ್ರೆಗಳಾಗಿ ಬದಲಾಗಿರುವ ತಮ್ಮ ಕಾರುಗಳನ್ನು ಆಸ್ಪತ್ರೆಯ ಹೊರಗೆ ನಿಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಸೋಂಕಿತರು ತುರ್ತು ಪರಿಸ್ಥಿತಿಯಲ್ಲಿ ಈ ಕಾರುಗಳನ್ನು ಬಳಸಬಹುದು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಈ ಕಾರುಗಳಲ್ಲಿ ಆಕ್ಸಿಜನ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಸೋಂಕಿತರಿಗೆ ನೆರವಾಗಲು ಕಾರಿನ ಎಸಿಯನ್ನು ಸಹ ಆನ್ ಮಾಡಲಾಗುತ್ತದೆ. ಮೊಬೈಲ್ ಆಸ್ಪತ್ರೆಗಳಾಗಿ ಬದಲಾಗಿರುವ ನಾಲ್ಕು ಕಾರುಗಳಲ್ಲಿ ಒಂದು ಫೋರ್ಡ್ ಇಕೋಸ್ಪೋರ್ಟ್, ಒಂದು ಫೋಕ್ಸ್‌ವ್ಯಾಗನ್ ಪೊಲೊ ಸಹ ಸೇರಿದೆ.

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಇತರ ಎರಡು ಕಾರುಗಳು ಯಾವುವು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಯುವಕರು ಕಳೆದ ಕೆಲವು ವಾರಗಳಿಂದ ಕರೋನಾ ವೈರಸ್ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಅವರು ಪ್ರತಿದಿನ ಕನಿಷ್ಠ 5ರಿಂದ 6 ಜನರಿಗೆ ಸಹಾಯ ಮಾಡುತ್ತಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಈ ಯುವಕರು ರಾಜಸ್ಥಾನದ ಕೋಟಾದಲ್ಲಿ ಕರೋನಾ ವೈರಸ್ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಅವರು ಕೋಟಾದ ವಿವಿಧ ಭಾಗಗಳಿಂದ ಆಕ್ಸಿಜನ್ ಪಡೆಯುತ್ತಿದ್ದಾರೆ. ಆದರೆ ಆಕ್ಸಿಜನ್ ಪಡೆಯಲು ದೀರ್ಘಕಾಲ ಕಾಯಬೇಕಾಗುತ್ತದೆ ಎಂದು ಆ ಯುವಕರು ಹೇಳುತ್ತಾರೆ.

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಈ ಯುವಕರು ತಮ್ಮ ಸ್ವಂತ ಹಣವನ್ನು ಬಳಸಿ ಕರೋನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಹೀಗೆ ನೆರವು ನೀಡಲು ಅವರು ಬೇರೆಯವರಿಂದ ಯಾವುದೇ ನೆರವು ಪಡೆದಿಲ್ಲ. ಅವರು ಮುಂಬರುವ ದಿನಗಳಲ್ಲಿ ಆಂಬ್ಯುಲೆನ್ಸ್ ಖರೀದಿಸಲು ನಿರ್ಧರಿಸಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಈ ಮೂಲಕ ಈ ಯುವಕರು ಇನ್ನೂ ಹಲವಾರು ಜನರಿಗೆ ನೆರವಾಗಲು ನಿರ್ಧರಿಸಿದ್ದಾರೆ. ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ.

ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೋವಿಡ್ 19 ಸಮಸ್ಯೆಯಿಂದ ಜಗತ್ತು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದೆ ಎಂಬುದೇ ಎಲ್ಲರ ಆಶಯ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಆದರೆ ಈ ಸಂದಿಗ್ಧ ಪರಿಸ್ಥಿತಿಯು ನಿಜವಾದ ಹೀರೋಗಳನ್ನು ಹೊರ ತರುತ್ತಿದೆ. ಕೋಟಾದಲ್ಲಿ ಕರೋನಾ ವೈರಸ್ ಸೋಂಕಿತರಿಗೆ ನೆರವು ನೀಡುವ ಮೂಲಕ ಈ ಆರು ಜನ ಯುವಕರು ರಿಯಲ್ ಹೀರೋಗಳಾಗಿದ್ದಾರೆ. ಈ ರಿಯಲ್ ಹೀರೋಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Most Read Articles

Kannada
English summary
Rajasthan youths converts four cars into mobile hospitals. Read in Kannada.
Story first published: Friday, May 7, 2021, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X