ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಕಾರುಗಳಿವು
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿ ವೈವಿಧ್ಯಮಯ ಮಾದರಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಮಾರುತಿ ಸುಜುಕಿ ಭಾರತದಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಹೊಸ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದಲ್ಲದೇ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ವಿಟಾರಾ ಬ್ರೆಝಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಸಿಎನ್‌ಜಿ ಮಾದರಿಗಳಾಗಿ ಬಿಡುಗಡೆಗೊಳಿಸಲಿದೆ. ಈ ಮೂರು ಸಿಎನ್‌ಜಿ ಮಾದರಿಗಳು ಈ ವರ್ಷದ ಹಬ್ದದ ಸೀಸನ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಾರುತಿ ಸೆಲೆರಿಯೊ
ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಮಾರುತಿ ಸೆಲೆರಿಯೊ ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು.

ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸೆಲೆರಿಯೊ ಕಾರು ಇತ್ತೀಚೆಗೆ ಟಿವಿಸಿ ಚಿತ್ರೀಕರಣದ ವೇಳೆ ಕಾಣಿಸಿಕೊಂಡಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇದನ್ನು ತಯಾರಿಸಿದೆ. .

ಈ ಹೊಸ ಕಾರಿನಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗುತ್ತದೆ, ಇದರಲ್ಲಿ ಹೊಸ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು, ಈ ಎಂಜಿನ್ 83 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದರೊಂದಿಗೆ 1.0ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಬಹುದು. ಈ ಎಂಜಿನ್ 68 ಬಿಹೆಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಲ್ಲಾ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಮಾರುತಿ ಸ್ವಿಫ್ಟ್ ಸಿಎನ್‌ಜಿ ಮತ್ತು ಸ್ವಿಫ್ಟ್ ಡಿಜೈರ್ ಸಿಎನ್‌ಜಿ
ಓ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ ಸಿಎನ್‌ಜಿ ಮಾದರಿಗಳಲ್ಲಿ 1.2 ಎಲ್ ಡ್ಯುಯಲ್ ಜೆಟ್ ಕೆ 1 ಸಿ ಪೆಟ್ರೋಲ್ ಎಂಜಿನ್ ನೊಂದಿಗೆ ಸಿಎನ್ ಜಿ ಕಿಟ್ ಅನ್ನು ಒಳಗೊಂಡಿರುತ್ತದೆ. ಇದು 6000 ಆರ್ಪಿಎಂನಲ್ಲಿ 70 ಬಿಹೆಚ್‍ಪಿ ಪವರ್ ಮತ್ತು 4000 ಆರ್ಪಿಎಂನಲ್ಲಿ 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸಿಎನ್‌ಜಿ ಮೋಡ್‌ನಲ್ಲಿ 11 ಬಿಹೆಚ್‍ಪಿ ಪವರ್ ಮತ್ತು 18 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಪೆಟ್ರೋಲ್ ಯುನಿಟ್ 81 ಬಿಎಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಎರಡೂ ಸಿಎನ್‌ಜಿ ಮಾದರಿಗಳು ಇಂಟಿಲಿಜನ್ಸ್ ಇಂಜೆಕ್ಷನ್ ಸಿಸ್ಟಂ ಮತ್ತು ಇಸಿಯು ಗಳೊಂದಿಗೆ ಪ್ರಯೋಜನ ಪಡೆಯುತ್ತವೆ.

ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ
ವಿಟಾರಾ ಬ್ರೆಝಾ ಎಸ್‍ಯುವಿಯು 1.4ಎಲ್ ಕೆಎಲ್15ಬಿ ಪೆಟ್ರೋಲ್ ಇಂಜಿನ್‌ನೊಂದಿಗೆ ಫ್ಯಾಕ್ಟರಿ ಅಳವಡಿಸಿದ ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಪವರ್ ಮತ್ತು ಟಾರ್ಕ್ ಅಂಶಗಳು ಸಣ್ಣ ಕುಸಿತಕ್ಕೆ ಸಾಕ್ಷಿಯಾಗುತ್ತವೆ. ಈ ಸಿಎನ್‌ಜಿ ಎಸ್‍ಯುವಿಯು 91 ಬಿಹೆಚ್‍ಪಿ ಪವರ್ ಮತ್ತು 122 ಎಮ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್ ಜಿ ಕಿಟ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರಬಹುದು,

ಇತರ ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಂತೆಯೇ, ಇದು ಎರಡು ಪರಸ್ಪರ ಅವಲಂಬಿತ ಇಸಿಯು ಮತ್ತು ಇಂಟಿಲಿಜೆಂಟ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿರುತ್ತದೆ. ಹೆಚ್ಚುವರಿ ಸಿಎನ್‌ಜಿ ಕಿಟ್‌ನೊಂದಿಗೆ, ವಾಹನದ ಒಟ್ಟಾರೆ ತೂಕ ಹೆಚ್ಚಾಗುತ್ತದೆ. ಇನ್ನು ಸಸ್ಪೆಂಕ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಹ ಪರಿಷ್ಕರಿಸಬಹುದು.ಕಾರು ತಯಾರಕ ತನ್ನ ಎಸ್-ಸಿಎನ್ ಜಿ ವಾಹನಗಳನ್ನು ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ, ಎಂಜಿನ್ ಬಾಳಿಕೆ, ಅನುಕೂಲತೆ ಮತ್ತು ಮೈಲೇಜ್ ನೀಡಲು ವಿನ್ಯಾಸಗೊಳಿಸಲಾಗಿದೆ" ಎಂದು ಹೇಳಲಾಗುತ್ತಿದೆ,

ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ರೂಪಾಂತರದ ಬಿಡುಗಡೆ ವಿವರಗಳನ್ನು ಕಾರ್ ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ. ಈ ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಮಾರುತಿ ಸುಜುಕಿ ವಿಟಾರಾ ಬ್ರೆಝಾ ಸುರಕ್ಷಾತಾ ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದುಕೊಂಡ ಮಾದರಿಯಾಗಿದೆ.


Click it and Unblock the Notifications