5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಬಹುನೀರಿಕ್ಷಿತ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಮಹೀಂದ್ರಾ ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯನ್ನು ಆಧರಿಸಿರುವ ಎಕ್ಸ್‌ಯುವಿ700 ಮಾದರಿಯು ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಂಡಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಹೊಸ ಎಕ್ಸ್‌ಯುವಿ700 ಕಾರಿನ ಆರಂಭಿಕ ಮಾದರಿಗಳ ಬೆಲೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಹೊಸ ಕಾರು ಖರೀದಿಗಾಗಿ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗುತ್ತಿದ್ದು, ಇದೀಗ ಹೊಸ ಕಾರಿನ ಅಧಿಕೃತ ಬಣ್ಣಗಳ ಕುರಿತಂತೆ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಎಕ್ಸ್‌ಯುವಿ700 ಆವೃತ್ತಿಯು ಎಂಜಿನ್, ಗೇರ್‌ಬಾಕ್ಸ್ ಆಯ್ಕೆ ಆಧರಿಸಿ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ವಿವಿಧ ವೆರಿಯೆಂಟ್‌ಗಳಲ್ಲಿ ಎಲೆಕ್ಟ್ರಿಕ್ ಬ್ಲ್ಯೂ, ಎವರೆಸ್ಟ್ ವೈಟ್, ಡ್ಯಾಜಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ರೆಡ್ ರೇಂಜ್ ಬಣ್ಣಗಳ ಆಯ್ಕೆ ಹೊಂದಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಹೊಸ ಕಾರಿನಲ್ಲಿರುವ ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್‌‌ಗಳು ಗ್ರಾಹಕರ ಬೇಡಿಕೆಯೆಂತೆ 5 ಸೀಟರ್‌ ಮತ್ತು 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಎಂಎಕ್ಸ್ ಸೀರಿಸ್‌ಗಿಂತಲೂ ಎಎಕ್ಸ್ ಸೀರಿಸ್ ಆವೃತ್ತಿಗಳು ಹೆಚ್ಚು ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿವೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಎಕ್ಸ್‌ಯುವಿ700 ಹೊಸ ಕಾರಿನ ಆರಂಭಿಕ ಆವೃತ್ತಿಯ ಬೆಲೆಯನ್ನು ಈಗಾಗಲೇ ಬಹಿರಂಗ ಪಡಿಸಲಾಗಿದ್ದು, ಆರಂಭಿಕ ಎಂಎಕ್ಸ್ ಆವೃತ್ತಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆ ಹೊಂದಿರುವುದು ಖಚಿತವಾಗಿದೆ. ಆದರೆ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಎಕ್ಸ್ ಮಾದರಿಗಳು ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.69 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಟಾಪ್ ಎಂಡ್‌ನಲ್ಲಿರುವ ಪ್ರಮುಖ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ದರ ಶ್ರೇಣಿಯಲ್ಲಿ ಹೊಸ ಕಾರನ್ನು ಆಯ್ಕೆ ಮಾಡಬಹುದಾಗಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಗಳಲ್ಲಿ MX ವೆರಿಯೆಂಟ್ ನಂತರ AX3, AX5 ಮತ್ತು AX7 ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಆರಂಭಿಕ ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, ಇದು 5 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆಯೆಂತೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಎಎಕ್ಸ್3 ವೆರಿಯೆಂಟ್‌ಗಳು ಐದು ಆಸನ ಸೌಲಭ್ಯವನ್ನು ಮಾತ್ರ ಹೊಂದಿದ್ದು, ಇದರಲ್ಲೂ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಆದರೆ ಈ ರೂಪಾಂತರದಲ್ಲಿ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಲಭ್ಯವಿರಲಿದೆಯೆಂತೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಖರೀದಿ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿರುವ ಎಎಕ್ಸ್5 ಮಾದರಿಯ ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಬಹುದಾಗಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಇನ್ನುಳಿದಂತೆ ಎಎಕ್ಸ್7 ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಏಳು ಆಸನ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿರುವರಿಯಾಗಿ ಹಲವಾರು ಸುಧಾರಿತ ಫೀಚರ್ಸ್‌ಗಳು ಜೋಡಣೆ ಮಾಡಲಿದೆಯೆಂತೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

5 ಬಣ್ಣಗಳ ಆಯ್ಕೆಗಳೊಂದಿಗೆ 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ Mahindra XUV700

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

Article Published On: Thursday, September 16, 2021, 18:01 [IST]
English summary
New mahindra xuv700 suv colour option revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+