ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಶೀಘ್ರದಲ್ಲೇ ತನ್ನ ಅತ್ಯಂತ ಜನಪ್ರಿಯ ಹ್ಯಾಚ್ ಬ್ಯಾಕ್ ವ್ಯಾಗನ್‍ಆರ್ ಕಾರಿನ ಹೊಸ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಪೆಷಲ್ ಎಡಿಷನ್ ಮಾದರಿಯನ್ನು ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಎಂದು ಕರೆಯಲಾಗುತ್ತದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಹೊಸ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯು ವಿ ಟ್ರಿಮ್ ಅನ್ನು ಆಧರಿಸಿರುತ್ತದೆ. ಈ ಹೊಸ ಎಡಿಷನ್ ಅನ್ನು ವ್ಯಾಗನ್‍ಆರ್ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಕೆಲವು ಕಾಸ್ಮೆಟಿಕ್ ಬದಲಾವಣಗಳು ಮತ್ತು ಹೆಚ್ಚುವರಿ ಫೀಚರ್ಸ್ ಗಳನ್ನು ಪಡೆಯುತ್ತದೆ. ಹೊರಭಾಗದಲ್ಲಿ ಹೊಸ ಎಢಿಷನ್ ಮೇಲಿನ ಗ್ರಿಲ್, ಬ್ಯಾಕ್ ಡೋರ್, ಫಾಗ್ ಲ್ಯಾಂಪ್ ಮತ್ತು ನಂಬರ್ ಪ್ಲೇಟ್‌ನಲ್ಲಿ ಕ್ರೋಮ್ ಅಲಂಕರಣವನ್ನು ಹೊಂದಿರುತ್ತದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಇನ್ನು ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಮುಂಭಾಗ ಮತ್ತು ಹಿಂಭಾಗದ ಬಂಪರ್ ಪ್ರೊಟೆಕ್ಟರ್ ಜೊತೆಗೆ ಸೈಡ್ ಸ್ಕರ್ಟ್‌ಗಳು, ಬ್ಲ್ಯಾಕ್ ಬಾಡಿ ಸೈಡ್ ಮೋಲ್ಡಿಂಗ್ ಮತ್ತು ವ್ಹೀಲ್ ಆರ್ಚ್ ಕ್ಲಾಡಿಂಗ್ ಅನ್ನು ಒಳಗೊಂಡಿದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಈ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಒಳಭಾಗದಲ್ಲಿ ಕಾರ್ ಚಾರ್ಜರ್ ಎಕ್ಸ್‌ಟೆಂಡರ್, ಟ್ರಂಕ್ ಆರ್ಗನೈಸರ್ ಮತ್ತು ಡಿಜಿಟಲ್ ಏರ್ ಇನ್ಫ್ಲೇಟರ್ ಅನ್ನು ಹೊಂದಿರುತ್ತದೆ. ವೈಶಿಷ್ಟ್ಯದ ಮುಂಭಾಗದಲ್ಲಿ, ವಿಶೇಷ ಮಾದರಿಯು ವಿ ಟ್ರಿಮ್‌ನಲ್ಲಿ ನೀಡಲಾದ ಎಲ್ಲಾ ಫಿಟ್‌ಮೆಂಟ್‌ಗಳೊಂದಿಗೆ ಬರುತ್ತದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಇದರಲ್ಲಿ ಕಪ್ಪು ಬಣ್ಣದ ಬಿ-ಪಿಲ್ಲರ್, ಬಾಡಿ ಕಲರ್ ವಿಂಗ್ ಮಿರರ್ ಮತ್ತು ಡೋರ್ ಹ್ಯಾಂಡಲ್, ವೀಲ್ ಕವರ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಪವರ್ ಅಡ್ಜಸ್ಟಬಲ್ ವಿಂಗ್ ಮಿರರ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ, 60:40 ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟುಗಳು, ಬ್ಲೂಟೂತ್ ಮತ್ತು ಯುಎಸ್‌ಬಿ ಕನೆಕ್ಟಿವಿಟಿಯೊಂದಿಗೆ ರಿಯರ್ ವ್ಯೂ ಮಿರರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಆಡಿಯೋ ಸಿಸ್ಟಂ ಒಳಗೊಂಡಿರುತ್ತದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಇನ್ನು ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್1.0 ಎಲ್ 3-ಸಿಲಿಂಡರ್ ಮತ್ತು 1.2 ಎಲ್ 4-ಸಿಲಿಂಡರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರುತ್ತದೆ. ಈ ಎಕ್ಸ್‌ಟ್ರಾ ಎಡಿಷನ್ ಡೀಸೆಲ್ ಎಂಜಿನ್ ಗಳನ್ನು ಹೊಂದಿರುವುದಿಲ್ಲ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಇದರಲ್ಲಿ 1.0 ಎಲ್ 3-ಸಿಲಿಂಡರ್ ಎಂಜಿನ್ 68 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು 1.2 ಎಲ್ 4-ಸಿಲಿಂಡರ್ ಎಂಜಿನ್ 83 ಬಿಹೆ‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಷನ್ ಹೊಂದಬಹುದು. ಸಣ್ಣ ಸಾಮರ್ಥ್ಯದ ಗ್ಯಾಸೋಲಿನ್ ಎಂಜಿನ್ 22.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು ದೊಡ್ಡ ಸಾಮರ್ಥ್ಯದ ಎಂಜಿನ್ 21 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಹೊಸ ವ್ಯಾಗನ್‍ಆರ್ ಮಾದರಿಯು ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗುತ್ತಿದೆ, ಈ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಕಾರಿನ ಮುಂಭಾಗದ ಹೊಸ ಫಾಸಿಕವನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಸ್ಪ್ಲಿಟ್-ಸ್ಟೈಲ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದ್ದು, ಡಿಆರ್‌ಎಲ್‌ಗಳನ್ನು ಮೇಲ್ಭಾಗದಲ್ಲಿ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಕೆಳಭಾಗದಲ್ಲಿ ಇರಿಸಲಾಗಿದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಹೊಸ ವ್ಯಾಗನ್‍ಆರ್ ಕಾರಿನಲ್ಲಿ ಫಾಗ್ ಲ್ಪಾಂಪ್ ಯುನಿಟ್ ಗಳನ್ನು ಸಹ ಹೊಂದಿದೆ, ಇವುಗಳನ್ನು ಹೆಡ್‌ಲ್ಯಾಂಪ್ ಯುನಿಟ್ ಗಳ ಬಂಪರ್‌ನ ಕೆಳಗೆ ಇಡಲಾಗುತ್ತದೆ. ಫಾಗ್ ಲ್ಯಾಂಪ್ ಗಳನ್ನು ರೇಡಿಯೇಟರ್ ಗ್ರಿಲ್‌ನಲ್ಲಿ ಸಂಯೋಜಿಸಲಾಗಿದೆ. ಗ್ರಿಲ್‌ನ ಮೇಲಿನ ವಿಭಾಗವು ಡಿಆರ್‌ಎಲ್‌ಗಳನ್ನು ನೀಡಲಾಗಿದೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಈ ಕಾರಿನ ಸೈಡ್ ಪ್ರೊಫೈಲ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವ್ಯಾಗನ್ಆರ್ ಮಾದರಿಗೆ ಹೋಲುತ್ತದೆ. ಹಿಂಭಾಗದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗೊಳಿಸುವಾಗ ಈ ಎಲೆಕ್ಟ್ರಿಕ್ ಆವೃತ್ತಿಯು ಉತ್ತಮ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಅಧಿಕ ಮೈಲೇಜ್, ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್

ಮಾರುತಿ ಸುಜುಕಿ ಕಂಪನಿಯು ತನ್ನ ಮುಂದಿನ ಮಾದರಿಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಮಾರುತಿ ಸೆಲೆರಿಯೊ ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇನ್ನು ಹೊಸ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

Article Published On: Wednesday, August 4, 2021, 10:14 [IST]
English summary
New maruti wagonr xtra edition expected to be launch soon with some changes details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+